ಬೀದರ್ ನಲ್ಲಿ ಪ್ರೇಮಿಗಳಿಗೆ ವಿಲನ್ ಆದ ಸ್ಕೂಲ್ ಮಾಸ್ಟರ್- ಕಾರ್ಯಕ್ರಮದಲ್ಲಿ ದಾಂದಲೆ!

265

ಬೀದರ್ :- ಹುಡುಗ ಬಡವ ಎನ್ನುವ ಕಾರಣಕ್ಕೆ ಪ್ರೇಮಿಗಳಿಗೆ ಹುಡಗಿಯ ತಂದೆಯ ಜೀವ ಬೆದರಿಕೆ ಹಾಕಿರುವ ಘಟನೆ ಬೀದರ್ ನಲ್ಲಿ ನಡೆದಿದೆ.

ಹಲವು ವರ್ಷಗಳಿಂದ ಪ್ರೀತಿ ಮಾಡಿ ಕಳೆದ ಫೆಬ್ರವರಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದ ಪ್ರೇಮಿಗಳಿಗೆ ಹಾಗೂ ಹುಡುಗನ ಕುಟುಂಬಸ್ಥರಿಗೆ ಹುಡುಗಿ ತಂದೆ ವಿಶ್ವನಾಥ್ ಗನ್ ನಿಂದ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ.‌

ಯಶ್ವವಂತ್ ಹಾಗೂ ಸ್ನೇಹ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು ಇಗಾಗಲೆ ರಿಜಿಸ್ಟರ್ ಮದುವೆಯಾಗಿದ್ರು ಹುಡುಗಿ ತಂದೆ ಇಬ್ಬರಿಗೆ ಜೀವ ಬೆದರಿಕೆ ಹಾಕುತ್ತಿದ್ದಾನೆ.

ಗನ್ ನಿಂದ ಹುಡುಗನ ಕುಟುಂಬಸ್ಥರನ್ನು ಹಾಗೂ ಹುಡುಗನನ್ನು ಕೊಲೆ ಮಾಡುವುದಾಗಿ ಮಗಳಿಗೆ ಪೋನ್ ಮಾಡಿ ಬೆದರಿಕೆ ಹಾಕಿರುವ ಆಡಿಯೋ ಪೊಲೀಸರಿಗೆ ನೀಡಲಾಗಿದೆ.

ಹುಡುಗಿ ತಂದೆ ವಿಶ್ವನಾಥ್ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿದ್ದು ರಾಜಕೀಯವಾಗಿ ಗುರುತಿಸಿಕೊಂಡಿದ್ದಾನೆ.

ನಿನ್ನೆ ಬೀದರ್ ತಾಲೂಕಿನ ಅಣದೂರು ಗ್ರಾಮದಲ್ಲಿ ಔತಣಕೂಟ ನೀಡುವಾಗ ಹುಡುಗಿ‌ ತಂದೆಯ ಕಡೆಯ ನೂರಾರು ಪುಂಡರ ಗುಂಪೊಂದು ಹುಡುಗನ ಕುಟುಂಬಸ್ಥರ ಮೇಲೆ ಮಾರಕ ಅಸ್ತ್ರಗಳಿಂದ ಹಲ್ಲೆ ಮಾಡಿದೆ.

ವಿಲನ್ ಆದ ಸ್ಕೂಲ್ ಮಾಸ್ಟರ್ .

ಹೀಗಾಗಿ ಇಂದು ನಮಗೆ ಜೀವ ಭಯವಿದೆ ರಕ್ಷಣೆ ನೀಡಿ ಎಂದು‌ ಎಸ್ಪಿಗೆ ದೂರು ನೀಡಿದ್ದು ಕಿಡ್ನಾಪ್,ಗಲಭೆ,ಜೀವ ಬೆದರಿಕೆ ಸೇರಿದಂತೆ ಹಲವಾರು ಕಾಯಿದೆ ಅಡಿಯಲ್ಲಿ ಜನವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವರದಿ:- ಪ್ರದೀಪ್ .ಜಿ.ಎಸ್.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ