ಬೀದರ್ ನಲ್ಲಿ ಇಂದು ಕೂಡಾ ವರುಣನ ಆರ್ಭಟ ಮುಂದುವರೆದಿದೆ.ಭಾಲ್ಕಿ, ಬಸವಕಲ್ಯಾಣದಲ್ಲಿ ಇಂದು ವರುಣನ ಅಬ್ಬರಿಸಿದ್ದು ಭಾಲ್ಕಿ ತಾಲೂಕಿನ ಉಚ್ಛಾ ಗ್ರಾಮ ಸಂಪೂರ್ಣ ಜಲಾವೃತವಾಗಿದೆ.
ಇಲ್ಲಿನ ಗ್ರಾಮದ ಕೆಲವು ಮನೆಗಳಿಗೂ ನೀರು ನುಗ್ಗಿದ್ದು ಸಾವಿರಾರು ಎಕರೆ ಕೃಷಿ ಬೆಳೆಗಳು ನಾಶವಾಗಿವೆ.

ಇನ್ನು ಮಳೆಯಿಂದಾಗಿ ಬಸವಕಲ್ಯಾಣ ತಾಲೂಕಿನ ಸಿರಗಾಪೂರ್ ಬಳಿಯ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು ಸಿರಗಾಪೂರ್ – ಕೋಹಿನ್ನೂರ್ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಇನ್ನೂ ಮೂರು ದಿನ ಬೀದರ್ ನಲ್ಲಿ ಅಬ್ಬರದ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ಎಚ್ಚರಿಸಿದೆ.