ದೇಶದಲ್ಲಿ ಒಂದೇ ಮಾದರಿ ಡಿ.ಎಲ್ ಮತ್ತು ಆರ್.ಸಿ ಪತ್ರ! ಹೊಸ ಬದಲಾವಣೆ ಏನು ಗೊತ್ತಾ?

467

ಬೆಂಗಳೂರು:- ಹೊಸ ಮೋಟಾರು ವಾಹನ ಕಾಯ್ದೆ ಜಾರಿ ಬಳಿಕ ಕೇಂದ್ರ ಸರ್ಕಾರ ವಾಹನ ಚಾಲನೆ ಪರವಾನಿಗೆ ಮತ್ತು ದಾಖಲಾತಿ ಪತ್ರದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ.

ಇಡೀ ದೇಶದಲ್ಲಿ ಒಂದೇ ಮಾದರಿಯ ಡಿಎಲ್​​ ಮತ್ತು ಆರ್​​ಸಿ ಪತ್ರವನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಮುಂದಿನ ತಿಂಗಳು ಅಕ್ಟೋಬರ್​​​​ 1ರಿಂದಲೇ ಈ ಯೋಜನೆ ಜಾರಿಗೆ ಬರಲಿದೆ.

Photo courtesy Google

ಡಿಎಲ್​​ ಮತ್ತು ಆರ್​​ಸಿ ಪತ್ರವನ್ನು ಒಂದೇ ರೀತಿಯಾಗಿ ಮುದ್ರಣ ಹಾಗೂ ಹಳೆಯ ವಿನ್ಯಾಸ, ಮುದ್ರಣ ಶೈಲಿ ಎಲ್ಲವೂ ಬದಲಾಗಲಿವೆ.

ಎರಡೂ ದಾಖಲೆಗಳಲ್ಲೂ ಮೈಕ್ರೋಚಿಪ್‌ ಮತ್ತು ಕ್ಯೂ ಆರ್‌ ಕೋಡ್‌ ಅಳವಡಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈಗಾಗಲೇ ರಾಜ್ಯದ ಎಲ್ಲಾ ಟ್ರಾಫಿಕ್​​ ಪೊಲೀಸ್​​ ಠಾಣೆಗಳಿಗೆ ಟ್ರ್ಯಾಕಿಂಗ್‌ ಉಪಕರಣ ನೀಡಲಾಗಿದೆ. ಈ ಟ್ರ್ಯಾಕಿಂಗ್​​​ ಉಪಕರಣದ ಮೂಲಕ ಪೊಲೀಸರು ಯಾವುದೇ ವಾಹನದ ಮಾಹಿತಿಯನ್ನು ಕೂಡ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

Photo courtesy Google

ಆಗಸ್ಟ್​​ ತಿಂಗಳಲ್ಲಿಯೇ ಮೋಟಾರು ವಾಹನ(ತಿದ್ದುಪಡಿ) ಮಸೂದೆಗೆ ಕೇಂದ್ರ ಸಂಸತ್ತಿನಲ್ಲಿ ಅನುಮೋದನೆ ಸಿಕ್ಕಿತ್ತು.

ಸಂಚಾರ ನಿಯಮ ಉಲ್ಲಂಘನೆ ತಡೆಯುವುದೇ ಈ ಮಸೂದೆಯ ಮೂಲ ಉದ್ದೇಶವಾಗಿತ್ತು. ಒಂದು ವೇಳೆ ಇನ್ಮುಂದೆ ಯಾರಾದರೂ ರಸ್ತೆಯಲ್ಲಿ ಕುಡಿದು ಅಡ್ಡಾದಿಡ್ಡಿ ವಾಹನ ಚಲಾಯಿಸಿದರೆ ಭಾರೀ ದಂಡ ತೆರಬೇಕಾಗುತ್ತದೆ ಎಂದು ಟ್ರಾಫಿಕ್​​​ ಪೊಲೀಸ್​​ ಮೂಲಗಳು ತಿಳಿಸಿದ್ದವು.

ಬಹಳ ಕಟ್ಟುನಿಟ್ಟಿನ ಸಾರಿಗೆ ಸಂಚಾರ ನಿಯಮಗಳನ್ನು ಹೊಂದಿರುವ ಕೇಂದ್ರದ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಸೆಪ್ಟೆಂಬರ್​​ 2ರಿಂದಲೇ ದೇಶಾದ್ಯಂತ ಚಾಲನೆಗೆ ಬಂದಿತ್ತು.

ಆದರೆ, ಕೆಲ ಬಿಜೆಪಿಯೇತರ ಸರ್ಕಾರಗಳು ಈ ಹೊಸ ಕಾನೂನನ್ನು ಜಾರಿಗೆ ತರಲು ಹಿಂದೆ ಮುಂದೆ ನೋಡುತ್ತಿದ್ದವು.

ತೃಣಮೂಲ ಕಾಂಗ್ರೆಸ್ ಆಡಳಿತವಿರುವ ಪಶ್ಚಿಮ ಬಂಗಾಳ ಹಾಗೂ ಕಾಂಗ್ರೆಸ್ ಆಡಳಿತವಿರುವ ಮಧ್ಯ ಪ್ರದೇಶ ರಾಜ್ಯಗಳು ಕೇಂದ್ರದ ಈ ನೂತನ ಕಾಯ್ದೆಯನ್ನು ಅನುಷ್ಠಾನಕ್ಕೆ ತರದಿರಲು ನಿರ್ಧರಿಸಿದ್ದವು.

ಪೊಲೀಸರು ಹಲವು ಪ್ರಕರಣಗಳಲ್ಲಿ 1 ಲಕ್ಷಕ್ಕೂ ಅಧಿಕ ದಂಡ ವಿಧಿಸಿದ ಬೆನ್ನಲ್ಲೇ ಸಾರ್ವಜನಿಕರಿಂದ ಭಾರೀ ಆಕ್ರೋಶಕ್ಕೂ ಕಾರಣವಾಗಿತ್ತು.

ಇದರಿಂದ ಎಚ್ಚೆತ್ತ ಗುಜರಾತ್, ಕರ್ನಾಟಕ ಸರ್ಕಾರ ಕೂಡ ರಾಜ್ಯಕ್ಕೆ ಬೇಕಾದಂತೆ ದುಬಾರಿ ದಂಡವನ್ನು ಕಡಿಮೆಗೊಳಿಸಿ ಆದೇಶ ಹೊರಡಿಸಿದರು. ​​​​

ಈಗ ಹೊಸ ನಿಯಮಗಳ ಮೇಲೆ ಬದಲಾವಣೆ ತರುತಿದ್ದು ಆರ್ .ಸಿ ಬುಕ್ ಡಿ.ಎಲ್ ಗಳು ಒಂದೇ ಕಾರ್ಡ ನಲ್ಲಿ ಬರಲಿದೆ.
Leave a Reply

Your email address will not be published. Required fields are marked *