BREAKING NEWS
Search

ಬೀದರ್ ನಲ್ಲಿ ಮುಖ್ಯಮಂತ್ರಿ: ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ.

107

ಬೀದರ್ :- ಬೀದರ್ ಜಿಲ್ಲೆಯ ಗರ್ಭಿಣಿ ಮಹಿಳೆಯರ ಬಹುದಿನಗಳ ಕನಸು ಇಂದು ನನಸಾಗಿದ್ದು 20 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ನೂತನ 100 ಹಾಸಿಗೆಯ ಹೆರಿಗೆ ಆಸ್ಪತ್ರೆಯನ್ನು ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು.

ವಿಶೇಷ ವಿಮಾನದ ಮೂಲಕ ಬೀದರ್ ಏರಬೇಸ್ ಗೆ ಬಂದ ಸಿಎಂ ನೇರವಾಗಿ ತಾಯಿ ಮತ್ತು ಮಕ್ಕಳ ಹೆರಿಗೆ ಆರೈಕೆ ಜಿಲ್ಲಾ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದರು.

ಇದೇ ಸಂದರ್ಭದಲ್ಲಿ 5,22 ಕೋಟಿ ವೆಚ್ಚದ ಇಂಜಿನಿಯರಿಂಗ್ ಕಾಲೇಜು ಹಾಸ್ಟೆಲ್, 4,90 ಕೋಟಿ ವೆಚ್ಚದ ಸರ್ಕಾರಿ ಶುಶ್ರೂಷ ಶಾಲೆ,2,50 ಕೋಟಿ ಅನುದಾನದ ಗ್ರಾಮೀಣ ಸಂತೆಗಳ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಿದರು. ಜೊತೆಗೆ ಎಪಿಎಂಸಿಯ 140 ಹಮಾಲರಿಗೆ ವಸತಿಯ ಹಕ್ಕು ಪತ್ರಗಳನ್ನು ನೀಡಿದರು.

ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಬೀದರ್ ಜಿಲ್ಲೆ ಐತಿಹಾಸಿಕ, ಧಾರ್ಮಿಕ ಕ್ಷೇತ್ರದಲ್ಲಿ ಹೆಸರು ಮಾಡಿದ್ದು ಇಲ್ಲಿ ಜನಿಸಿದ ಶರಣ ಸಂಸ್ಕೃತಿಯು ವಿಶ್ವದಾದ್ಯಂತ ಪಸರಿಸಿದೆ.

100 ಹಾಸಿಗೆಯ ಹೆರಿಗೆ ಸಾರ್ವಜನಿಕ ಆಸ್ಪತ್ರೆ ಲೋಕಾರ್ಪಾಣೆ ಸಂತೋಷದಿಂದ ಮಾಡಿದ್ದೇನೆ.
ಕೇರಳ ತಮಿಳುನಾಡು ಬಿಟ್ರೆ ಕರ್ನಾಟಕ ರಾಜ್ಯ ಅತ್ತ್ಯುತ್ತಮ ಆರೋಗ್ಯ ಸೇವೆ ನೀಡುತ್ತಿದೆ.

ಕೊವೀಡ್, ಅತಿವೃಷ್ಟಿ ,ಬರಗಾಲ,ಹಣಕಾಸಿನ ಸಮಸ್ಯೆಯಿಂದಾಗಿ ಈ ವರ್ಷ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿಲ್ಲಾ, ಆದ್ರೆ ಮುಂದಿನ ವರ್ಷದಿಂದ ಸರ್ವತೋಮುಖ ಬೆಳವಣಿಗೆಗೆ ಮಾಡುತ್ತೆನೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪನವರು ಆಶ್ವಾಸನೆ ನೀಡಿದರು.

ಇದೇ ವೇಳೆ ಆರೋಗ್ಯ ಸಚಿವರು‌ ಮಾತನಾಡಿ ಕೊವೀಡ್ ಸಮಯದಲ್ಲಿ ಆರೋಗ್ಯ ಸಿಬ್ಬಂದಿಗಳು ಸಂಜೀವಿನಿಯಂತ್ತೆ ಕೆಲಸ ಮಾಡಿದ್ದಾರೆ.

ರಾಜ್ಯದಲ್ಲಿ ಒಳೆಯ ಗುಣ ಮಟ್ಟದ ಚಿಕಿತ್ಸೆ ನೀಡಬೇಕು ಎಂದು ರಾಜ್ಯದಲ್ಲಿ “ವಿಷನ್ ಕರ್ನಾಟಕ” ಎಂದು ಮಾಡಿದ್ದು ಇದರಲ್ಲಿ 40 ಜನರ ಪರಿಣತರ ಸಮಿತಿ ಇದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್,ಆರೋಗ್ಯ ಸಚಿವ ಡಾ,ಸುಧಾಕರ, ಸಾರಿಗೆ ಸಚಿವ ಲಕ್ಷ್ಮಣ ಸವದಿ, ಸಂಸದ ಭಗವಂತ್ ಖೂಬಾ, ಶಾಸಕ ರಹೀಂಖಾನ್,ಬಿಜೆಪಿ ಮುಖಂಡರು, ಆರೋಗ್ಯಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ