ಬೀದರ್ ನಲ್ಲಿ ಅಬ್ಬರಿಸಿದ ಮಳೆ- ಬೆಳೆನಾಶಕ್ಕೆ ರೈತರಿ ಖಾತೆಗೆ ನೇರ ಪರಿಹಾರ- ಡಿಸಿ

284

ಬೀದರ್:- ಬೀದರ್ ಜಿಲ್ಲೆಯ ವಿವಿಧೆಡೆ ರಾತ್ರಿಯಿಡೀ ಸುರಿದ ಮಳೆಯ ಕಾರಣ ಹಲವೆಡೆ ಸಣ್ಣ ಸೇತುವೆಗಳ ಮೇಲಿಂದಲೇ ನೀರು ಹರಿಯ ತೊಡಗಿದೆ. ಇದರಿಂದಾರಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಪ್ರಮುಖವಾಗಿ ಇಂಚೂರು- ಗೋರಚಿಂಚೋಳಿ ಸೇತುವೆ ಜಲಾವೃತವಾಗಿ ಭಾಲ್ಕಿ- ಬಸವಕಲ್ಯಾಣ, ಭಾಲ್ಕಿ-ನೀಲಂಗಾ-ಶಹಜಾನಿ ಔರಾದ್ ರಸ್ತೆ ಸಂಪರ್ಕ ಕಡಿತವಾಗಿದೆ.

ಅದೇ ರೀತಿ, ಭಾಲ್ಕಿಯ ಆನಂದವಾಡಿ- ನಿಡೆಬಾನ್- ಕೋರೂರು ಸೇತುವೆ ಸಹ ಜಲಾವೃತ‌ವಾಗಿದೆ.

ಈ ಮಾರ್ಗದ ಸಂಪರ್ಕ ಕಡಿತ. ಸೇತುವೆ ಮೇಲಿಂದ ಎರಡೂವರೆ ಅಡಿಗಿಂತ ಹೆಚ್ಚು ನೀರು ಹರಿಯುತ್ತಿದೆ.

ಬೀದರ್ ಜಿಲ್ಲೆಯಲ್ಲದೆ ನೆರೆಯ ಮಹಾರಾಷ್ಟ್ರದಲ್ಲೂ ಸುರಿಯುತ್ತಿರುವ ಮಳೆ. ಜಿಲ್ಲೆಯ ಮಾಂಜ್ರಾ ನದಿಗೆ ಹರಿದುಬರುತ್ತಿರುವ ವ್ಯಾಪಕ ನೀರು. ಮಾಂಜ್ರಾಗೆ ಪ್ರವಾಹ ಭೀತಿ ಎದುರಾಗಿದೆ.

ಇನ್ನು 16 ರಿಂದ 19 ನೇ ತಾರೀಕಿನ ವರೆಗೆ ಬೀದರ್ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಬೆಳೆ ನಾಶ-ವಿಪತ್ತು ನಿರ್ವಹಣಾ ನಿಧಿಯಿಂದ ರೈತರ ಅಕೌಂಟ್ ಗೆ ನೇರವಾಗಿ ಪರಿಹಾರ -ಡಿ.ಸಿ.

ಬೀದರ್ ಜಿಲ್ಲೆಯಲ್ಲಿ ಸುರಿದ ಜಿಟಿ ಜಿಟಿ ಮಳೆಗೆ ಜಿಲ್ಲೆಯಾದ್ಯಂತ 21 ಸಾವಿರ ಎಕರೆಯಲ್ಲಿ ಬೆಳೆದಿದ್ದ ಹೆಸರು,ಉದ್ದು ಗಿಡದಲ್ಲೆ ಕೊಳೆತ ಬೆಳೆ ನಾಶವಾದ ಬಗ್ಗೆ‌‌ ಜಿಲ್ಲಾಧಿಕಾರಿಗಳು ಇಂದು ಸುದ್ದಿಗೋಷ್ಠಿ ನೆಡೆಸಿ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಅತಿವೃಷ್ಠಿಯಿಂದ ಬೆಳೆನಾಶವಾದ ಬಗ್ಗೆ ಕೇಂದ್ರ ತಂಡ ಬಂದು‌ ಇಗಾಗಲೇ ಅಧ್ಯಯನ ಮಾಡಿಕೊಂಡು ಹೋಗಿದ್ದು ಶಿಘ್ರದಲ್ಲೆ ರೈತರಿಗೆ ಬೆಳೆ ಪರಿಹಾರ ಬರುತ್ತದೆ. ಜಿಲ್ಲೆಗೆ ತಂಡ ಬಂದಿಲ್ಲಾ ಆದ್ರೆ ವಲಯ ವಾರು ಕೇಂದ್ರ ತಂಡ ಅಧ್ಯಯನ ಮಾಡಿದ್ದು ಕೇಂದ್ರ ಸರ್ಕಾರಕ್ಕೆ ಅವರ ವರದಿಯನ್ನು ಸಲ್ಲಿಕೆ ಮಾಡತ್ತಾರೆ,ಇನ್ನು ಕೆಲವೇ ದಿನಗಳಲ್ಲಿ ವಿಪತ್ತು ನಿರ್ವಹಣಾ ನಿಧಿಯಿಂದ ರೈತರ ಅಕೌಂಟ್ ಗೆ ನೇರವಾಗಿ ಪರಿಹಾರ ಬಿಡುಗಡೆಯಾಗುತ್ತೆ ಎಂದರು.

ಆದಷ್ಟು ಬೇಗ ಜಿಲ್ಲೆಯಲ್ಲಿ‌ ಖರೀದಿ ಕೇಂದ್ರಗಳ ಸ್ಥಾಪನೆಯಾಗುತ್ತವೆ ಎಂದು ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಮಾಹಿತಿ ನೀಡಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ