ಕಂಗನಕೋಟ: ಗಂಗಾಮಾತೆಗೆ ಪೂಜೆ ಸಲ್ಲಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್

78

ಬೀದರ್ (ಅ.07): ಸುಮಾರು ಏಳು ವರ್ಷಗಳ ನಂತರ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಂಗನಕೋಟ ಗ್ರಾಮದ ಕೆರೆ ತುಂಬಿದ ಪ್ರಯುಕ್ತ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಕೆರೆಗೆ ಭೇಟಿ ನೀಡಿ ಗಂಗಾಮಾತೆಗೆ ಪೂಜೆ ಸಲ್ಲಿಸಿದರು.


ಇದೇ ವೇಳೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಬೀದರ್ ಉಪವಿಭಾಗದ ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್, ಕೆರೆ ಅಭಿವೃದ್ಧಿ ಮತ್ತು ರಸ್ತೆ ದುರಸ್ತಿ ಸೇರಿದಂತೆ ವಿವಿಧ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿ, ಆದಷ್ಟು ಬೇಗ ಕೆರೆ ಅಭಿವೃದ್ಧಿ ಪಡಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲು ತಿಳಿಸಿದರು.

ಈ ಬಾರಿ ಉತ್ತಮ ಮಳೆಯಾಗಿದ್ದು, ಜಿಲ್ಲೆಯಲ್ಲಿ ಕೆರೆ ಕಟ್ಟೆಗಳು ಭರ್ತಿಯಾಗುತ್ತಿವೆ. ರೈತರು, ಗ್ರಾಮಸ್ಥರು ಹೆಚ್ಚಿನ ನೀರು ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.


ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಬೀದರ್ ಉಪವಿಭಾಗದ ಎಇಇ ನಿಸಾರ್ ಅಹಮದ್ ಖುರೇಷಿ, ಅಸಿಸ್ಟೆಂಟ್ ಇಂಜಿನಿಯರ್ ಅನಿಲ್ ಕುಮಾರ್, ಮುಖಂಡರಾದ ಗಣಪತಿ ಶಂಭು, ಜಹೀಮ್ ಖಾನ್, ಅವೀರ್ ಸಾವಂತ್, ನೀಲಕಂಠ ರಾಠೋಡ್, ನಾಗಶೆಟ್ಟಿ, ಸಿಕಂದರ್ ಸೇರಿದಂತೆ ಗ್ರಾಮಸ್ಥರು, ಕಾರ್ಯಕರ್ತರು ಇದ್ದರು.

ವರದಿ:- ಪ್ರದೀಪ್ .ಜಿ.ಎಸ್.


TAG


Leave a Reply

Your email address will not be published. Required fields are marked *