BREAKING NEWS
Search

ಟಾರ್ಗೆಟ್‌ ಭಟ್ಕಳ – 10 ವಿದೇಶಿ ಧರ್ಮ ಪ್ರಚಾರಕರನ್ನು ಭಟ್ಕಳದಿಂದ ಹೊರಹಾಕಿದ ಎಮ್.ಹೆಚ್.ಎ!

1084

ಕಾರವಾರ:- ಮತ ಪ್ರಚಾರ ಹಾಗೂ ತಮ್ಮ ಚಟುವಟಿಕೆಗೆ ಹಣ ಸಂಗ್ರಹಕ್ಕೆ ಬಂದಿದ್ದ 10 ವಿದೇಶಿಗರನ್ನು ಜಿಲ್ಲಾ ಪೊಲೀಸರು ವಿ.ಸಾ ನಿಯಮ ಉಲ್ಲಂಘನೆಯಲ್ಲಿ ಬಂಧಿಸಿ ಅವರ ದೇಶಗಳಿಗೆ ಮರಳಿ ಕಳುಹಿಸಿದ್ದಾರೆ.

ಹೌದು ಪ್ರವಾಸಿ ವಿಸಾ ದಡಿ ಭಾರತ ದೇಶಕ್ಕೆ ಮುಸ್ಲಿಂ ಜನಾಂಗದ ಏಳು ಜನ ಸೌತ್ ಆಫ್ರಿಕಾ, ತಲಾ ಒಬ್ಬರಂತೆ ಕೆನಡಾ,ವೆಸಜೇಲಿಯಾ ಹಾಗೂ ಸೌದಿ ಅರೇಬಿಯಾದಿಂದ ಬಂದವರು ಭಾರತದ ಮಹಾರಾಷ್ಟ್ರ ಮೂಲದ ಇಬ್ಬರು,ಗುಜರಾತ್ ನ ಒಬ್ಬ ಮುಸ್ಲಿಂ ವ್ಯಕ್ತಿಯೊಂದಿಗೆ ಭಟ್ಕಳಕ್ಕೆ ಐದು ದಿನ ಮತ ಪ್ರಚಾರ ಹಾಗೂ ಹಣ ಸಂಗ್ರಹಣೆಗೆ ಬಂದಿದ್ದರು.

ಇದರ ಮಾಹಿತಿ ಪಡೆದ ಜಿಲ್ಲಾ ಗುಪ್ತದಳ ವಿಭಾಗ ಹಾಗೂ ಭಟ್ಕಳ ಪೊಲೀಸರು ಅವರ ಚಟುವಟಿಕೆಬಗ್ಗೆ ಮೊದಲು ನಿಗಾ ಇಟ್ಟಿದ್ದು ನಂತರ ಅವರನ್ನು ವಶಕ್ಕೆ ಪಡೆದಿದ್ದಾರೆ.

ಭಟ್ಕಳದಲ್ಲಿ ಧರ್ಮ ಪ್ರಚಾರ ಮಾಡುವ ನೆಪದಲ್ಲಿ ಇಲ್ಲಿನ ಒಂದು ಕೋಮಿನ ಜನರಲ್ಲಿ ಬೇರೆ ಭಾವನೆ ಬರುವಂತೆ ಮನ ಪರಿವರ್ತನೆ ಮಾಡುತಿದ್ದು ಜೊತೆಯಲ್ಲಿ ತಮ್ಮ ಕಾರ್ಯಗಳಿಗಾಗಿ ಹಣ ಸಂಗ್ರಹದಲ್ಲಿ ತೊಡಗಿದ್ದರು.
10 ಜನ ವಿದೇಶಿಯರು ಹಾಗೂ 3 ಜನ ಭಾರತೀಯರನ್ನು ವಶಕ್ಕೆ ಪಡೆದು ನಂತರ 10 ಜನ ವಿದೇಶಿಗರನ್ನು (MHA) ಗೃಹ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಲಾಗಿದ್ದು ಗೃಹ ಇಲಾಖೆ ವಿಸಾ ನಿಯಮ ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ವಿಸಾ ರದ್ದುಪಡಿಸಿ ದೇಶದಿಂದ ಹೊರಹಾಕಿದೆ.
ಇನ್ನು ಉಳಿದ ಭಾರತದ ಮೂವರ ಕುರಿತು ಗುಪ್ತದಳ ಇಲಾಖೆ ಮಾಹಿತಿ ಕಲೆಹಾಕುತಿದ್ದು ಹೆಚ್ಚಿನ ವಿವರ ಲಭ್ಯವಾಗಬೇಕಿದೆ.

ಈ ವಿದೇಶಿಗರು ಈ ಹಿಂದೆಯೂ ಭಾರತಕ್ಕೆ ಬಂದಿದ್ದರು ಎನ್ನಲಾಗಿದ್ದು ಇದೇ ಮೊದಲಬಾರಿಗೆ ಭಟ್ಕಳವನ್ನ ಕೇಂದ್ರವಾಗಿರಿಸಿಕೊಂಡು ಬಂದಿರುವಿದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಭಟ್ಕಳ ಹಲವು ವಿಷಯದಲ್ಲಿ ಸೂಷ್ಮ ಪ್ರದೇಶವಾಗಿದೆ.
ಕಳೆದ ಸಪ್ಟೆಂಬರ್ ನಲ್ಲಿ ಜಮ್ಮು ಕಾಶ್ಮೀರದ ಯುವಕರು ಸಹ ಕಾರವಾರ ಮತ್ತು ಭಟ್ಕಳ ದಲ್ಲಿ ಧರ್ಮ ಪ್ರಚಾರ ಹಾಗೂ ಹಣ ಸಂಗ್ರಹಣೆಗೆ ಬಂದು ಪೊಲೀಸರ ಅಥಿತಿಯಾಗಿದ್ದರು. ಇದಲ್ಲದೇ ಕಾರವಾರ ಮತ್ತು ಭಟ್ಕಳದಲ್ಲಿ ಸಟಲೈಟ್ ಪೋನ್ ಬಳಕೆಯಾಗುವ ಮೂಲಕ ಸದ್ದು ಮಾಡಿದ್ದು ಜನರು ಭಯ ಪಡುವಂತೆ ಮಾಡಿದೆ.
Leave a Reply

Your email address will not be published. Required fields are marked *