BREAKING NEWS
Search

ಐಸಿಸ್ ಸಂಪರ್ಕ ಭಟ್ಕಳದ ಯುವಕನಿಗೆ ನೋಟೀಸ್ ನೀಡಿ ಬಿಡುಗಡೆ.

1196

ಕಾರವಾರ:- ಐಸಿಸ್ ಸಂಪರ್ಕದ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಹಾಗೂ ಬೆಂಗಳೂರಿನ ಎನ್‌ಐಎ ತಂಡ ವಶಕ್ಕೆ ಪಡೆದಿದ್ದ ಆರೋಪಿಯನ್ನು ಸದ್ಯಕ್ಕೆ ಬಿಡುಗಡೆ ಮಾಡಲಾಗಿದೆ.

ಭಟ್ಕಳ ಮುಖ್ಯರಸ್ತೆ ನಿವಾಸಿ ಅಬ್ದುಲ್ ಮುಕ್ತದಿರ್ (30)ನನ್ನು ಬಿಡುಗಡೆ ಮಾಡಿರುವ ಅಧಿಕಾರಿಗಳು
ಹೆಚ್ಚಿ‌ನ ವಿಚಾರಣೆಗೆ ದೆಹಲಿಗೆ ಬರುವಂತೆ ಎನ್‌ಐಎಯಿಂದ ನೋಟಿಸ್ ಜಾರಿಮಾಡಿದ್ದಾರೆ.

ಆರೋಪಿಯ ಬಳಿಯಿಂದ ಹೆಚ್ಚಿನ ಮಾಹಿತಿ ಸಂಗ್ರಹ ಸಾಧ್ಯವಾಗದ ಕಾರಣ ಸದ್ಯಕ್ಕೆ ಬಿಡುಗಡೆ ಮಾಡಲಾಗಿದ್ದು ಅಬ್ದುಲ್ ಮೊಬೈಲ್ ಡೇಟಾ ಹಾಗೂ ಇತರ ದಾಖಲೆಗಳನ್ನು ವಶಪಡಿಸಿಕೊಂಡು ತೆರಳಿದ್ದಾರೆ.

ಇಂದು ಆರೋಪಿಯನ್ನು ವಶಕ್ಕೆ ಪಡೆದಿದ್ದ ಎನ್.ಐ.ಎ. ತಂಡ ಭಟ್ಕಳದಲ್ಲೇ ಗುಪ್ತ ಸ್ಥಳದಲ್ಲಿಟ್ಟು ವಿಚಾರಣೆ ನಡೆಸಿದ್ದರು. ಇದಲ್ಲದೇ ಆರೋಪಿ ಅಬ್ದುಲ್ ನ ಸಹೋದರನನ್ನು ಕೂಡಾ ವಿಚಾರಣೆಗೆ ಒಳಪಡಿಸಿತ್ತು.

ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ ಉಗ್ರರ ಚಟುವಟಿಕೆಯಲ್ಲಿ ಲಿಂಕ್ ಹೊಂದಿದ್ದ ಆರೋಪ ಹೊಂದಿದ್ದ ಅಬ್ದುಲ್ ಸದ್ಯಕ್ಕೆ ಆರೋಪಿಗೆ ನೋಟೀಸ್ ನೀಡಿ ತೆರಳಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ