ಲೋಕಕಲ್ಯಾಣಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷರಿಂದ ಗೋಕರ್ಣ ಮಹಾಬಲನಿಗೆ ವಿಶೇಷ ಪೂಜೆ.

415

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಶ್ರೀ ಕ್ಷೇತ್ರ ಗೋಕರ್ಣದ ಮಹಾಬಲೇಶ್ವರ ದೇವಾಲಯಕ್ಕೆ ಇಂದು ಕರ್ನಾಟಕದ ರಾಜ್ಯ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಸಂಸದ ನಳಿನ ಕುಮಾರ ಕಟೀಲವರು ಆಗಮಿಸಿ ಆತ್ಮ ಲಿಂಗಕ್ಕೆ ವಿಶೇಷ ಪೂಜೆ ನೆರವೇರಿಸಿದರು.

ಗ್ರಾಮಪಂಚಾಯ್ತಿ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾ ಪ್ರವಾಸ ಮಾಡುತ್ತಿರುವ ನಳೀನ್ ಕುಮಾರ್ ಕಟೀಲ್ ರವರು ಹುಬ್ಬಳ್ಳಿ ಯಿಂದ ಕುಮಟಾಕ್ಕೆ ಆಗಮಿಸಿದ್ದರು. ಈ ವೇಳೆ ಗೋಕರ್ಣಕ್ಕೆ ತೆರಳಿದ ಅವರು ಲೋಕ ಕಲ್ಯಾಣಾರ್ಥವಾಗಿ ಗಂಗಾ ಜಲಾಭಿಷೇಕ, ಅರ್ಚನೆ ಮಾಡಿ ಮಹಾಬಲೇಶ್ವರನಲ್ಲಿ ಪ್ರಾರ್ಥಿಸಿದರು.

ದೇವಾಲಯದ ಆಡಳಿತಾಧಿಕಾರಿಗಳಾದ
ಜಿ.ಕೆ.ಹೆಗಡೆ ಸಂಸದರನ್ನು ಸ್ವಾಗತಿಸಿದರು.
ವೇ. ಅಮೃತೇಶ ಭಟ್ ಹಿರೇ ಮತ್ತು ಉಪಾಧಿವಂತ ಮಂಡಳಿಯವರು ಪೂಜಾ ಕೈಂಕರ್ಯ ನೆರವೇರಿಸಿದರು. ನಂತರ ಶ್ರೀ ದೇವಾಲಯದ ವತಿಯಿಂದ ಸನ್ಮಾನಿಸಲಾಯಿತು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ