ಬೀದರ್:- ಅಕ್ರಮವಾಗಿ ಶ್ರೀಗಂಧ ವ್ಯಾಪಾರ ಮಾರಾಟ ಮಾಡ್ತಿದ್ದ ಜಾಲವೊಂದನ್ನು ಬೇಟೆಯಾಡಿ ಭೇಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು 12 ಲಕ್ಷ ಮೌಲ್ಯದ ಶ್ರೀಗಂಧ ಜಪ್ತಿ ಮಾಡಿಕೊಂಡಿದ್ದಾರೆ.
ಜಿಲ್ಲೆಯ ಔರಾದ್ ಪಟ್ಟಣದ ಚನ್ನಬಸವೇಶ್ವರ ಕಾಲೋನಿಯ ಸಂತೋಷ ದ್ಯಾಡಂಗಲೆ ಎಂಬಾತರ ಮನೆಯಲ್ಲಿ 2 ಕ್ವಿಂಟಲ್ ಶ್ರೀಗಂಧ ಅಕ್ರಮವಾಗಿ ಸಂಗ್ರಹಿಸಿಟ್ಟ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ನರಸಿಂಗ್ ತುಳಸಿರಾಮ್ ಮಾನೆ, ಸಂತೋಷ ದಡ್ಯಾಂಗಲೆ, ಶಿವಕುಮಾರ್ ದಡ್ಯಾಂಗಲೆ ಹಾಗೂ ಅಶೋಕ ರಾಚಪ್ಪ ಹೆಳವಾ ಎಂಬಾತರನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ದೇವರಾಜ್ ಬಿ, ಸಿಪಿಐ ರಾಘವೇಂದ್ರ ಹಾಗೂ ಸಂತಪೂರ್ ಪೊಲೀಸ್ ಠಾಣೆ ಅಪರಾಧ ವಿಭಾಗದ ಪಿಎಸ್ ಐ ಸುವರ್ಣ ಅವರ ನೇತೃತ್ವದಲ್ಲಿ ಸಿಬ್ಬಂಧಿಗಳು ದಾಳಿ ನಡೆಸಿದ್ದಾರೆ. ಈ ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:- ಪ್ರದೀಪ್ .ಜಿ.ಎಸ್.