BREAKING NEWS
Search

add

BigBraking|ಉತ್ತರ ಕನ್ನಡ ಜಿಲ್ಲಾ ಪೊಲೀಸರ ಬರ್ಜರಿ ಕಾರ್ಯಾಚರಣೆ:20 ಓಸಿ ಅಡ್ಡದಮೇಲೆ ಏಕಕಾಲದಲ್ಲಿ ದಾಳಿ.21ಜನರ ಬಂಧನ

110

ಕಾರವಾರ :- ಓಸಿ ಅಡ್ಡೆಗಳ ಮೇಲೆ ದಾಳಿ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವಪ್ರಕಾಶ್ ದೇವರಾಜ್ ನೇತ್ರತ್ವದ ತಂಡ ಕಾರವಾರ ತಾಲೂಕಿನಲ್ಲಿ 20 ಓಸಿ ಅಡ್ಡೆಗಳ ಮೇಲೆ ದಾಳಿ ನಡೆಸಿ 21 ಜನರ ಬಂಧನ ಮಾಡಿದ ಘಟನೆ ಇಂದು ರಾತ್ರಿ ನಡೆದಿದೆ.

ಸುಮಾರು 60 ಪೊಲೀಸ್ ಸಿಬ್ಬಂದಿಗಳ ನೇತೃತ್ವದಲ್ಲಿ ಈ ದಾಳಿ ಏಕ ಕಾಲದಲ್ಲಿ ನಡೆದಿದ್ದು
ಅಂದಾಜು ಮೌಲ್ಯ ಒಂದು ಲಕ್ಷಕ್ಕೂ ಹೆಚ್ಚು ಹಣ ಹಾಗೂ ಇಪ್ಪತ್ತಕ್ಕೂ ಹೆಚ್ವು ಮೊಬೈಲ್ ,ಓಸಿ ಚೀಟಿಗಳನ್ನು ವಶಕ್ಕೆ ಪಡೆದಿದ್ದಾರೆ.

ಘಟನೆ ಸಂಬಂಧ ಕಾರವಾರ ನಗರ ಹಾಗೂ ಚಿತ್ತಾಕುಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ದಾಳಿಯಲ್ಲಿ ಇದೇ ಮೊದಲ ಬಾರಿಗೆ 60 ಪೊಲೀಸರು ಭಾಗಿಯಾಗಿದ್ದು ಪ್ರೊಪೇಷನರಿ ಎಸ್ .ಪಿ ಕುಷಾಲ್ ಚೋಕ್ಸಿ ,ಸಿಪಿಐ ಶರಣಗೌಡ ಪಾಟೀಲ್,ಕುಮಟಾಪಿ.ಎಸ್.ಐ ಹೊನ್ನಾವರ ಪಿ.ಎಸ್.ಐ ಅಶೋಕ್ ಸೇರಿದಂತೆ 20 ಅಧಿಕಾರಿಗಳು ಹಾಗೂ 40 ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ