BREAKING NEWS
Search

ಮಳೆಯ ಅಬ್ಬರ ಸಮುದ್ರದಾಳದಿಂದ ಹೊರಬಂದು ಬಿತ್ತು ರಾಶಿ ರಾಶಿ ಮೀನು

1481

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಗಾಳಿ, ಮಳೆಯಿಂದಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಸಾಂಪ್ರದಾಯಿಕ ಸೇರಿದಂತೆ ಯಾಂತ್ರೀಕೃತ ಮೀನುಗಾರಿಕೆ ನಿಂತು ಹೋಗಿದೆ. ವಾರದ ಹಿಂದೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಪ್ರವಾಹ ಬಂದಿದ್ದರಿಂದ ಜಿಲ್ಲೆಯಾದ್ಯಂತ ನೂರಾರು ನಾಡದೋಣಿಗಳು ಮುಳುಗಿ ಹೋಗಿತ್ತು. ಹೀಗಾಗಿ ಜಿಲ್ಲೆಯಲ್ಲಿ ತಾಜಾ ಮೀನಿಗೆ ಬಹು ಬೇಡಿಕೆ ಬಂದಿದೆ.

ಈ ಬರದ ನಡುವೆಯೇ ಕರಾವಳಿ ಭಾಗದ ಭಟ್ಕಳ ಕಡಲತೀರ ಪ್ರದೇಶದಲ್ಲಿ ಬಯಸದೆ ಬಂದ ಭಾಗ್ಯ ಎನ್ನುವಂತೆ ದೊಡ್ಡ ಗಾತ್ರದ ಗೊಬ್ಬರ (ಕೆಲವು ಭಾಗಗಳಲ್ಲಿ ಮುರಿಯ) ಮೀನು ಕಡಲತೀರಕ್ಕೆ ಬಂದು ಬಿದ್ದಿದ್ದು ಸ್ಥಳೀಯ ಜನರು ಮುಗಿ ಬಿದ್ದು ಮೀನುಗಳನ್ನು ಹೆಕ್ಕು ಮನೆಗಳಿಗೆ ತೆಗೆದುಕೊಂಡು ಹೋಗಿದ್ದಾರೆ.

ರಾಶಿ ರಾಶಿ ಮೀನುಗಳು ಸಮುದ್ರದಾಳದಿಂದ ಹೊರಬರಲು ಕಾರಣ ಏನು?

ಈ ಗೊಬ್ಬರ ಮೀನುಗಳು ಸಾಮಾನ್ಯವಾಗಿ ಸಮುದ್ರದಾಳದಲ್ಲಿ ಕಲ್ಲುಗಳು ಹೆಚ್ಚಿರುವ ಕಡೆಗಳಲ್ಲಿ ವಾಸಿಸುತ್ತವೆ. ಅವು ವಾಸಿಸುವ ಪ್ರದೇಶದಲ್ಲಿ ದಿಢೀರ್ ತಂಪು ಹೆಚ್ಚಾಗಿದ್ದರಿಂದ ವಿಪರೀತ ಚಳಿಯ ಅನುಭವವಾಗಿ, ಚಳಿ ತಡೆದುಕೊಳ್ಳಲಾಗದೆ ಮೀನುಗಳು ಮೇಲಕ್ಕೆ ಬಂದು ಮೃತಪಟ್ಟಿವೆ ಇದಲ್ಲದೇ ಮಳೆಯಿಂದಾಗಿ ಸಮುದ್ರದಲ್ಲಿ ಅಪ್ ವೆಲ್ಲಿಂಗ್ ನಿಂದ ಸಹ ಈ ರೀತಿ ಮೀನುಗಳು ಕಡಲ ತೀರಭಾಗಕ್ಕೆ ಬರುತ್ತವೆ . ಇವು ಹವಾಮಾನದ ಬದಲಾವಣೆಗೆ ಸಾಕ್ಷಿ ಎಂದು ಕಾರವಾರದ ಕಡಲ ಜೀವಶಾಸ್ತ್ರಜ್ಞ ಜಗನ್ನಾಥ್ ರಾಥೋಡ್ ರವರು ಮಾಹಿತಿ ನೀಡಿದ್ದಾರೆ.(Upwelling phenomenon which brings nutrient rich bottom water to top and light water from surface to water.)

ಸದ್ಯ ಭಟ್ಕಳ ಭಾಗದ ಹಾಗೂ ಕುಮಟಾ ಭಾಗದ ಕೆಲವು ಕಡಲತೀರದಲ್ಲಿ ಮಾತ್ರ ಈ ರೀತಿ ಮೀನುಗಳು ಕಡಲ ತೀರಕ್ಕೆ ತೇಲಿ ಬರುತ್ತಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ