add

ಶಿರಸಿ|ಕಾಂಗ್ರೆಸ್ ಸೇರಿದ್ರ ಶಿವರಾಮ್ ಹೆಬ್ಬಾರ್!ಸಚಿವರ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರ ಫೋಟೋ ವೈರಲ್

1329

ಕಾರವಾರ :- ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಸಚಿವ ಶಿವರಾಮ್ ಹೆಬ್ಬಾರ್ ಇಂದಿನ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಆದ್ರೆ ಶಿರಸಿಯ ಕಮ್ಮರಡಿಯಲ್ಲಿ ಮೊನ್ನೆ ನಡೆದ ಏತನೀರಾವರಿ ಯೋಜನೆಯ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಹಿಂದಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಜಯಚಂದ್ರ ರವರ ಫೋಟೋ ದೊಂದಿಗೆ ಇಂದಿನ ಬಿಜೆಪಿ ಸರ್ಕಾರದ ಸಚಿವ ಶಿವರಾಮ್ ಹೆಬ್ಬಾರ್ ಫೋಟೋವನ್ನು ಹಾಕಿ ವಂದನೆ ಸಲ್ಲಿಸಲಾಗಿದ್ದು ಈ ಯೋಜನೆನ್ನು ಅನುಷ್ಟಾನ ಗೊಳಿಸಿದ್ದಕ್ಕೆ ಕಾಂಗ್ರೆಸ್ ಕಾರಣ ಎಂಬ ರೀತಿಯಲ್ಲಿ ಬಿಂಬಿಸಿ ಕುದ್ದು ಬಿಜೆಪಿ ಸಚಿವರ ಫೋಟೋ ಹಾಕಿ ಅಭಿನಂದಿಸಲಾಗಿತ್ತು.

ಇನ್ನು ಕಾರ್ಯಕ್ರಮದ ಸ್ಥಳದುದ್ದಕ್ಕೂ ಈ ರೀತಿಯ ಬ್ಯಾನರ್ ರಾರಾಜಿಸಿದ್ದು ಇದೀಗ ಫೋಟೋ ವೈರಲ್ ಆಗುತ್ತಿದೆ.

ಇನ್ನು ಕಮ್ಮರಡಿಯ ಈ ನೀರಾವರಿ ಯೋಜನೆಯನ್ನು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಜೂರು ಮಾಡಿದ್ದರು. ಹೀಗಾಗಿ ಗ್ರಾಮದ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯನವರ ಹಾಗೂ ಸಚಿವ ಜಯಚಂದ್ರರವರ ಫೋಟೋ ಜೊತೆ ಹಾಲಿ ಬಿಜೆಪಿ ಸಚಿವರ ಫೋಟೋ ಸಹ ಹಾಕಿ ಈ ಯೋಜನೆ ಕಾಂಗ್ರೆಸ್ ಸರ್ಕಾರದ್ದು ಎಂದು ಬ್ಯಾನರ್ ನಲ್ಲಿ ತೋರಿಸುವ ಪ್ರಯತ್ನ ಮಾಡಿದ್ದರು. ಇನ್ನು ಈ ರೀತಿ ಆದರೂ ಕುದ್ದು ಶಿವರಾಮ ಹೆಬ್ಬಾರ್ ಕಾರ್ಯಕ್ರಮದಲ್ಲಿ ಭಾಗವಹೊಸಿದ್ದು ಈ ಬಗ್ಗೆ ತಕರಾರು ಎತ್ತದಿರುವುದು ಹಳೇ ಹೆಂಡತಿಯನ್ನು ಬಿಡಲು ಸಾಧ್ಯವೇ ಎಂಬ ರೀತಿಯಲ್ಲಿ ಜನ ಹಾಸ್ಯ ಮಾಡಿ ಟ್ರೋಲ್ ಮಾಡುವಂತಾಗಿದ್ದು ಈಗ ಸಖತ್ ವೈರಲ್ ಆಗುತ್ತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ