ಬೆಂಗಳೂರು :-ಹಲವು ಸಿನಿಮಾ ನಟರು ಮನೆಯಲ್ಲೇ ಕುಳಿತು ಲಾಕ್ ಡೌನ್ ಮಜಾ ತೆಗೆದುಕೊಂಡ್ರೆ ಪಂಚರಂಗಿ ಕ್ಯಾತಿಯ ಧೂದ್ ಪೇಡ ದಿಗಂತ್ ತೊಂದರೆಗೊಳಗಾದವರಿಗೆ ಸಹಾಯ ಮಾಡುವ ಮೂಲಕ ಕೊರೋನಾ ವಾರಿಯರ್ ಆಗಿದ್ದಾರೆ.

ಹೌದು ದಿಗಂತ್ ಬೈಕ್ನಲ್ಲಿ ಮನೆ ಮನೆಗೆ ತೆರಳಿ ಔಷಧಿ ವಿತರಣೆ ಮಾಡುತ್ತಿದ್ದಾರೆ. ರೈಡರ್ಸ್ ರಿಪಬ್ಲಿಕ್ ಮೋಟಾರ್ ಕ್ಲಬ್ ನೇತೃತ್ವದಲ್ಲಿ ಯತೀಶ್ ಮತ್ತು ದಿಗಂತ್ ತಂಡ ಈ ಮಹತ್ವದ ಕಾರ್ಯಕ್ಕೆ ಕೈಹಾಕಿದೆ.

ತಂಡದ ಸದಸ್ಯರು ಮನೆಮನೆಗಳಿಗೆ ತೆರಳಿ ಅಗತ್ಯವಿರುವವಿರಗೆ ಔಷಧಿ ವಿತರಣೆ ಮಾಡುತ್ತಿದ್ದಾರೆ. ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಿಗೆ ಬೈಕ್ ಗಳ ಮೂಲಕ ತೆರಳಿ ಅಗತ್ಯವಿರುವವರಿಗೆ ಔಷಧಿಯ ನೆರವು ನೀಡುತ್ತಿದ್ದಾರೆ.