ಪ್ರಣಬ್ ಮುಖರ್ಜಿ ಬೆನ್ನಿಗಿತ್ತು ಬೀದರ್ ನ ದೈವ ಶಕ್ತಿ…!

703

ಬೀದರ್ :- ಮಾಜಿ ರಾಷ್ಟ್ರಪತಿ ಪ್ರಣಬ ಮುಖರ್ಜಿ ಅವರಿಗೆ ರಾಜ್ಯದ ನಂಟು ರಾಜಕೀಯವಾಗಿ ಅಷ್ಟೇ ಅಲ್ಲ ಅವರು ಅತೀಯಾಗಿ ನಂಬಿದ್ದ ದಣೆವರು ಬೀದರ್ ನ ರೇಕುಳಗಿ ಶಂಭುಲಿಂಗೇಶ್ವರ. ಎಷ್ಟರ ಮಟ್ಟಿಗೆ ಅಂದ್ರೆ ಯುಪಿಎ ಅಭ್ಯರ್ಥಿಯಾಗಿ ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲೆ ಇತ್ತ ಅವರ ಕುಟುಂಬಸ್ಥರು ಶ್ರೀ ಶಂಭುಲಿಂಗೇಶ್ವರ ಆಸ್ತಾನದಲ್ಲಿ ವಿಶೇಷ ಪೂಜೆ ಮಾಡಿದ್ದು ಈಗ ನೆನಪು ಮಾತ್ರ.

ಗುರುಜೀ ಜೊತೆ ಪ್ರಣಬ್ ಮುಖರ್ಜಿ

ಅದು 2012 ರ ಜೂನ್ 28 ರಂದು ಭಾರತದ ರಾಷ್ಟ್ರಪತಿ ಹುದ್ದೆಗೆ ಕಾಂಗ್ರೆಸ್ ನ ಹಿರಿಯ ನಾಯಕ ಪ್ರಣಬ್ ಮುಖರ್ಜಿ ಅವರು ನಾಮಪತ್ರ ಸಲ್ಲಿಸುವ ಶುಭ ಘಳಿಗೆ. ಬೆಳಿಗ್ಗೆ 11 ಗಂಟೆಗೆ ಅತ್ತ ಪ್ರಣಬ ಮುಖರ್ಜಿ ಅವರು ನಾಮಪತ್ರ ಸಲ್ಲಿಸಿದ್ರೆ ಅದೇ ವೇಳೆಯಲ್ಲಿ ಅವರ ಸೋಸೆ ಚಿತ್ರಲೇಖಾ ಹಾಗೂ ಮೊಮ್ಮಗ ಅರ್ಜುನ್ ಅವರು ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ರೇಕುಳಗಿ ಗ್ರಾಮದ ಶಂಭುಲಿಂಗೇಶ್ವರ ಸನ್ನಿಧಿಯಲ್ಲಿ ಪೂಜಾ ವಿಧಿ ವಿಧಾನಗಳು ನಡೆಸಿದ್ದರು. ಈ ವೇಳೆಯಲ್ಲಿ ಪ್ರಣಬ ಅವರ ಅನುಪಸ್ಥಿತಿಯಲ್ಲಿ ತಮಿಳನಾಡು ಮೂಲದ ಆಗಿನ ಸಂಸದ ಹಾರುಣ ರೋಷ್ ಹಾಗೂ ಆಗಿನ ಮೈಸೂರಿನ ಸಂಸದ ಹೆಚ್.ವಿಶ್ವನಾಥ್ ಅವರ ಕುಟುಂಬದ ಸದಸ್ಯರೊಂದಿಗೆ ಇದ್ದರು.

ಪ್ರಣಬ ಮುಖರ್ಜಿ ಅವರು ಯಾವುದೇ ಹೊಸ ಕಾರ್ಯ ಮಾಡುವಾಗ ಶಂಭುಲಿಂಗೇಶ್ವರ ಆಶಿರ್ವಾದ ಪಡೆದೆ ಮುಂದಿನ ಹೆಜ್ಜೆ ಹಾಕ್ತಿದ್ದರು ಹೀಗಾಗಿ ಹಲವು ಬಾರಿ ರೇಕುಳಗಿ ಗ್ರಾಮದ ಶಂಭುಲಿಂಗೇಶ್ವರ ನ ಆಸ್ತಾನದಲ್ಲಿ ಯಾರಿಗೂ ಗೊತ್ತಾಗದೆ ಬಂದು ಹೊಗ್ತಿದ್ದರು ಎಂದು ಆಮೇಲೆ ಜನರಲ್ಲಿ ಚರ್ಚೆಯಾಗಿತ್ತು.

ಪೂಜ್ಯ ಎನ್.ಬಿ ರೆಡ್ಡಿ ಅವರ ಮಾರ್ಗದರ್ಶನ:

ಬೀದರ್ ಮೂಲದವರಾದ ಶಂಭುಲಿಂಗೇಶ್ವರ ದೇವಸ್ಥಾನದ ಪೂಜ್ಯ ಎನ್. ಬಿ ರೆಡ್ಡಿ ಅವರು ಪ್ರಣಬ ಮುಖರ್ಜಿ ಅವರ ಮನೆಯ ಬಹುತೇಕ ಪೂಜಾ ಕಾರ್ಯಗಳು ನಡೆಸಿಕೊಟ್ಟಿದ್ದಾರೆ ಈ ಹಿನ್ನೆಲೆಯಲ್ಲಿ ಬೀದರ ನ ಶಂಭುಲಿಂಗೇಶ್ವರ ನ ದೈವ ಭಕ್ತಿ ಪ್ರಣಬ ಮುಖರ್ಜಿ ಅವರನ್ನು ಆಕರ್ಷಣೆ ಮಾಡಿದ್ದು ಅವರು ಉನ್ನತ ಹುದ್ದೆಯಲ್ಲಿ ಎರಿದ್ರು ಶಂಭುಲಿಂಗೇಶ್ವರ ನ ಸನ್ನಿಧಿ ಮಾತ್ರ ಬಿಡಲಿಲ್ಲ ಎಂಬುದು ಈಗ ಬೀದರ್ ಜಿಲ್ಲೆಯ ಜನರಲ್ಲಿ ಚರ್ಚೆ ನಡೆಯುತ್ತಿದೆ.

  • ವರದಿ- ಪ್ರದೀಪ್ .ಜಿ.ಎಸ್.

TAG


ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ