BREAKING NEWS
Search

ರೈತರ ಮನೆಯಂಗಳದಲ್ಲಿ ‘ಅನ್ನದಂಗಳದ ಮಾತುಕತೆ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶೋಭಾ ಕರಂದ್ಲಾಜೆ- ಕುದ್ದು ನೋವು ತೋಡುಗೊಂಡ ಬಿಜೆಪಿ ಎಮ್.ಎಲ್.ಸಿ

730

ಕಾರವಾರ :- ಮಳೆಯ ಅಬ್ಬರದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ಅಂಕೋಲ ತಾಲೂಕಿನ ರೈತರ ಜಮೀನುಗಳು ಕೊಚ್ಚಿಹೋಗುವ ಜೊತೆಗೆ ಹಲವು ಊರುಗಳ ಸಂಪರ್ಕ ಸಹ ಇಲ್ಲವಾಗಿದೆ. ಹೀಗಿರುವಾಗ ಇಂದು ಅಂಕೋಲ ತಾಲೂಕಿನ ಹಾಗೂ ಯಲ್ಲಾಪುರ ಗಡಿಯನ್ನು ಹಂಚಿಕೊಂಡ ಅಂಕೋಲಾ ತಾಲ್ಲೂಕಿನ ಡೊಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಯಂತ ಕುಗ್ರಾಮ ಕೈಗಡಿಯ ಕೃಷಿಕರಾದ ರಾಮಚಂದ್ರ ಹೆಗಡೆ, ಸುಬ್ರಾಯ ಹೆಗಡೆ ಅವರ ಮನೆಯಂಗಳದಲ್ಲಿ ಇಂದು
ಅನ್ನದಂಗಳದ ಮಾತುಕತೆ ಸಂಭ್ರಮ .

ಗ್ರಾಮದ ಸುತ್ತಲಿನ ಹಳ್ಳಿಯ ಜನರು ಹಾಗೂ ಕುದ್ದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಯವರು ದುಮ್ಮಿಕ್ಕುವ ನದಿಯಲ್ಲಿ ದೋಣಿಯ ಮೂಲಕ ಸಂಪರ್ಕ ಕಡಿತವಾಗಿರುವ ಹಳ್ಳಿಯ ಜನರೊಂದಿಗೆ ಬೆರೆತರು.ಇವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಸಾತ್ ನೀಡಿದರು.ಈ ಕಾರ್ಯಕ್ರಮವನ್ನು ಕೃಷಿ ಇಲಾಖೆ ಮತ್ತು ಸಾವಯವ ಕೃಷಿ ಅಭಿಯಾನ ದಡಿ ಆಯೋಸಿದ್ದವು.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮವನ್ನು
ಉದ್ಘಾಟಿಸುವ ಬದಲು ಹಿಂದಿನಿಂದಲೂ ಸಾವಯವ ಕೃಷಿ ಮಾಡಿಕೊಂಡು ಬಂದ ಕೃಷಿ ದಂಪತಿಗಳಾದ ಬಾಬು ಕಂಚಾ ಸಿದ್ದಿ ಕೈಗಡಿ ಹಾಗೂ ಶ್ರೀಮತಿ ಲಕ್ಷ್ಮೀ ಬಾಬು ಸಿದ್ದಿ ರವರ ಹಸ್ತದಿಂದಲೇ ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಕಾರ್ಯಕ್ರಮಕ್ಕೆ ಉತ್ತರ ಕನ್ನಡ ಜಿಲ್ಲೆಯವರಲ್ಲದೇ ಪಕ್ಕದ ಶಿವಮೊಗ್ಗ ,ಹಾವೇರಿ, ಗದಗ, ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ರೈತರು ಭಾಗವಹಿಸಿದ್ದರು.

ಮನೆಯಂಗಳದಲ್ಲಿ ರೈತರಿಂದ ಸಚಿವರಿಗೆ ಪ್ರಶ್ನೆಗಳ ಸುರಿಮಳೆಕುದ್ದು ನೋವು ತೋಡಿಕೊಂಡ ಎಮ್.ಎಲ್.ಸಿ

ರಾಮಚಂದ್ರ ಹೆಗಡೆ, ಸುಬ್ರಾಯ ಹೆಗಡೆ ಅವರ ಮನೆಯಂಗಳದ ಚಿಕ್ಕ ವೇದಿಕೆಯಲ್ಲಿ ನೂರಾರು ಜನರು ಕೇಂದ್ರ ಸಚಿವರಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

ಗೋವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಬೇಕು. ಗೋ ಆಧಾರಿತ ಉತ್ಪನ್ನಗಳಿಗೆ ಹಾಗೂ ಪಶು ಆಹಾರಗಳಿಗೆ ಜಿ.ಎಸ್.ಟಿ ಇಂದ ವಿನಾಯಿತಿ ನೀಡಿ. ಎಲ್ಲಾ ಮೂಲದ ಸಾವಯವ ಗೊಬ್ಬರಗಳಿಗೆ ಜಿ.ಎಸ್.ಟಿ ಇಂದ ವಿನಾಯಿತಿ ನೀಡಬೇಕು, ರೈತರಿಂದಲೇ ಉತ್ಪಾದಿತ ಮತ್ತು ಮೌಲ್ಯವರ್ಧಿತ ಉತ್ಪನ್ನಗಳಿಗೆ ಉತ್ಪಾದನಾ ಜಿ.ಎಸ್.ಟಿ ಇಂದ ವಿನಾಯಿತಿ ಕೊಡಬೇಕು.
ಶ್ರೀಲಂಕಾ ದೇಶವು ರಾಸಾಯನಿಕ ಗೊಬ್ಬರ ಹಾಗೂ ವಿಷಗಳಿಗೆ ಪೂರ್ಣ ನಿಷೇಧ ಹೇರಿ ಸಾವಯವ ದೇಶ ಎಂದು ಘೋಷಿಸಿಕೊಂಡಿದೆ. ಈ ಕುರಿತು ಅಧ್ಯಯನಕ್ಕಾಗಿ ಶ್ರೀಲಂಕಾ ದೇಶಕ್ಕೆ ರೈತರನ್ನೊಳಗೊಂಡ ವಿಶೇಷ ತಂಡವನ್ನು ಅಧ್ಯಯನಕ್ಕೆ ಪ್ರವಾಸವನ್ನು ಏರ್ಪಡಿಸಬೇಕು.
ಕೃಷಿಕರ ತೋಟದಲ್ಲಿ ಬಸಿಕಾಲುವೆ ಮತ್ತು ಮಣ್ಣಿನ ಏರಿ ನಿರ್ಮಾಣಕ್ಕೆ ಎನ್.ಆರ್.ಇ.ಜಿ (ನರೇಗಾ) ಯೋಜನೆಯಲ್ಲಿ ದೊಡ್ಡ ಹಿಡುವಳಿದಾರರಿಗೆ ಕನಿಷ್ಟ ಎರಡು ಹೆಕ್ಟೇರ್ ಪ್ರದೇಶಕ್ಕೆ ಅವಕಾಶ ಕಲ್ಪಿಸಿಕೊಡಬೇಕು.

ವಿಮೆ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಿಯಮಗಳನ್ನು ಲಿಖಿತಗೊಳಿಸುವಾಗ ಕಂಪ್ಯೂಟರಿನ ಅಕ್ಷರದ ಗಾತ್ರ ಹದಿನಾರಕ್ಕಿಂತ ಹೆಚ್ಚಿರುವಂತೆ ಮತ್ತು ಕೃಷಿಕರಿಗೆ/ಗ್ರಾಹಕರಿಗೆ ಮಾತೃಭಾಷೆಯಲ್ಲಿಯೇ (ಕನ್ನಡ) ನಿಯಮಾವಳಿಗಳನ್ನು ಓದುವಂತೆ ( ರೂಲ್ಸ್‌ ಎಂಡ್‌ ರೆಗುಲೇಶನ್ಸ್)‌ ನಮೂದಿಸುವಂತಾಗಬೇಕು,ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯು ಹವಾಮಾನ ಆಧಾರಿತವಾಗಿದ್ದು,ಈಗಿರುವ ಹೋಬಳಿ ಮಟ್ಟದ ವರದಿ ಆಧಾರದ ಬದಲು ಗ್ರಾಮವಾರು ಮಳೆ/ಬಿಸಿಲು ಮಾಪನ ಮಾಡಿ , ಈ ಯೋಜನೆಗೆ ಮಾಹಿತಿ ಒದಗಿಸುವಂತಾಗಬೇಕು ಹಾಗೂ ಕೇವಲ ಮಳೆ ಹಾಗೂ ಬಿಸಿಲಲ್ಲದೇ ಬೇರೆಲ್ಲೋ ಸುರಿದ ಮಳೆಯಿಂದಾಗಿ ಬರುವ ಪ್ರವಾಹದಿಂದ ಆಗುವ ಹಾನಿಗೂ ಸಹಾ ವಿಮೆ ಜಾರಿಯಾಗುವಂತೆ ತಿದ್ದುಪಡಿ ಮಾಡಬೇಕು.

ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿಗಳನ್ನು ಎಫ್.ಪಿ.ಓ (ರೈತ ಉತ್ಪಾದಕ ಸಂಸ್ಥೆ) ಎಂದು ಪರಿಗಣಿಸಿ. ಎಫ್ ಪಿ. ಓ ಮಾರ್ಗಸೂಚಿಯಲ್ಲಿ ಮಾರ್ಪಾಡುಗಳನ್ನು ಮಾಡಬೇಕು.ಸರಕಾರದ ಅನುದಾನವು ಶೇಕಡಾ 60:40ರ ಅನುಪಾತದಲ್ಲಿ ಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಪಾಲಾಗಿರುತ್ತದೆ. ಅದೇ ರೀತಿ ಎಫ್.ಪಿ.ಓ ಇಂದ 40% ಭಾಗ ಹೂಡಿಕೆಯ ಜೊತೆಗೆ ಕೇಂದ್ರದ 60% ಭಾಗದ ಹೂಡಿಕೆಯ ವಿಧಾನವನ್ನು ಅನುಸರಿಸಬೇಕ ಎಂದು ಆಗ್ರಹಿಸಿದರು.

ನೋವು ತೋಡಿಕೊಂಡ ಬಿಜೆಪಿ ಎಮ್.ಎಲ್.ಸಿ ಶಾಂತರಾಮ ಸಿದ್ದಿ

ಬುಡಕಟ್ಟು ಜನಾಂಗದವರು ಅರಣ್ಯಭೂಮಿ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. 1970ರ ಸುಮಾರಿಗೆ ನಮ್ಮ ತಂದೆ ಏಳು ಎಕರೆ ಜಮೀನು ಹೊಂದಿದ್ದರು. ಈಗ ಅರಣ್ಯ ಕಾಯ್ದೆಯಿಂದಾಗಿ ಕೇವಲ ಐದು ಗುಂಟೆಯಲ್ಲಿ ಜೀವನ ನಡೆಸುತ್ತಿದ್ದೇವೆ’ ಎಂದು ತಮ್ಮ ಹಾಗೂ ತಮ್ಮವರ ಸಮಸ್ಯೆ ಬಗ್ಗೆ ಸಚಿವರಿಗೆ ತಿಳಿಸಿದರು. ಇನ್ಮು ಅರಣ್ಯ ಕಾನೂನಿನಿಂದಾಗಿ ಅರಣ್ಯವನ್ನೇ ನಂಬಿ ತಲಾ ತಲಾಂತರದಿಂದ ಕಾಡಿನಲ್ಲಿ ಜೀವನ ಸಾಗಿಸುತ್ತಿರುವವರಿಗೆ ಹಕ್ಕುಪತ್ರ ನೀಡಬೇಕು ಎಂದು ಸಚಿವರಿವೆ ಕೇಳಿಕೊಂಡರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಹೆಬ್ಬಾರ ಜಿಲ್ಲೆಯಲ್ಲಿ ಅರಣ್ಯಭೂಮಿ ಹಕ್ಕುಪತ್ರಕ್ಕೆ 93,855 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಹಕ್ಕುಪತ್ರ ನೀಡಲು ಮೂರು ತಲೆಮಾರಿನ ದಾಖಲೆ ಸಲ್ಲಿಸಬೇಕು ಎಂದು ಅರಣ್ಯ ಹಕ್ಕು ಕಾಯ್ದೆ 2005ರಲ್ಲಿ ತಿಳಿಸಲಾಗಿದೆ. ಇದರ ಪ್ರಕಾರ 75 ವರ್ಷಗಳ ದಾಖಲೆ ನೀಡುವುದು ಸಾಧ್ಯವಾಗದೇ ಸಮಸ್ಯೆಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲು ದೆಹಲಿಗೆ ನಿಯೋಗ ಬರುತ್ತೇವೆ. ಇದು ಬಗೆಹರಿದರೆ ರಾಜ್ಯದ ಆರು ಜಿಲ್ಲೆಗಳ 2.39 ಲಕ್ಷ ಕುಟುಂಬಗಳಿಗೆ ಬದುಕು ಕಟ್ಟಿಕೊಡಲು ಸಾಧ್ಯ ಎಂದು ಕೇಂದ್ರ ಸಚಿವರಿಗೆ ಇಲ್ಲಿನ ಅರಣ್ಯ ಒತ್ತುವರಿದಾರರ ಸಮಸ್ಯೆ ಬಗ್ಗೆ ತಿಳಿಸಿದರು.

ಇನ್ನು ರೈತರು ಹಾಗೂ ಜನಪ್ರತಿನಿಧಿಗಳ ಅಹವಾಲಿಗೆ
ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ ,ನಿಮ್ಮ ಎಲ್ಲ ಆಗ್ರಹಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು. ಅರಣ್ಯದ ಬಗ್ಗೆ ನಮ್ಮ ರಾಜ್ಯದಲ್ಲಿ ಇರುವಷ್ಟು ಕಠಿಣವಾದ ನಿಯಮಗಳು ದೇಶದ ಮತ್ತೆಲ್ಲೂ ಇಲ್ಲ, ಇದರಲ್ಲಿ ಸಾಕಷ್ಟು ಬದಲಾವಣೆ ಆಗಬೇಕು ಸಾವಯವ ಕೃಷಿ ಪ್ರಮಾಣೀಕರಣವನ್ನು ವಾಣಿಜ್ಯ ಇಲಾಖೆಯಿಂದ ತೆಗೆದು ಕೃಷಿ ಇಲಾಖೆಗೆ ಸೇರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡುತ್ತೇನೆ. ಅರಣ್ಯಭೂಮಿ ಹಕ್ಕುಪತ್ರಕ್ಕೆ 75 ವರ್ಷಗಳ ಬದಲು 15 ವರ್ಷಗಳ ದಾಖಲೆ ನೀಡುವಂತೆ ಮಾಡಲು ಸಾಧ್ಯವಾಗಲಿದೆಯಾ ಎಂದು ಪರಿಶೀಲಿಸಲಾಗುವುದು ಎಂದರು.

ಬೇಡಿಕೆ ಇದ್ದಕಡೆ ಕೃಷಿ ಉತ್ಪನ್ನ ರಫ್ತು ಮಾಡುವಂತಾಗಬೇಕು.

ಹಲವು ದೇಶದಲ್ಲಿ ನಮ್ಮ ಕೃಷಿ ಉತ್ಪನ್ನಕ್ಕೆ ಬಹು ಬೇಡಿಕೆ ಇದೆ. ಆದರೇ ಗುಣಮಟ್ಟದ ಉತ್ಪನ್ನಗಳನ್ನು ರಫ್ತುಮಾಡುವಲ್ಲಿ ರೈತರಿಗೆ ಸಾಧ್ಯವಾಗುತ್ತಿಲ್ಲ. ಇದಾಗಕ್ಕಾಗಿ ತರಬೇತಿ ನೀಡಬೇಕು ,ಗುಣಮಟ್ಟ ಉತ್ಪನ್ನ ಹಾಗೂ ಬೆಳಗಳ ಬಗ್ಗೆ ರೈತರಿಗೆ ಇಲಾಖೆ ಅರಿವು ಮೂಡಿಸುವ ಅಗತ್ಯವಿದೆ. ಕೋವಿಡ್ ಸಂದರ್ಭದಲ್ಲಿ ಶ್ರೀಲಂಕಾ ದೇಶದಲ್ಲಿ ಆಹಾರ ಉತ್ಪನ್ನದ ಕೊರತೆ ಆಗಿದೆ. ನಮ್ಮ ದೇಶ ದಲ್ಲಿ ಕೋವಿಡ್ ಸಂದರ್ಭದಲ್ಲಿಯೂ ಆಹಾರ ಉತ್ಪಾದನೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ.

ಕಳೆದ ವರ್ಷ ದೇಶದಲ್ಲಿ 305 ಮಿಲಿಯನ್ ಟನ್ ಆಹಾರ ಉತ್ಪಾದನೆ ಮಾಡಿದೆ. 326 ಮಿಲಿಯನ್ ಟನ್ ತರಕಾರಿ ಉತ್ಪಾದನೆ ಮಾಡಿದ್ದು , ಆಹಾರ ಸಂಸ್ಕರಣೆ ಮತ್ತು ಸಂಗ್ರಹಣೆ ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ಸಂಪ್ರದಾಯಿಕ ಸಾವಯವ ಉತ್ಪನ್ನದಿಂದ ತಯಾರಿಸಿದ ಊಟ ಸವಿದ ಶೋಭಾ ಕರಂದ್ಲಾಜೆ.

ಕೇಂದ್ರ ಸಚಿವ ದಿನದ ಅರ್ಥ ಭಾಗವನ್ನು ರೈತರೊಂದಿಗೆ ಕಳೆದು ಅವರ ಸಮಸ್ಯೆ ಆಲಿಸಿದರು. ಇದಲ್ಲದೇ ರಾಮಚಂದ್ರ ಹೆಗಡೆ, ಸುಬ್ರಾಯ ಹೆಗಡೆ ಹಾಗೂ ಕೆಲವು ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಿದ ರೈತರ ಬೆಳೆ ಬೆಳೆದ ತೋಟಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಇನ್ನು ಮಧ್ಯಾನದ ವೇಳೆ ಸಾಮನ್ಯ ಜನರಂತೆ ರೈತರೊಂದಿಗೆ ಕುಳಿತು ಸಾವಯವ ಉತಗಪನ್ನಗಳಿಂದ ತಯಾರಿಸಿದ ಊಟವನ್ನು ಸವಿದು ಖುಷಿ ಪಟ್ಟರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ