ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 81 ಫಾಸಿಟಿವ್.ಭಟ್ಕಳದಲ್ಲಿ ಪ್ರವೇಶ ನಿಷೇಧ!

1279

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 81 ಫಾಸಿಟಿವ್ ವರದಿಯಾಗಿದೆ.
ಭಟ್ಕಳ- 45 ಹೊನ್ನಾವರ- 9,ಯಲ್ಲಾಪುರ- 1, ಶಿರಸಿ-1, ಕುಮಟಾ-20 ಕಾರವಾರ-5 ಫಾಸಿಟಿವ್ ವರದಿಯಾಗಿದ್ದು ಇದರಲ್ಲಿ ಪುರುಷರು – 52 ಮಹಿಳೆಯರು – 29 ಸೊಂಕಿತರಾಗಿದ್ದಾರೆ.

ಭಟ್ಕಳ:- ಮುಂಬೈ ಗೆ ಪ್ರಯಾಣ ಬೆಳಸಿದ ಶಿರಾಲಿಯ 56 ವರ್ಷದ ಮಹಿಳೆ,ಕಂಟೈನ್ಮೆಂಟ್ ಝೋನ್ ನಿಂದ ಬಂದ 49 ವರ್ಷದ ನರ್ಸ, ಪಿ-17121 ಸಂಪರ್ಕದಲ್ಲಿ ಸೊಂಕಿತರಾದವರು 39 ಜನ ,ಪಿ-14556 ಸಂಪರ್ಕದಲ್ಲಿ ಸೊಂಕಿತರಾದವರು ಮೂರು ಜನಕ್ಕೆ ಸೊಂಕು ದೃಡಪಟ್ಟಿದೆ. ಪಿ-17017 ಸಂಪರ್ಕ ಹೊಂದಿದ ಅಮಿತಾ ಹಾಸ್ಪೆಟಲ್ ನ 40 ವರ್ಷದ ಮಹಿಳೆಗೂ ಫಾಸಿಟಿವ್

ಹೊನ್ನಾವರ

ಒಂಬತ್ತು ಜನರಿಗೆ ಸೊಂಕು ತಗುಲಿದ್ದು ಇದರಲ್ಲಿ ಐ.ಎಲ್.ಐ ಸೊಂಕಿತರಾದವರು 7 ಜನ, ಜಮ್ಮು-ಕಾಶ್ಮೀರದಿಂದ ಬಂದ 34 ವರ್ಷದ ಸೈನಿಕ, ಚನೈ ನಿಂದ ಬಂದ 32 ವರ್ಷದ ಪುರುಷ ನಿಗೆ ಫಾಸಿಟಿವ್.

ಯಲ್ಲಾಪುರ.
ಪಿ.-13437 ಸಂಪರ್ಕ ಮಾಡಿದ ಕೆ.ಎಸ್.ಆರ್.ಟಿ.ಸಿ ಯ 44 ವರ್ಷದ ಪುರುಷ.

ಶಿರಸಿ
ಬೆಂಗಳೂರಿನಿಂದ ಬಂದ ಪ್ರಗತಿ ನಗರದ 42 ವರ್ಷದ ಪುರುಷನಿಗೆ ಸೊಂಕು.

ಕುಮಟಾ
ಪಿ-15344 ಸಂಪರ್ಕ ಹೊಂದಿದ 15, ಪುಣೆಯಿಂದ ಮಾದನಗೇರಿಯ ವ್ಯಕ್ತಿ ,ಪಾನ್ ವೆಲ್ ನಿಂದ ಹೊನ್ನಾವರದ ಹೊನಮಾವಿಗೆ ಬಂದ ಪುರುಷ, ಐ.ಎಲ್.ಐ ಸೊಂಕಿತನಾಗಿರುವ ಹಂದಿಗೋಣ ಗ್ರಾಮದ ಪುರುಷ, ಬೆಂಗಳೂರಿನಿಂದ ಬಂದ ಮಿರ್ಜಾನ್ ನ ಪುರಷನಿಗೆ ಪಾಸಿಟಿವ್.

ಕಾರವಾರ
ಪಿ-13433 ಸಂಪರ್ಕ ಮಾಡಿದ ಒಂದೇ ಕುಟುಂಬದ ಕೋಡಿಬೀರ್ ಪ್ರದೇಶದ ಮೂರು ಜನರಲ್ಲಿ ಫಾಸಿಟಿವ್.
ಕುವೈತ್ ನಿಂದ ಬಂದ ಮೂಡಗೇರಿಯ 26 ವರ್ಷದ ಯುವಕನಲ್ಲಿ ಫಾಸಿಟಿವ್.
ಬೆಂಗಳೂರಿನಿದ ಬಂದ ಪದ್ಮನಾಭ ನಗರದ 40 ವರ್ಷದ ಪುರುಷನಲ್ಲಿ ಫಾಸಿಟಿವ್. ವರದಿಯಾಗಿದೆ.

ಭಟ್ಕಳ ಕ್ಕೆ ಪ್ರವೇಶ ನಿಷೇಧ

ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕೋವಿಡ್ 19 ಹೆಚ್ಚಳ ವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 10ರಿಂದ ಮುಂದಿನ ಆದೇಶದವರೆಗೆ ಹೊರ ದೇಶ, ಹೊರ ರಾಜ್ಯ, ಹೊರ ಜಿಲ್ಲೆ, ಹೊರ ತಾಲೂಕು ಜನರು ಭಟ್ಕಳಕ್ಕೆ ಪ್ರವೇಶ ನಿಷೇಧ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಭಟ್ಕಳ ಹಾಗೂ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿ ಪ್ರವೇಶಗಳಿಗೆ ಈ ನಿಷೇಧ ವಳಪಟ್ಟಿರುತ್ತದೆ. ಮಧ್ಯಾಹ್ನ 2 ಗಂಟೆಯಿಂದ ಮರುದಿನ ಬೆಳಗ್ಗೆ 6ರವರೆಗೆ ರಸ್ತೆಗಿಳಿಯುವಂತಿಲ್ಲ,
ಜಿಲ್ಲೆಗೆ ಪ್ರವೇಶಿಸುವ ಪ್ರತಿಯೊಬ್ಬರಿಗೂ ಫೀವರ್ ಟೆಸ್ಟ್ ಕಡ್ಡಾಯವಾಗಿರುತ್ತದೆ ,ಜಿಲ್ಲೆಗೆ 3 ಹಾಗೂ ಹೆಚ್ಚು ದಿನಗಳ ಕಾಲ ತಂಗಲು ಬರುವವರಿಗೆ ಫೀವರ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ.
ಫೀವರ್ ಟೆಸ್ಟ್ ಆದೇಶ ಉಲ್ಲಂಘಿಸಿದವರಿಗೆ 14 ದಿನಗಳ ಕ್ವಾರಂಟೈನ್ ವಿಧಿಸಲಾಗುತ್ತದೆ.
ವಿಪತ್ತು ನಿರ್ವಹಣಾ ಕಾಯ್ದೆ 2005, ಸಾಂಕ್ರಾಮಿಕ ರೋಗ ನಿಯಂತ್ರಣಾ ಸುಗ್ರೀವಾಜ್ಞೆ 2020ರ ಅನ್ವಯ ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಶಿರಸಿಯಲ್ಲಿ ಟಿ.ಎಸ್.ಎಸ್. ಆಸ್ಪತ್ರೆ ಪ್ಲೋರ್ ಸೀಲ್ ಡೌನ್

ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಇಂದು ಕೊರೊನಾ ಪಾಸಿಟಿವ್ ವರದಿಯಾದ ಹಿನ್ನೆಲೆಯಲ್ಲಿ ಟಿಎಸ್ಎಸ್ ಐಸೋಲೇಷನ್ ಸೆಂಟರ್ ಎರಡನೇ ಫ್ಲೋರ್ ಸೀಲ್‌ಡೌನ್ ಮಾಡಲಾಗಿದೆ.

ಟಿಎಸ್‌ಎಸ್‌ನಲ್ಲಿ ಕೆಲಸ ಮಾಡುತ್ತಿದ್ದ 42 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಎರಡನೇ ಫ್ಲೋರ್ ಸೀಲ್‌ಡೌನ್ ಮಾಡಲಾಗಿದ್ದು ಈ ಮೂಲಕ ಶಿರಸಿ ಗ್ರಾಮೀಣ ಭಾಗಕ್ಕೂ ಕೊರೊನಾ ಕಾಲಿಟ್ಟಿದೆ.
Leave a Reply

Your email address will not be published. Required fields are marked *