
ಕಾರವಾರ :-ಐ.ಪಿ.ಎಲ್ ಕ್ರಿಕೆಟ್ ಬೆಟ್ಟಿಗ್ ಮಾಡುತಿದ್ದ ಏಳು ಜನರನ್ನು ಶನಿವಾರ ರಾತ್ರಿ ಬಂಧಿಸಿದ ಘಟನೆ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜಾಲಿರೋಡ್ ನಲ್ಲಿ ನಡೆದಿದೆ.

ಭಟ್ಕಳದ ಎ.ಎಸ್.ಪಿ ನಿಖಿಲ್ ಹಾಗೂ ಕಾರವಾರ ಡಿ.ಸಿ.ಐ.ಬಿ ಸಿ.ಪಿ.ಐ ನಿಶ್ಚಲ್ ಕುಮಾರ್ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಬಂಧಿತರಿಂದ 50,100 ರೂ ನಗದು ಹಾಗೂ ಬೆಟ್ಟಿಂಗ್ ಗೆ ಬಳಸುತಿದ್ದ ಮೊಬೈಲ್ ವಶಕ್ಕೆ ಪಡೆಯಲಾಗಿದ್ದು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಭಟ್ಕಳದ ಪಿ.ಎಸ್.ಐ ಭರತ್ .ಪಿ.ಎಸ್.ಐ ಎಚ್ ಕುಡಗುಂಟಿ ಪಾಲ್ಗೊಂಡಿದ್ದರು.