ಬೀದರ್ ನಲ್ಲಿ ಕರೋನಾಗೆ ಇಂದು ಮೂವರು ಬಲಿ! ಜಿಲ್ಲೆಯಲ್ಲಿ ಎಷ್ಟು ವಿವರ ನೋಡಿ

243

ಬೀದರ್ :- ಗಡಿ ಜಿಲ್ಲೆ ಬೀದರ್ ನಲ್ಲಿ ಇಂದು ಮೂವರು ಕರೋನಾಕ್ಕೆ ಬಲಿಯಾಗಿದ್ದಾರೆ.

ಬಸವಕಲ್ಯಾಣ ತಾಲೂಕಿನ 65 ಹಾಗೂ 48 ವರ್ಷದ ವ್ಯಕ್ತಿಗಳು ಹಾಗೂ ಬೀದರ್ ತಾಲೂಕಿನ 66 ವರ್ಷದ ಮಹಿಳೆ ಕೊರೋನಾ ಗೆ ಬಲಿಯಾಗಿದ್ದಾಳೆ.

ತೀವ್ರ ಉಸಿರಾಟದ ಸಮಸ್ಯೆ ಹಾಗೂ ಜ್ವರದಿಂದ ಬಳಲಿ ಸಾವನ್ನಪ್ಪಿದ ಮೂವರಿಗೆ ಇಂದು ಕೊರೋನಾ ಪಾಸಿಟಿವ್ ಧೃಡವಾಗಿದೆ.

ಮೂವರ ಬಲಿಯೊಂದಿಗೆ ಇಂದು 43 ಜನಕ್ಕೆ ಕೊರೋನಾ ಪಾಸಿಟಿವ್ ಧೃಡವಾಗಿದೆ.

ಬೀದರ್ ನಲ್ಲಿ 20, ಭಾಲ್ಕಿಯಲ್ಲಿ 7,ಬಸವಕಲ್ಯಾಣದಲ್ಲಿ 6,ಹುಮ್ನಬಾದ್ ನಲ್ಲಿ 6, ಔರಾದ್ ನಲ್ಲಿ ನಾಲ್ಕು ಜನಕ್ಕೆ ಪಾಸಿಟಿವ್ ಧೃಡವಾಗಿದ್ದು ಪ್ರಾಥಮಿಕ ಹಾಗೂ ಕಂಟೈನ್ಮಟ್ ಏರಿಯಾ ಸಂಪರ್ಕದಿಂದಾಗಿ ಸೋಂಕು ಧೃಡವಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ತಾಲೂಕುವಾರು ವಿವರ:-

ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3791ಕ್ಕೆ ಏರಿಕೆಯಾಗಿದ್ದು ಇದರಲ್ಲಿ 2723 ಜನ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದ್ದಾರೆ. ಇನ್ನು 945 ಜನಕ್ಕೆ ಸೋಂಕು ಸಕ್ರಿಯವಾಗಿದ್ದು ಇಲ್ಲಿಯವರೆಗೆ 119 ಜನ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ‌.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ