BREAKING NEWS
Search

ಬೀದರ್ ನಲ್ಲಿ 64 ಜನರಿಗೆ ಕರೋನಾ ಪಾಸಿಟಿವ್! ನಾಲ್ಕು ಬಲಿ

221

ಬೀದರ್ :- ಗಡಿ ಜಿಲ್ಲೆ ಬೀದರ್ ನಲ್ಲಿ ಇಂದು ನಾಲ್ವರ ಬಲಿ ಪಡೆದಿದೆ.ಬೀದರ್ ಪಟ್ಟಣದ 58 ವರ್ಷದ ಮಹಿಳೆ, ಬಸವಕಲ್ಯಾಣ ತಾಲೂಕಿನ 58 ವರ್ಷದ ವ್ಯಕ್ತಿ ಹಾಗೂ ಹುಮ್ನಬಾದ್ ತಾಲೂಕಿನ 65 ವೃದ್ಧೆ, ಭಾಲ್ಕಿ ತಾಲೂಕಿನ 72 ವರ್ಷದ ವೃದ್ಧ ಕೊರೋನಾ ಗೆ ಬಲಿಯಾಗಿದ್ದಾರೆ.

ಉಸಿರಾಟದ ಸಮಸ್ಯೆ ಹಾಗೂ ಜ್ವರದಿಂದ ಬಳಲಿ ಸಾವನ್ನಪ್ಪಿದ ನಾಲ್ಕು ಜನರಿಗೆ ಇಂದು ಕೊರೋನಾ ಪಾಸಿಟಿವ್ ಧೃಡವಾಗಿದೆ.

ನಾಲ್ವರ ಬಲಿಯೊಂದಿಗೆ ಇಂದು 64 ಜನಕ್ಕೆ ಕೊರೋನಾ ಪಾಸಿಟಿವ್ ಧೃಡವಾಗಿದೆ.

ಬೀದರ್ ನಲ್ಲಿ 27, ಭಾಲ್ಕಿಯಲ್ಲಿ 10, ಔರಾದ್ ನಲ್ಲಿ 10, ಬಸವಕಲ್ಯಾಣದಲ್ಲಿ 10, ಹುಮ್ನಬಾದ್ ನಲ್ಲಿ 7 ಜನಕ್ಕೆ ಪಾಸಿಟಿವ್ ಧೃಡವಾಗಿದೆ.
ಪ್ರಾಥಮಿಕ ಹಾಗೂ ಕಂಟೈನ್ಮಟ್ ಏರಿಯಾ ಸಂಪರ್ಕದಿಂದಾಗಿ ಸೋಂಕು ಧೃಡವಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3949ಕ್ಕೆ ಏರಿಕೆಯಾಗಿದ್ದು ಇದರಲ್ಲಿ 3002 ಜನ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದ್ದಾರೆ.

ಇನ್ನು 820 ಜನರಿಗೆ ಸೋಂಕು ಸಕ್ರಿಯವಾಗಿದ್ದು ಇಲ್ಲಿಯವರೆಗೆ ಜಿಲ್ಲೆಯಲ್ಲಿ 123 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ವರದಿ:- ಪ್ರದೀಪ್.ಜಿ.ಸಿಂಧನಕೇರಾ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ