BREAKING NEWS
Search

ವಾಟ್ಸಾಪ್ ಮತ್ತು ಫೇಸ್ ಬುಕ್ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಸಿ.ಎ.ಐ.ಟಿ ಅರ್ಜಿ!

694

ನವದೆಹಲಿ: ತನ್ನ ಹೊಸ ಗೌಪ್ಯತಾ ನೀತಿಗಾಗಿ ವಾಟ್ಸಾಪ್ ಮತ್ತು ಫೇಸ್ ಬುಕ್ ಅನ್ನು ವಜಾಗೊಳಿಸುವಂತೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟವು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ.

ವಾಟ್ಸ್ ಆಪ್ ನ ಉದ್ದೇಶಿತ ಗೌಪ್ಯತಾ ನೀತಿಯು ಭಾರತದ ಸಂವಿಧಾನವು ಒದಗಿಸಿರುವ ನಾಗರಿಕರ ವಿವಿಧ ಮೂಲಭೂತ ಹಕ್ಕುಗಳನ್ನ ಉಲ್ಲಂಘಿಸುತ್ತಿದೆ ಎಂದು ಸಿಎಐಟಿ ತನ್ನ ಅರ್ಜಿಯಲ್ಲಿ ಆರೋಪಿಸಿ ಸಲ್ಲಿಸಿದೆ.

ವಾಟ್ಸ್ ಆ್ಯಪ್ ನಂತಹ ಕಂಪನಿಗಳು ತಂತ್ರಜ್ಞಾನ ಕಂಪನಿಗಳನ್ನ ನಡೆಸಲು ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನ ರೂಪಿಸಬೇಕು ಮತ್ತು ನಾಗರಿಕರು ಮತ್ತು ಉದ್ಯಮಗಳ ಖಾಸಗಿತನವನ್ನ ರಕ್ಷಿಸುವ ನೀತಿಗಳನ್ನ ರೂಪಿಸಬೇಕು ಎಂದು ಸಿ.ಎ.ಐ.ಟಿ ಹೇಳಿದೆ.

ಇನ್ನು ಅರ್ಜಿಯಲ್ಲಿ ಭಾರತೀಯ ಬಳಕೆದಾರರ ಡೇಟಾವನ್ನ ಹೇಗೆ ದುರ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ವಿವರಿಸಲಾಗಿದೆ.

ಅಡ್ವೊಕೇಟ್ ಅಬೀರ್ ರಾಯ್ ಅವರು ಇಂದು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದು ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಿಐಐಟಿ ಯ ರಾಷ್ಟ್ರೀಯ ಅಧ್ಯಕ್ಷ ಶ್ರೀ ಬಿಸಿ ಭಾರ್ತಿಯಾ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ ವಾಲ್ ಆರೋಪಿಸಿದ್ದಾರೆ.

ವಾಟ್ಸಾಪ್ ವೈಯಕ್ತಿಕ ಬಳಕೆದಾರರ ಡೇಟಾವನ್ನ ವಂಚಿಸುತ್ತಿದೆ. ಭಾರತದಲ್ಲಿ ಬಿಡುಗಡೆಗೊಂಡಾಗ, ಡೇಟಾ ಮತ್ತು ಪ್ರಬಲ ಗೌಪ್ಯತೆ ತತ್ವಗಳನ್ನ ಹಂಚಿಕೊಳ್ಳುವುದಿಲ್ಲ ಎಂಬ ಭರವಸೆಯ ಆಧಾರದ ಮೇಲೆ ವಾಟ್ಸಾಪ್ ಬಳಕೆದಾರರನ್ನು ಆಕರ್ಷಿಸಿತ್ತು ಎಂದಿದ್ದಾರೆ.

ಇನ್ನು ವಾಟ್ಸ್ ಅಪ್ ಕಂಪನಿ ತನ್ನ ಗೌಪ್ಯತಾ ನೀತಿಯನ್ನು ಪೆ8 ರ ವರೆಗೆ ಬದಲಿಸುವುದಿಲ್ಲ ಹಾಗೂ ಗ್ರಾಹಕರ ಅಕೌಂಟ್ ಡಿಲೀಟ್ ಮಾಡುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದು ಬಳಕೆದಾರರಿಗೆ ಸದ್ಯಕ್ಕೆ ರಿಲೀಪ್ ಸಿಕ್ಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!