BREAKING NEWS
Search

ISISನಂಟು:ಭಟ್ಕಳದಲ್ಲಿ ಶಂಕಿತ ಉಗ್ರ ವಶಕ್ಕೆ!ಆತ ಮಾಡುತಿದ್ದುದ್ದು ಏನು? ವಿವರ ನೋಡಿ.

2027

ಕಾರವಾರ :- ಐ.ಎಸ್.ಐ.ಎಸ್ ನಂಟು ಹೊಂದಿರುವ ಶಂಕೆ ಹಿನ್ನೆಲೆ ಎನ್.ಐ.ಎ ತಂಡದಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದ ಘಟನೆ ಇಂದು ನಡೆದಿದೆ.

ಆರೋಪಿ ಅಬ್ದುಲ್ ಮಸ್ತಿರ್ (30) ಎನ್.ಐ.ಎ ತಂಡದಿಂದ ವಶಕ್ಕೆ ಪಡೆದ ವ್ಯಕ್ತಿಯಾಗಿದ್ದು
ಐ.ಎಸ್.ಐ.ಎಸ್ ಬರಹಗಳನ್ನು ಭಾಷಾಂತರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸುತ್ತಿರುವ ಕಾರಣದಿಂದ ಭಟ್ಕಳದ ನಗರದ ಅರ್ಬನ್ ಬ್ಯಾಂಕ್ ಬಳಿ ಇರುವ ಮನೆಯಲ್ಲಿ ಈತನನ್ನು ವಶಕ್ಕೆ ಪಡೆಯಲಾಗಿದೆ.

ಪ್ರಾಥಮಿಕ ಮಾಹಿತಿ ಯಂತೆ ಈತ ಭಟ್ಕಳ ನಗರದಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತಿದ್ದ. ಐ.ಎಸ್.ಐ‌.ಎಸ್ ನ ಬರಹಗಳನ್ನು ಭಾರತೀಯ ಭಾಷೆಗಳಿಗೆ ಈತ ಭಾಷಾಂತರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತಿದ್ದ ಎಂಬ ಆರೋಪ ದಡಿ ಈತನನ್ನು ವಶಕ್ಕೆ ಪಡೆಯಲಾಗಿದ್ದು ಭಟ್ಕಳದಲ್ಲೇ ತನಿಖೆ ಕೈಗೊಳ್ಳಲಾಗಿದೆ .




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ