ಡಿಕೆಶಿ ಅವರ ಫೋನ್ ಸರಿಯಾಗಿ ಕೇಳಿಸದಿದ್ದರೆ ಶಿವಾಜಿನಗರದ ಮೊಬೈಲ್ ಅಂಗಡಿಯಲ್ಲಿ ರಿಪೇರಿ ಮಾಡಿಸಿಕೊಳ್ಳಲಿ-ಆರ್ .ಅಶೋಕ್

245

ಬೀದರ್ :- ಬೀದರ್ ನಲ್ಲಿ ಸತತವಾಗಿ ಸುರಿದ ಬಾರಿ ಮಳೆಯಿಂದಾಗಿ ಹೆಸರು ಬೇಳೆ ಸೇರಿದಂತೆ ಧಾನ್ಯಗಳ ಬೆಳೆಗಳು ನಾಶವಾಗಿದ್ದು ಇಂದು ಕಂದಾಯ ಸಚಿವ ಆರ್.ಅಶೋಕ್ ರವರು ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಸಚಿವ ಆರ್ ಅಶೋಕ ‌ಜೊತೆ ಸಂಸದರಾದ ಭಗವಂತ ಖೂಬಾ,ಎಮ್ ಎಲ್ ಸಿ ಮಲ್ಕಾಪುರೆ,ಬಿಜೆಪಿಯ ನಾಯಕರಾದ ಸೂರ್ಯಕಾಂತ ನಾಗಮರಪಳ್ಳಿ, ಮಲ್ಲಿಕಾರ್ಜುನ ಖೂಬಾ ಇನ್ನಿತರ ಬಿಜೆಪಿ ನಾಯಕರು ಪರಿಶೀಲನೆ ನಡೆಸಿ ಜಿಲ್ಲೆಯಲ್ಲಿ ರೈತರಿಗೆ ಆದ ನಷ್ಟದ ಕುರಿತು ಸಚಿವರಿಗೆ ಮಾಹಿತಿ ನೀಡಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್ .ಅಶೋಕ್ ,ಡಿಕೆಶಿ ಫೋನ್ ಕದ್ದಾಲಿಕೆ ಆರೋಪ ಕುರಿತಂತೆ ಮಾತನಾಡಿ ಕಾಂಗ್ರೆಸ್ ಪಕ್ಷದವರು ಫೋನ್ ಕದ್ದಾಲಿಕೆ ಕಂಡುಹಿಡಿದ ಪಿತಾಮಹರು ಎಂದು ಲೇವಡಿ ಮಾಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಇತರೆ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಯಾಗಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರ ಮೇಲೆ ಫೋನ್ ಟ್ಯಾಪಿಂಗ್ ವಿಚಾರದಲ್ಲಿ ಸಾವಿರಾರು ಆರೋಪಗಳಿವೆ. ಹಾಗಾಗಿ ಫೋನ್ ಟ್ಯಾಪಿಂಗ್ ಮಾಡಿದ ಭೂತದ ಬಾಯಲ್ಲಿ ಕದ್ದಾಲಿಕೆ ಆರೋಪ ಬಂದಿರುವುದು ಹಾಸ್ಯಾಸ್ಪದ ಎಂದರು.

ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಕಾರ್ಡ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರು ,ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ದತ್ತಾತ್ರೇಯ.ಸಿ.ಪಾಟೀಲರವರು ವಿತರಿಸಿದರು.ಸಭೆಯಲ್ಲಿ ಸಂಸದ ಭಗವಂತ ಖೂಬಾ ಮುಂತಾದವರು ಉಪಸ್ಥಿತರಿದ್ದರು.

ಆದಿಚುಂಚನಶ್ರೀಗಳ ಫೋನ್ ಕದ್ದಾಲಿಸಿದ ಆರೋಪ ಸಹ ಕಾಂಗ್ರೆಸ್ ಪಕ್ಷದ ಮೇಲಿದೆ. ಅದರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದ ಅವರು, ಡಿಕೆಶಿ ಅವರ ಫೋನ್ ಸರಿಯಾಗಿ ಕೇಳಿಸದಿದ್ದರೆ ಶಿವಾಜಿನಗರದ ಮೊಬೈಲ್ ಅಂಗಡಿಯಲ್ಲಿ ರಿಪೇರಿ ಮಾಡಿಸಿಕೊಳ್ಳಲಿ. ಆಗ ಸೋನಿಯಾ, ರಾಹುಲ್ ಅವರ ಧ್ವನಿ ಸರಿಯಾಗಿ ಕೇಳಿಸುತ್ತದೆ ಎಂದು ಕುಟುಕಿದ ಅಶೋಕ್, ಸಿದ್ದರಾಮಯ್ಯನವರ ಫೋನ್ ಅಂತೂ ಡಿಕೆಶಿ ಅವರಿಗೆ ಬರುವುದಿಲ್ಲ ಎಂದು ಕಿಡಿಕಾರಿದರು.

ವರದಿ:- ಪ್ರದೀಪ್ .ಜಿ.ಎಸ್.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ