BREAKING NEWS
Search

ಭಟ್ಕಳದಲ್ಲಿ ಮಳೆಗೆ ಶಾಲಾ ಕಟ್ಟಡ ಕುಸಿತ

509

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆಗೆ ಭಟ್ಕಳ ತಾಲೂಕಿನ ಮುಂಡಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡ ಕುಸಿತವಾಗಿದೆ.

ಶಾಲೆಯ ಒಂದು ಪಾರ್ಶ್ವದ ಕೊಠಡಿ ಕುಸಿತವಾಗಿದ್ದು,ಶನಿವಾರ ರಾತ್ರಿ ಕುಸಿದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಹಳೆಯ ಕಟ್ಟಡವಾಗಿದ್ದರಿಂದ ಮಳೆಗೆ ನೆಂದು ಕುಸಿದು ಬಿದ್ದರುವುದಾಗಿ ತಿಳಿಸಿದ್ದು ಗೋಡೆ ಜೊತೆ ಮೇಚ್ಛಾವಣಿಯ ಹಂಚು ಸಹ ಬಿದ್ದಿದ್ದು ಸಂಪೂರ್ಣ ಶಿಥಿಲಾವಸ್ತೆ ತಲುಪಿದೆ.

ರಾತ್ರಿಯಾದ್ದರಿಂದ ವಿದ್ಯಾರ್ಥಿಗಳು ಪಾರಾಗಿದ್ದಾರೆ.

ಸದ್ಯ ಭಟ್ಕಳದಲ್ಲಿ ಕಳೆದ ಮೂರು ದಿನದ ಹಿಂದೆ ಸುರಿದ ಅಬ್ಬರದ ಮಳೆ ಸಾಕಷ್ಟು ಅನಾಹುತ ತಂದೊಡ್ಡಿದ್ದು ಇದೀಗ ಮಳೆ ಅಲ್ಪ ಕಮ್ಮಿಯಾದರೂ ಅನಾಹುತ ಮುಂದುವರೆದಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ