ಮಾಸ್ಕ್ ಹಾಕದೇ ಸಾಮಾಜಿಕ ಅಂತರ ಮರೆತು ಕನ್ನಡಸಂಘಟನೆಯಿಂದ ಅನ್ಯ ಭಾಷೆ ನಾಮಫಲಕ ಹಾವಳಿ ವಿರುದ್ಧ ಪ್ರತಿಭಟನೆ.

117

ಬೀದರ್ :- ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿ ಹೊಂದಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ಅನ್ಯ ಭಾಷೆಗಳ ನಾಮ ಫಲಕಗಳ ಹಾವಳಿ ವಿಪರೀತವಾಗಿದ್ದು ಈ ಹಿನ್ನಲೆಯಲ್ಲಿ ಇಂದು ಕನ್ನಡ ಪರ ಸಂಘಟನೆಗಳು ಜಿಲ್ಲೆಯಲ್ಲಿ ಕನ್ನಡ ಭಾಷೆಯ ನಾಮ ಫಲಕಗಳನ್ನು ಕಡ್ಡಾಯ ಗೊಳಿಸಿ ಎಂದು ಬೀದರ್ ನಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಕನ್ನಡ ಪರ ಸಂಘಟನೆಯ ಬಹುತೇಕ ಕಾರ್ಯಕರ್ತರು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಹಾಕದೆ ಕೊವೀಡ್ ನಿಯಮಗಳನ್ನು ಗಾಳಿಗೆ ತೂರಿದ್ರು, ಅಂಬೇಡ್ಕರ್ ವೃತದಿಂದ ಬೃಹತ್ ರ್ಯಾಲಿ ಮಾಡಿದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಉದ್ದಕ್ಕೂ ಮಹಾಮಾರಿ ಕೊರೋನಾ ನಿಯಮಗಳನ್ನು ಪಾಲನೆ ಮಾಡದೆ ನಿರ್ಲಕ್ಷ್ಯ ಮಾಡಿದರು.

ಪ್ರತಿಭಟನೆ ವೇಳೆ ಪೊಲೀಸರು ಇದ್ರು ಕೂಡಾ ಯಾರು ಕೊವೀಡ್ ನಿಯಮಗಳನ್ನು ಪಾಲನೆ ಮಾಡಿ ಎಂದು ಜಾಗೃತಿ ಮಾಡಲಿಲ್ಲ ಜೊತೆಗೆ ಮಾಸ್ಕ್ ಹಾಕದವರಿಗೆ ದಂಡ ಕೂಡಾ ಹಾಕುವ ಕೆಲಸವು ಮಾಡಲ್ಲಿಲ್ಲಾ.

ಇಂದು ಗಡಿ ಜಿಲ್ಲೆ ಬೀದರ್ ನಲ್ಲಿ ಪ್ರತಿಯೊಂದು ಅಂಗಡಿಗಳು,ಕಚೇರಿಗಳು,ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲಾ ಕಡೆ ಅನ್ಯ ಭಾಷೆಗಳ ನಾಮ ಫಲಕಗಳ ಹಾವಳಿ ಜಾಸ್ತಿಯಾಗಿದೆ.ಇದಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು ಎಂದು ಕನ್ನಡ ಪರ ಸಂಘಟನೆಗಳು ಆಗ್ರಹಿಸಿದವು.

ವರದಿ- ಪ್ರದಿಪ್ .ಜಿ.ಎಸ್.
Leave a Reply

Your email address will not be published. Required fields are marked *