BREAKING NEWS
Search

ಕೊರೋನಾ ತರಬೇಡಿ ರಸ್ತೆ ಬಂದ್ ಮಾಡಿದ್ರು ಶಿರಸಿ,ಸಾಗರದ ಜನ. ಏಕೇ ಗೊತ್ತಾ?

604

ಕಾರವಾರ/ಶಿವಮೊಗ್ಗ :- ಕೊರೋನಾ ವೈರೆಸ್ ಇಡೀ ದೇಶವನ್ನೇ ಆವರಿಸಿದ್ದು ಸರ್ಕಾರ ಇದರ ಹತೋಟಿಗೆ 21 ದಿನಗಳ ಕಾಲ ದೇಶವನ್ನೇ ಲಾಕ್ ಡೌನ್ ಮಾಡಿದೆ. ಆದರೆ ಹಲವರು ವಿದೇಶದಿಂದ ಬಂದು ಇಲ್ಲಿನ ಜನರಿಗೆ ಕೊರೋನಾ ಮಹಾಮಾರಿ ಹತ್ತಿಸಿದ್ದಾರೆ. ಇನ್ನು ಇದರ ಹತೋಟಿಗೆ ಜನರು ಮನೆ ಬಿಟ್ಟು ಹೊರಬಾರದೆಂದು ನಿರ್ಭಂಧ ಹಾಕಿದ್ರೂ ಸರ್ಕಾರದ ಆದೇಶಕ್ಕೆ ಕಿಮ್ಮತ್ತು ಕೊಡದೇ ಬೇಕಾಬಿಟ್ಟಿ ಜನ ಓಡಾಡುತಿದ್ದಾರೆ. ಹೀಗಾಗಿ ಹಲವು ಹಳ್ಳಿಗಳಲ್ಲಿ ಪ್ರಜ್ಞಾವಂತ ಜನರು ತಮಗೆ ತಾವೇ ನಿರ್ಭಂಧ ಹಾಕಿಕೊಳ್ಳುವ ಜೊತೆ ತಮ್ಮ ಊರಿಗೆ ಬರುವ ಹೋಗುವ ಸಂಚಾರವನ್ನೇ ಬಂದ್ ಮಾಡುವ ಮೂಲಕ ದೇಶದ ದ್ವನಿಗೆ ದ್ವನಿಯಾಗಿದ್ದಾರೆ‌.

ಶಿರಸಿಯ ಉಪ್ಪಳೇಕೊಪ್ಪದಲ್ಲಿ ರಸ್ತೆ ಬಂದ್!

ನಗರದ ಜನರಿಗಿಂತವ ಹಳ್ಳಿಗಳಲ್ಲಿ ಮಾತ್ರ ಜನರಲ್ಲಿ ಜಾಗೃತಿ ಮೂಡಿದ್ದು ತಮ್ಮ ಊರಿಗೆ ದಿಗ್ಭಂಧನ ಹಾಕಿಕೊಳ್ಳುವ ಮೂಲಕ ಊರಿನಿಂದ ಯಾರು ಹೊರಹೋಗದಂತೆ ಹಾಗೂ ಊರಿಗೆ ಯಾರು ಬರದಂತೆ ರಸ್ತೆಯನ್ನು ಬಂದ್ ಮಾಡಿ ನಾಮಫಲಕ ಅಳವಡಿಸುವ ಮೂಲಕ ದೇಶದ ದ್ವನಿಗೆ ದ್ವನಿಯಾಗಿದ್ದಾರೆ .

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಉಪ್ಪಳೇಕೊಪ್ಪ ದ ಗ್ರಾಮಸ್ಥರು.
ಗ್ರಾಮದ ಜನರಿಗೆ ಕೊರೋನಾ ಸೊಂಕು ಹರಡದಂತೆ ಗ್ರಾಮದ ರಸ್ತೆ ಬಂದ್ ಮಾಡಿರುವುದಾಗಿ ಬ್ಯಾನರ್ ಅಳವಡಿಸಿ ರಸ್ತೆಗೆ ಬಿದುರಿನ ಅಡ್ಡಿಗಳನ್ನಿಟ್ಟು ಸಂಚಾರವನ್ನೇ ಬಂದ್ ಮಾಡಿ ಕರೋನಾ ವಿರುದ್ಧ ಹೋರಾಟಕ್ಕೆ ಬೆಂಬಲ ವೆಕ್ತಪಡಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀನಗರ ಬಡಾವಣೆ ಬಂದ್!


ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಸಹ ಇದೇ ಮಾದರಿಯನ್ನು ಅನುಸರಿಸಿದ್ದಾರೆ. ಜನರು ಪ್ರತಿಭಾರಿ ಓಡಾಡುವುದರಿಂದ ಹಾಗೂ ಸಂಪರ್ಕ ಬೆಳಸುವುದರಿಂದ ಕೊರೋನಾ ವೈರೆಸ್ ಹರಡಬಾರದು ಎಂಬ ಕಾರಣದಿಂದ ಸಾಗರ ನಗರದ ಶ್ರೀನಗರ ಬಡಾವಣೆಗೆ ಅಲ್ಲಿನ ಯುವಕ ಸಂಘವು covid-19 ತಡೆಯಲು ತಮ್ಮ ಬಡಾವಣೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿದ್ದು ರಸ್ತೆಗೆ ಅಡ್ಡಲಾಗಿ ಹಗ್ಗ ಕಟ್ಟಿ ನಾಮಫಲಕ ಹಾಕುವ ಮೂಲಕ ಜಾಗ್ರತೆಯ ಸಂದೇಶ ರವಾನಿಸಿದೆ.

ವೀಡಿಯೋ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ:-
Leave a Reply

Your email address will not be published. Required fields are marked *