BREAKING NEWS
Search

ಡಿ5 ರೊಳಗೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಏನೇನು ಕನಸು ಇದೆಯೋ ನನಸು ಮಾಡಿಕೊಳ್ಳಲಿ- ಬಿಕೆ ಹರಿಪ್ರಸಾದ್

150

ಕಾರವಾರ:-ಡಿಸೆಂಬರ್ ಐದನೇ ತಾರೀಕಿನವರೆಗೆ ಮಾತ್ರ ಯಡಿಯೂರಪ್ಪನವರು ಮುಖ್ಯಂತ್ರಿಯಾಗಿ ಇರುತ್ತಾರೆ ಅಷ್ಟೊರೊಳಗೆ ಏನೇನು ಕನಸಿದೆಯೋ ಅದನ್ನು ನನಸು ಮಾಡಿಕೊಳ್ಳುವುದು ಒಳ್ಳೆಯದು,ಮಹರಾಷ್ಟ್ರದಲ್ಲಿ ಪಾಟ್ನವಿಸ್ ಗೆ ಆದ ಗತಿಯೇ ಯಡಿಯೂರಪ್ಪನವರಿಗೂ ಆಗುತ್ತದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ಇಂದು ಯಲ್ಲಾಪುರದಲ್ಲಿ ಕಾಂಗ್ರೆಸ್ ಅಭ್ಯಾರ್ಥಿ ಭೀಮಣ್ಣ ನಾಯ್ಕ ಪರ ಪ್ರಚಾರಕ್ಕೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪನವರು 14 ಜನ ಎಮ್.ಎಲ್.ಎ ಗಳನ್ನು ಪ್ರಾಣಿಗಳಂತೆ ಕರೀದಿ ಮಾಡಿ ಕರೆದುಕೊಂಡಿದ್ದಾರೆ,ಮಾನ ಮರ್ಯಾದೆ ಇದ್ದವರು ಮನುಷ್ಯರನ್ನು ಕರೀದಿ ಮಾಡುವುದಿಲ್ಲ,ಮಾನ ಮರ್ಯಾದೆ ಇದ್ದವರು ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎನ್ನುತ್ತಾರೆ.

ಮಾನ ಮರ್ಯಾದೆ ಇಲ್ಲದವರ ಹತ್ತಿರ ಏನು ಹೇಳಬೇಕು ಎಂದರು.

ರಾಜ್ಯದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ದೇವೇಗೌಡರು ಮಹರಾಷ್ಟ್ರದಲ್ಲಿ ಶರತ್ ಪವಾರ್ ನಿರ್ವಹಿಸಿದ ಪಾತ್ರ ಇಲ್ಲಿ ಇವರು ನಿರ್ವಹಿಸಬೇಕು,ಕೋಮುವಾದಿ ಬಿಜೆಪಿಯನ್ನು ದೂರವಿಡುತ್ತಾರೆ ಎನ್ನುವ ನಂಬಿಕೆ ಇದೆ,ಅವರು ಮನಸ್ಸು ಮಾಡಿದರೆ ಸಾದ್ಯ ಎಂದು ಚುನಾವಣೆ ನಂತರ ಜೆಡಿಎಸ್ ಜೊತೆ ಮೈತ್ರಿ ಸುಳಿವು ನೀಡಿದರು.

ಗೋವಾದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವ ಕುರಿತು ಪ್ರತಿಕ್ರಿಯಿಸಿದ ಅವರು ಗೋವಾದಲ್ಲಿ ಅಯಾರಾಮ್,ಜಯರಾಮ್ ಬಹಳಾ ಇರುವುದರಿಂದ ಏನಾದ್ರೂ ಆಗುವ ಸಾಧ್ಯತೆಗಳಿವೆ. 9 ಜನ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಕರೀದಿ ಮಾಡಿತ್ತು.

ಅವರೆಲ್ಲರೂ ವಾಪಾಸ್ ಬರುವ ಸಾಧ್ಯತೆಗಳಿವೆ ಎಂದರು.ಇನ್ನು ರಾಜ್ಯದಲ್ಲಿ ಹನಿಟ್ರಾಪ್ ಸದ್ದು ಮಾಡುತಿದ್ದು ಹನಿ ಟ್ರಾಪ್ ನಲ್ಲ ಸಿಕ್ಕಿಹಾಕಿಕೊಂಡ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಅಂಹಕಾರ ಕಲಿಸುತ್ತೆ ಪಾಠ!

ಯಲ್ಲಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ನಮ್ಮ ಪಕ್ಷದಿಂದ ಗೆದ್ದು ತಾವೇ ದೊಡ್ಡ ನಾಯಕರು ಎಂದು ಅಹಂಕಾರದಿಂದ ಬೀಗುತಿದ್ದಾರೆ.

ಅವರು ಪಕ್ಷ ಕ್ಕಿಂತ ದೊಡ್ಡವರಲ್ಲ, ಕಾಂಗ್ರೆಸ್ ನಿಂದ ಗೆದ್ದವರು ಇಲ್ಲಿ ಕಾಂಗ್ರೆಸ್ ದೊಡ್ಡದು ನಮ್ಮ ಪಕ್ಷದಿಂದ ಗೆದ್ದು ತಾನೇ ದೊಡ್ಡ ನಾಯಕರೆಂದು ಬೀಗುತಿದ್ದಾರೆ.

ಅವರು ಅಷ್ಟು ದೊಡ್ಡ ನಾಯಕರಾಗಿದ್ದರೆ ಪಕ್ಷೇತರರಾಗಿ ನಿಂತು ಚುನಾವಣೆ ಎದುರಿಸುತಿದ್ದರು ಎಂದು ಹೆಬ್ಬಾರ್ ಗೆ ಟಾಂಗ್ ನೀಡಿದರು.

ಯಾರನ್ನೂ ಪಕ್ಷ ತಲೆಮೇಲೆ ಕೂರಿಸಿಕೊಂಡಿಲ್ಲ!

ಚುನಾವಣೆ ನಂತರ ಜೆಡಿಎಸ್ ,ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ ಸಿದ್ದರಾಮಯ್ಯ ನವರನ್ನು ಸೈಡ್ ಲೈನ್ ಮಾಡಲಾಗುತ್ತದೆಯೇ ಎಂಬುದಕ್ಕೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹರಿಪ್ರಸಾದ್ ರವರು ಯಾವ ನಾಯಕರನ್ನೂ ತಲೆ ಮೇಲೆ ಕೂರಿಸಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಮಾಡುವುದಿಲ್ಲ,ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ ,ಪಕ್ಷವೇ ದೊಡ್ಡದು ಎಂದರು.
Leave a Reply

Your email address will not be published. Required fields are marked *