ಕುಮಟಾ:ಕಲ್ಲು ತೆಗೆಯಲು ಹೋದಾಗ ಪತ್ತೆಯಾಯ್ತು ಸುರಂಗ!

412

ಕಾರವಾರ:- ಕುಮಟಾ ತಾಲೂಕಿನ ಅಳಕೋಡ ಪಂಚಾಯಿತಿ ವ್ಯಾಪ್ತಿಯ ಬಂಡಿವಾಳದ ತಲಗದ್ದೆಯ ಒಳಬೇಣದಲ್ಲಿ ಶನಿವಾರ ಸಂಜೆ ಬೃಹತ್ ಸುರಂಗವೊಂದು ಪತ್ತೆಯಾಗಿದ್ದು ಜನರ ಆಕರ್ಷಣೆ ಹಾಗೂ ಕುತೂಹಲದ ಸ್ಥಳವಾಗಿ ಮಾರ್ಪಟ್ಟಿದೆ.

ಕಟ್ಟಡ ನಿರ್ವಣಕ್ಕೆ ಬೇಕಾದ ಚೀರೇಕಲ್ಲನ್ನು ತೆಗೆಯಲು ಜಾಗ ಸ್ವಚ್ಛಗೊಳಿಸುವ ವೇಳೆ ಭೂಮಿಯೊಳಗೆ ವಿಶಾಲವಾದ ಗುಹೆ ಇರುವುದು ಪತ್ತೆಯಾಗಿದೆ.

ನೆಲವನ್ನು ಯಂತ್ರದಲ್ಲಿ ಕೊರೆಯುವಾಗ ಸುರಂಗದ ಮೇಲ್ಭಾಗ ಸೀಳಿಕೊಂಡು ರಂಧ್ರವಾಗಿದೆ. ರಂಧ್ರವನ್ನು ದೊಡ್ಡದು ಮಾಡಿ ಜನ ಸುರಂಗದ ಒಳಗಿಳಿದು ಪರಿಶೀಲಿಸಿದ್ದಾರೆ.

ಇದೊಂದು ಮಾನವ ಗಾತ್ರದ ಸುರಂಗವಾಗಿದ್ದು, ಒಳಗೆ ಹೆಡ್ಲೈಟ್ ಬೆಳಕು ಫರ್ಲಾಂಗ್ಗಟ್ಟಲೆ ದೂರಕ್ಕೆ ಹೋಗುತ್ತದೆ. ಉಸಿರಾಡಲು ಕಷ್ಟವಾಗುವುದರಿಂದ ಯಾರೂ ಕೂಡ ಬಳ ಹೋಗುವ ಸಾಹಸ ಮಾಡಿಲ್ಲ.

ಸುರಂಗದ ಗೋಡೆಗಳು ಸಪಾಟಾಗಿದ್ದು ಮಳೆಗಾಲದಲ್ಲಿ ಬೃಹತ್ ನೀರಿನ ಹರಿವಿನ ಲಕ್ಷಣ ಹೊಂದಿದೆ ಎನ್ನಲಾಗುತಿದ್ದು ಈ ಸುರಂಗದ ಬಗ್ಗೆ ಹೆಚ್ಚಿನ ಶೋಧ ಆಗಬೇಕಿದೆ.

ಇನ್ನು ಅಳಕೋಡ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜರ ಕಾಲದ ಕೆಲವು ಪುರಾತನ ದೇವಾಲಯಗಳಿದ್ದು, ಈಗ ಕಂಡು ಬಂದ ಸುರಂಗ ಮಾನವ ನಿರ್ವಿುತವೇ ಇರಬಹುದೆಂಬ ಅನುಮಾನವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಆದರೆ, ಭೂಮಿಯೊಳಗೆ ನೀರಿನ ಹರಿವಿನ ನೈಸರ್ಗಿಕ ಟೊಳ್ಳು ಇದು ಎಂಬುದು ಮೇಲ್ನೋಟಕ್ಕೆ ಅರ್ಥವಾಗುವಂಥದ್ದು ಎಂಬುದು ಊರಿನ ಹಿರಿಯರ ಅಭಿಪ್ರಾಯ. ಒಟ್ಟಾರೆ ಬಂಡಿವಾಳ ತಲಗದ್ದೆಯ ಸುರಂಗ ಜನರ ಆಕರ್ಷಣೆಯ ಕೇಂದ್ರವಾಗಿದ್ದು ಎಲ್ಲರನ್ನೂ ಇತ್ತ ಸೆಳೆಯುತ್ತಿದೆ.
Leave a Reply

Your email address will not be published. Required fields are marked *

error: Content is protected !!