BREAKING NEWS
Search

ಕೊರೋನಾ ಸೊಂಕಿತ ಭಟ್ಕಳಮೂಲದ ವ್ಯಕ್ತಿ ಪ್ರಯಾಣಿಸಿದ ರೈಲಿನಲ್ಲಿ ಪ್ರಯಾಣಿಸಿದವರು ಮಾಹಿತಿ ನೀಡಲು ಆರೋಗ್ಯ ಇಲಾಖೆ ಮನವಿ-ನಗರದಲ್ಲಿ ಪೀಡಿತರ ಮನೆಗೆ ಸೆಲ್ಯೂಷನ್ ಸಿಂಪಡಣೆ

152

ಕಾರವಾರ: ಕೊರೋನಾ ಪೀಡಿತ ಭಟ್ಕಳ ಮೂಲದ ವ್ಯಕ್ತಿಯ ಜೊತೆ ಪ್ರಯಾಣಿಸಿದ್ದವರು ಆರೋಗ್ಯ ಸಹಾಯವಾಣಿಗೆ ಮಾಹಿತಿ ನೀಡಲು ಜಿಲ್ಲಾಡಳಿತ ಕೋರಿದೆ.

ರಾಜ್ಯದ 36ನೇ ಕೊರೋನಾ ಪೀಡಿತ, ಭಟ್ಕಳ ಮೂಲದ ವ್ಯಕ್ತಿ ಮುಂಬೈ- ಮಂಗಳೂರು ಎಕ್ಸ್‌ಪ್ರೆಸ್‌ ರೈಲಿನಲ್ಲಿ 17ರಂದು ಮುಂಬೈನಿಂದ ಹೊರಟು, 18ರಂದು ಭಟ್ಕಳ ತಲುಪಿದ್ದ.

ರೈಲಿನ S3 (ಸ್ಲೀಪರ್) ಕೋಚ್ ನಲ್ಲಿ ಈತ ಭಟ್ಕಳಕ್ಕೆ ಬಂದಿದ್ದ. ಈ ಬೋಗಿಯಲ್ಲಿ ಯಾರಾದರು ಪ್ರಯಾಣಿಸಿದ್ದವರು ಇದ್ದಲ್ಲಿ ಆರೋಗ್ಯ ಸಹಾಯವಾಣಿ ಸಂಖ್ಯೆ 104, 080- 46848600 ಅಥವಾ 080- 66692000ಗೆ ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ.

ಭಟ್ಕಳ ದಲ್ಲಿ ವೈರೆಸ್ ಶುದ್ಧಿ ಗೆ ಆರೋಗ್ಯ ಇಲಾಖೆ ಶ್ರಮ.

ಜಿಲ್ಲೆಯಲ್ಲಿ ಭಟ್ಕಳ ಒಂದರಲ್ಲಿಯೇ ಎರಡು ಪ್ರಕರಣ ಪತ್ತೆಯಾಗಿದ್ದು ಅವರನ್ನು ಭಟ್ಕಳ ನಿವಾಸಿಗಳೇ ಇಬ್ಬರಿದ್ದಾರೆ .ಇನ್ನು ಇವರು ಹಲವರ ಸಂಪರ್ಕ ಬೆಳಸಿದ್ದು ಇದರಿಂದಾಗಿ ಸಾಕಷ್ಟು ಜನರಿಗೆ ವೈರೆಸ್ ಹರಡಿರುವ ಆತಂಕ ಹೆಚ್ಚಿದೆ.

ಈ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಅವರು ವಾಸ ಮಾಡುವ ಮನೆ ಸೇರಿದಂತೆ ಆಸ್ಪತ್ರೆ ಗಳಲ್ಲಿ ಹಾಗೂ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹೈಟೋಕ್ಲೋರೆಡ್ ಸಲ್ಯೂಷನ್ ಅನ್ನು ಸಿಂಪಡನೆ ಮಾಡಿದೆ.

ಇನ್ನು ವಿದೇಶದಿಂದ ಬಂದ ಹಾಗೂ ಅವರ ಕುಟುಂಬದ ಸಂಪರ್ಕದಲ್ಲಿರುವವರಿಗೆ ಕೈಗೆ ಸ್ಟಾಂಪ್ ಹೊಡೆಯಲಾಗಿದ್ದು ಅಂತಹ ಮನೆಗಳ ಗೋಡೆಗೆ ಜಾಗ್ರತೆಯ ಫಲಕವನ್ನು ಅಂಟಿಸಲಾಗಿದೆ. ಇನ್ನು ಚಿಕಿತ್ಸೆ ನೀಡಲು ಭಟ್ಕಳದಲ್ಲಿಯೇ 100 ಜನ ವೈದ್ಯರು,ವೈದ್ಯಕೀಯ ಸಿಬ್ಬಂದಿ ಶ್ರಮಿಸುತಿದ್ದು ಹೊರ ಭಾಗದಿಂದಲೂ ವೈದ್ಯರನ್ನು ನಿಯೋಜನೆ ಮಾಡಲಾಗಿದೆ.
Leave a Reply

Your email address will not be published. Required fields are marked *