ಉಸಿರು ನಿಲ್ಲಿಸಿದ ಗಾನ ಗಂಧರ್ವ- ಎಸ್.ಪಿ.ಬಿ ಇನ್ನು ನೆನಪು ಮಾತ್ರ.

709

ಚೆನ್ನೈ: ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಇಂದು ಮಧ್ಯಾನ 1.4 ಕ್ಕೆ ವಿಧಿವಶರಾಗಿದ್ದಾರೆ.

ಕರೋನಾ ದಿಂದ ಎಸ್​ಪಿಬಿ ಆಸ್ಪತ್ರೆಗೆ ದಾಖಲಾಗಿ 51 ದಿನಗಳ ಮೇಲಾಯಿತು. ಕರೊನಾ ನೆಗೆಟಿವ್​ ಬಂದಿದ್ದರೂ ಶ್ವಾಸಕೋಶ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಈ ಮಧ್ಯೆ ಸ್ವಲ್ಪ ಚೇತರಿಸಿಕೊಂಡಿದ್ದ ಗಾಯಕನ ಆರೋಗ್ಯ ನಿನ್ನೆ ಹದಗೆಟ್ಟಿತ್ತು. ಇಂದು ಬೆಳಗ್ಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಮತ್ತೆ ಹದಗೆಟ್ಟಿದ್ದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಅವರು 1946 ಜೂನ್ ತಿಂಗಳಲ್ಲಿ ಜನಿಸಿದ್ದ ಅವರು ದಕ್ಷಿಣ ಭಾರತದ ಗಾನ ಲೋಕದಲ್ಲಿ ತನ್ನದೇ ಹೆಸರು ಪಡೆದಿದ್ದರು.

ಪದ್ಮಭೂಷಣ,ಪದ್ಮಶ್ರೀ ಸೇರಿದಂತೆ ನೂರಾರು ಪ್ರಶಸ್ತಿಗಳು ಅವರಿಗೆ ಸಂದಿದ್ದು ಬಹು ಭಾಷೆಯಲ್ಲೆ ತಮ್ಮ ಪ್ರತಿಭೆಯ ಬೆಳಕನ್ನು ಚಲ್ಲಿದ್ದರು.
ವರದಿ-ಪ್ರದೀಪ್ .ಜಿ.ಎಸ್.
Leave a Reply

Your email address will not be published. Required fields are marked *