ನಿಮ್ಮ ಮನೆಯಂಗಳದಲ್ಲಿ ಬಿಡುವ ರಂಗಮಾಲಿ ಸಸ್ಯದ ಮಹತ್ವ ತಿಳಿಯಿರಿ

140

ರಂಗಮಾಲಿ / Bixa orellena ( Bixaceae )

ರಂಗಮಾಲಿ ಹತ್ತು ಹದಿನೈದು ಅಡಿ ಎತ್ತರಕ್ಕೆ ಬೆಳೆಯುವ ಸಣ್ಣ ಮರ. ಹಾದಿ ಬದಿಯಲ್ಲಿ ಹೂತೋಟಗಳಲ್ಲಿ ಬೆಳೆಸುತ್ತಾರೆ. ಮಾಸಲು ಕೆಂಪು ಬಳಿ ಬಣ್ಣದ ಹೂಗಳನ್ನು ಬಿಡುತ್ತದೆ. ಇದರ ಕಾಯಿ ಅಂಡಾಕಾರವಾಗಿದ್ದು ಕಾಯಿಯ ಮೇಲ್ಮೈಯಲ್ಲಿ ಮೃದುವಾದ ಚುಂಗುಗಳಿರುತ್ತದೆ.

ಕಾಯಿಯ ಒಳಗಡೆ ಕೆಂಪು ಬಣ್ಣದ ಬೀಜಗಳು ಸಾಲಾಗಿ ಜೋಡಣೆಯಾಗಿರುತ್ತವೆ. ಹಸಿಯ ಬೀಜಗಳನ್ನು ಮುಟ್ಟಿದರೆ ಕುಂಕುಮ ಕೇಸರಿ ಬಣ್ಣ ಕೈಗೆ ಅಂಟಿಕೊಳ್ಳುತ್ತದೆ.

ಬೀಜಗಳನ್ನು ಆಹಾರ ಪದಾರ್ಥಗಳಿಗೆ ನೈಸರ್ಗಿಕ ಬಣ್ಣವಾಗಿ ಬಳಸಬಹುದಾಗಿದೆ. ದೀಪಾವಳಿ ಸಮಯದಲ್ಲೇ ರಂಗಮಾಲಿ ಕಾಯಿಕಚ್ಚುವುದು. ಹಸಿಯ ಬೀಜಗಳನ್ನು ಹಸುಗಳಿಗೆ ವಿಶೇಷ ಬಣ್ಣದ ಅಲಂಕಾರಕ್ಕಾಗಿ ಬಳಸುತ್ತಾರೆ.

ರಂಗಮಾಲಿ ಔಷಧ ಬಳಕೆ ಹೀಗಿದೆ :-

ರಂಗಮಾಲಿ ಬೀಜದ ಕಷಾಯವನ್ನು ಸೇವಿಸುತ್ತಿದ್ದರೆ ದೇಹಕ್ಕೆ ಅನೇಕ ಪೋಷಕಾಂಶಗಳು ದೊರೆಯುತ್ತದೆ.ದೇಹಕ್ಕೆ ಶಕ್ತಿ ವರ್ಧಕವೂ ಹೌದು.

ರಂಗಮಾಲಿ ಗಿಡದ ಎಲೆಯನ್ನು ಚೆನ್ನಾಗಿ ಅರೆದು ಗಾಯದ ಮೇಲೆ ಲೇಪನ ಮಾಡಿದರೆ ಬೇಗ ಗುಣವಾಗುವುದು. ಗಾಯದ ಕಲೆಯೂ ಉಳಿಯದು.

ಮರದ ತೊಗಟೆಗೆ ಗಾಯ ಮಾಡಿದರೆ ಹಳದಿ ಬಣ್ಣದ ದ್ರವ ಬರುತ್ತದೆ. ಅದನ್ನು ಸಂಗ್ರಹಿಸಿ ಅದಕ್ಕೆ ಸ್ವಲ್ಪ ಕೊಬ್ಬರಿ ಎಣ್ಣೆ ಮಿಶ್ರಣ ಮಾಡಿ ದೇಹದ ತುರಿಗೆ ಲೇಪನ ಮಾಡಿದರೆ ಗುಣವಾಗುವುದು.

ಲೇಖನ :- ಅನೇಗುಳಿ ಸುಬ್ಬರಾವ್. ಸಾಗರ.

ಔಷಧಿ ಸಸ್ಯಗಳ ಬಗ್ಗೆ ಮಾಹಿತಿ ಪಡೆಯಲು ಸಂಪರ್ಕಿಸುವವರು ಈ ನಂಬರ್ ಗೆ ಕಾಲ್ ಮಾಡಬಹುದು:-9480023939

” ಔಷಧೀಯ ಸಸ್ಯ ಗಳನ್ನು ಸಂರಕ್ಷಿಸಿ ಸಂವರ್ಧನೆ ಮಾಡೋಣ”
Leave a Reply

Your email address will not be published. Required fields are marked *

error: Content is protected !!