ಕಾಲ್ ಗರ್ಲ ಮೋಹಕ್ಕೆ ಬಿದ್ದ ಶಿರಸಿಯ ಕಂಡಕ್ಟರ್! ಮುಂದೇನಾಯ್ತು ಗೊತ್ತಾ?

1824

ಕಾರವಾರ:- ಕಾಲ್ ಗರ್ಲ ಮೋಹಕ್ಕೆ ಬಿದ್ದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿರ್ವಾಕರೊಬ್ಬರು ಆಕೆಯ ಮಾತಿಗೆ ಮರುಳಾಗಿ ₹86 ಸಾವಿರ ಪಂಗನಾಮ ಹಾಕಿಸಿಕೊಂಡು ಪೊಲೀಸರಿಗೆ ದೂರು ನೀಡಿದ್ದಾನೆ.

ಶಿರಸಿ ಡಿಪೋದ ಶಿಕಾರಿಪುರ ಮೂಲದ 28 ವರ್ಷ ವಯೋಮಾನದ ಕಂಡಕ್ಟರ್ ತನ್ನ ***ತೀರಿಸಿಕೊಳ್ಳಲು ಗೂಗಲ್ ನ ಮೊರೆ ಹೋದ ಈತ ಗೂಗಲ್ ನಲ್ಲಿ ಕಾಲ್ ಗರ್ಲ ಎಂದು ಹುಡುಕಾಟ ನಡೆಸಿದ್ದಾನೆ.

ನಲ್ಲಿ “ಇಂಡಿಪೆಂಡೆಂಟ್ ಕಾಲ್ ಗರ್ಲ” ಎಂಬ ವೆಬ್ ಸೈಟ್ ನಲ್ಲಿ ಇದ್ದ ನಂಬರ್ ಗೆ ಕರೆ ಮಾಡಿದ್ದಾನೆ.
ಕರೆ ಸ್ವೀಕರಿಸಿದ ಮಹಿಳೆ ತಾವು ಶಿರಸಿ ಮಾರಿಕಾಂಬ ದೇವಸ್ಥಾನದ ರಸ್ತೆಯಲ್ಲಿ ಇರುವುದಾಗಿ ತಿಳಿಸಿದ್ದಳು ಈ ವೇಳೆ ತನ್ನ ಮೊಬೈಲ್ ಗೆ ಪೋನ್ ಪೇ ಖಾತೆಗೆ ₹3ಸಾವಿರ ಹಾಕುವುದಾದರೇ ಜೊತೆಗೆ ಕರೆದುಕೊಂಡು ಹೋಗುವುದಾಗಿ ಷರತ್ತು ಹಾಕಿದ್ದಳು. ಅವಳ ಷರತ್ತಿಗೆ ಒಪ್ಪಿದ ಈತ ಹಣ ಪಾವತಿಸಿದ್ದಾನೆ.

ನಂತರ ಆಕೆಯ ನಯದ ಮಾತಿಗೆ ಮರುಳಾಗಿ ಮತ್ತೆ ಹಣ ಕೇಳಿದ ಆಕೆಗೆ ತನ್ನ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹26 ಸಾವಿರ ವರ್ಗಾಯಿಸಿದ್ದರು.
ಆಕೆಯ ಮಾತಿಗೆ ಮರುಳಾಗಿದ್ದ ಈ ಕಂಡಕ್ಟರ್ ತನ್ನ ಎಟಿಎಂ ಕಾರ್ಡ ನ ಸಂಖ್ಯೆ ಹಾಗೂ ಓಟಿಪಿ ಯನ್ನು ಆಕೆಗೆ ನೀಡಿದ್ದಾನೆ.
ಅದರ ಮೂಲಕ ಆಕೆ ಆತನ ಖಾತೆಯಲ್ಲಿದ್ದ ₹50 ಸಾವಿರ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದು ಒಟ್ಟು ₹86 ಸಾವಿರ ಪೀಕಿದ್ದಾಳೆ.
ಇನ್ನು ಆಕೆಗಾಗಿ ಶಿರಸಿ ಮಾರಿಕಾಂಬಾ ದೇವಸ್ಥಾನ ರಸ್ತೆಯಲ್ಲಿ ಕಾದ ಆತ ಆಕೆ ಬರದಿದ್ದನ್ನು ಕಂಡು ತಾನು ಮೋಸ ಹೋದ ಕುರಿತು ಅರಿವಾಗಿ ಕಾರವಾರದ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾನೆ.

ದೂರು ನೀಡಿ ಕಾಣೆಯಾದ ಕಂಡಕ್ಟರ್!

ಇನ್ನು ಮೋಹದ ಕಾಲ್ ಗರ್ಲ ದ್ವನಿಗೆ ಮರುಳಾಗಿ ತನ್ನ ಖಾತೆ ಯಲ್ಲಿ ಇದ್ದ ಹಣ ಕಾಲಿ ಮಾಡಿಕೊಂಡಿದ್ದ ಈತ ಶಾಕ್ ಗೆ ಒಳಗಾಗಿದ್ದ . ತನ್ನ ತಪ್ಪಿನ ಅರಿವಾದ ಈತ ಗಟ್ಟಿ ಮನಸ್ಸಿನಿಂದ ದೂರು ನೀಡಿದ್ದ.ಆದರೇ ಈ ಸುದ್ದಿ ಹೊರಜಗತ್ತಿಗೆ ತಿಳಿಯುತಿದ್ದಂತೆ ಆತ ಮರ್ಯಾದೆಗೆ ಅಂಜಿ ತಲೆಮರಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದ್ದು ಈತನನ್ನು ಸಂಪರ್ಕಿಸಲು ಕನ್ನಡ ವಾಣಿ ಟೀಮ್ ಪ್ರಯತ್ನಿಸಿದ್ದು ಆದರೇ ಈತ ಸಿಗಲಿಲ್ಲ.
ಏನೇ ಆಗಲಿ ಮೋಸಹೋದರೂ ದೈರ್ಯದಿಂದ ದೂರು ಕೊಡುವ ಮೂಲಕ ಮುಂದೆ ಮೊತ್ತೊಬ್ಬರಿಗೆ ವಂಚನೆ ಆಗದಂತೆ ತಡೆಯುವಲ್ಲಿ ಈತ ಪ್ರಯತ್ನ ಶ್ಲಾಘನೀಯ.
Leave a Reply

Your email address will not be published. Required fields are marked *