ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ-ದರೋಡೆಕೂರರ ಬಂಧನ

924

ಕಾರವಾರ :- ಮಾರಕಾಸ್ತ್ರಗಳನ್ನು ಬಳಸಿಕೊಂಡು ದರೋಡೆ ನಡೆಸಲು ಹೊರಟಿದ್ದ ಯುವಕರ ಗ್ಯಾಂಗ್ ಒಂದನ್ನು ಶಿರಸಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ ಘಟನೆ ಇಂದು ರಾತ್ರಿ ನಡೆದಿದೆ.

ಬಂಧಿತರಿಂದ ದರೋಡೆಗೆ ಬಳಸುವ ವಸ್ತುಗಳು ಹಾಗೂ ಗಾಂಜಾ ವಶಪಡಿಸಿಕೊಂಡ ಘಟನೆ ಶಿರಸಿಯ ಯಲ್ಲಾಪುರ ರಸ್ತೆಯ ಬಳಿ ನಡೆದಿದೆ.

ಶಿರಸಿಯ ವಿದ್ಯಾ ನಗರದ ಮುರುಗೇಶ ಪೂಜಾರಿ (೨೦), ಕಸ್ತೂರಬಾ ನಗರದ ಮಹಮ್ಮದ್ ಯಾಸೀನ್ (೨೩), ಸವಣೂರಿನ ಮಯಾನಿ ಮೊಹಲ್ಲಾದ ಅಜ್ಮಿತ್ ಅಸ್ಲಾಂ (೧೯), ಗುಲಾಮ್ ಮುಸ್ತಫಾ (೧೯), ಗಾಂಧಿ ನಗರದ ಮರ್ದಾನ್ ಶಫಿಸಾಬ (೧೯) ಹಾಗೂ ಮರಾಠಿಕೊಪ್ಪದ ಚರಣ್ ನಾಯ್ಕ (೧೯) ಬಂಧಿತ ಆರೋಪಿಗಳಾಗಿದ್ದಾರೆ.

ಇವರಲ್ಲಿ ಕೃತ್ಯದ ಮುಖ್ಯ ಆರೋಪಿಯಾಗಿದ್ದ ವಿದ್ಯಾ ನಗರದ ಮಂಜುನಾಥ ಅಲಿಯಾಸ್ ಮಿಂಟಾ ಮಾರುತಿ ಪೂಜಾರಿ ಪರಾರಿಯಾಗಿದ್ದಾನೆ‌.

ಬಂಧಿತರಿಂದ ಮಾರಕಾಸ್ತ್ರಗಳು,ಮೋಟಾರ ಸೈಕಲ್ ಮತ್ತು ಅಂದಾಜು ೨೦ ಸಾವಿರ ಮೌಲ್ಯದ ೯೧೨ ಗ್ರಾಂ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.ಡಿಎಸ್ಪಿ ಜಿ.ಟಿ.ನಾಯಕ, ಸಿಪಿಐ ಪ್ರದೀಪ ಮಾರ್ಗದರ್ಶನದಲ್ಲಿ ಶಿರಸಿ ಮಾರುಕಟ್ಟೆ ಠಾಣೆ ಪಿಎಸ್ಐ ನಾಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ