ಸಚಿವ ಪ್ರಭು ಚವ್ಹಾಣ ಗೆ ಕೊರೊನಾ, ಜೊತೆಗಿದ್ದ ನಾಲ್ವರಿಗೂ ಸೋಂಕು!

231

ಬೀದರ್:
ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರಿಗೆ ಕೊರೊನಾ ಸೋಂಕು ತಗುಲಿದ್ದು ಆಪ್ತ ಸಹಾಯಕ ಸೇರಿದಂತೆ ನಾಲ್ವರಲ್ಲಿ ಸೋಂಕು ಧೃಡಪಟ್ಟಿದೆ.

ಸಚಿವರ ಗನ್ ಮ್ಯಾನ್, ಆಪ್ತ ಸಹಾಯಕ, ಕಾರು ಚಾಲಕ ರಿಗೆ ಮೊನ್ನೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಈ ಕಾರಣಕ್ಕೆ ಕ್ವಾರೇಂಟೆನ್ ಗೆ ಒಳಗಾಗಿದ್ದ ಸಚಿವ ಪ್ರಭು ಚವ್ಹಾಣ ಅವರು ಗಂಟಲು ದ್ರವ ಪರಿಕ್ಷೆ ಮಾಡಿಕೊಂಡಾಗ ಸೋಂಕು ಧೃಡಪಟ್ಟಿದೆ.

ಅಲ್ಲದೆ ಸಚಿವರ ಜತೆಯಲ್ಲಿ ಇರುವ ಅಣ್ಣ ಮಾರುತಿ ಚವ್ಹಾಣ ಅವರ ಮಗ ದಿಲೀಪ ಚವ್ಹಾಣ ಗೂ ಸೋಂಕು ಧೃಡಪಟ್ಟಿದೆ. ಸಚಿವರಿಗೆ ಕೆಮ್ಮು, ಜ್ವರ, ನೆಗಡಿ ಸೇರಿದಂತೆ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲವಾದರು ಇತ್ತಿಚೇಗೆ ಅವರ ಸಂಪರ್ಕಕ್ಕೆ ಬಂದವರು ಎಚ್ಚರಿಕೆ ವಹಿಸಬೇಕು ಎಂದು ಪ್ರಭು ಚವ್ಹಾಣ ಮನವಿ ಮಾಡಿದ್ದಾರೆ.

ಕಳೇದ ಒಂದು ವಾರದಿಂದ ಬೆಂಗಳೂರು ಪ್ರವಾಸದಲ್ಲೆ ಇದ್ದ ಸಚಿವ ಪ್ರಭು ಚವ್ಹಾಣ ಅವರು ಕಲ್ಬುರ್ಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟಿಲ್ ಅವರೊಂದಿಗೆ ಸಾರ್ವಜನಿಕ ಸಮಾರಂಭದಲ್ಲೂ ಪಾಲ್ಗೊಂಡಿದ್ದರು. ನಂತರ ಬೆಂಗಳೂರು ಪ್ರವಾಸ ಮಾಡಿ ಒಂದು ವಾರದ ಕಾಲ ಕೇಂದ್ರ ಸ್ಥಾನದಲ್ಲೆ ಇದ್ದರು. ಇದೀಗ ಅವರಲ್ಲಿ ಸೋಂಕು ಪತ್ತೆಯಾಗಿದೆ ಎನ್ನಲಾಗಿದೆ.

ಈ ನಡುವೆ ಸಚಿವರು ಸಾರ್ವಜನಿರಿಗೆ ನೇರವಾಗಿ ಸಂಪರ್ಕಕ್ಕೆ ಸಿಗುವುದು ಕಷ್ಟವಾಗಿದ್ದು ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ್ ಕಟ್ಟೆ ಅವರನ್ನು ಸಂಪರ್ಕಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ವರದಿ:- ಪ್ರದೀಪ್ .ಜಿ.ಎಸ್.ಬೀದರ್.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ