ಭಟ್ಕಳ ಮೂಲದ ಶಂಕಿತ ಭಯೋತ್ಪಾದಕನ ಪತ್ನಿ ವಿಸಾ ರದ್ದು-ಭಟ್ಕಳದಿಂದ ಪಾಕಿಸ್ತಾನಕ್ಕೆ ಕಳುಹಿಸಿದ ಗೃಹ ಇಲಾಖೆ!

1587

ಕಾರವಾರ :- 2015 ರಲ್ಲಿ ಬೆಂಗಳೂರು ಚರ್ಚ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾಗಿದ್ದ ಭಟ್ಕಳ ಮೂಲದ ಶಂಕಿತ ಭಯೋತ್ಪಾದಕ ಅಫಾಕ್ ಲಂಕಾ ಪತ್ನಿ ಅರ್ಸಲ ಅಬೀರ್ ವಿಸಾವನ್ನು ರದ್ದು ಪಡಿಸಿದ ಕೇಂದ್ರ ಗೃಹ ಇಲಾಖೆ ಆಕೆಯನ್ನು ಪಾಕಿಸ್ತಾನಕ್ಕೆ ಮರಳಿ ಕಳುಹಿಸಿದೆ.

ಒಂದು ತಿಂಗಳ ಹಿಂದೆ ಪಾಕಿಸ್ತಾನ ಕ್ಕೆ ತೆರಳುವಂತೆ
ಅರ್ಸಲ ಅಬೀರ್ ಗೆ ನೋಟಿಸ್ ಅನ್ನು ನೀಡಿತ್ತು.
2006 ರಿಂದ ದೀರ್ಘ ಅವಧಿ ವಿಸಾ ಪಡೆದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮೂವರು ಮಕ್ಕಳೊಂದಿಗೆ ವಾಸವಿದ್ದ ಅರ್ಸಲ ಅಬೀರ್ ಮೂಲತಹಾ ಪಾಕಿಸ್ತಾನದವಳಾಗಿದ್ದು ದುಬೈ ನಲ್ಲಿ ಭಟ್ಕಳದ ಅಫಾಕ್ ಲಂಕಾ ರನ್ನು ವಿವಾಹವಾಗಿದ್ದಳು.

ನಂತರ ಪಾಕಿಸ್ತಾನದಲ್ಲಿ ಇಬ್ಬರೂ ಕೆಲವು ವರ್ಷ ನೆಲಸಿ ನಂತರ ಭಟ್ಕಳದ ಆಜಾದ್ ನಗರದಲ್ಲಿ ಯುನಾನಿ ವೈದ್ಯಕೀಯ ಚಿಕಿತ್ಸಾ ಕೇಂದ್ರ ತೆರೆದಿದ್ದ .

ಈ ವೇಳೆ ಬೆಂಗಳೂರಿನ ಚರ್ಚ ಬ್ಲಾಸ್ಟ್ ಪ್ರಕರಣದಲ್ಲಿ ಆರೋಪಿಯಾಗಿ ಬೆಂಗಳೂರು ಸಿಸಿಬಿ ಪೊಲೀಸರು ಬಂದಿಸಿದ್ದರು.ಇನ್ನು ಪತ್ನಿ ಹಾಗೂ ಈತನ ಖಾತೆಗೆ ಪಾಕಿಸ್ತಾನದ ಕೆಲವು ನಿಷೇಧಿತ ಸಂಘಟನೆಗಳು ಹಣ ವರ್ಗಾವಣೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಅರ್ಸಲ ಅಬೀರ್ ನನ್ನು ಕೂಡ ತನಿಖೆ ನಡರಸಲಾಗಿತ್ತು.ಇನ್ನು
ದೇಶದ ಭದ್ರತಾ ದೃಷ್ಟಿಯಿಂದ ಕೇಂದ್ರ ಗೃಹ ಇಲಾಖೆ ಈಕೆಯ ವಿಸಾ ವನ್ನು ರದ್ದು ಪಡಿಸಿದ್ದು ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟಿದೆ.




Leave a Reply

Your email address will not be published. Required fields are marked *