ಆಸ್ಪತ್ರೆ ಶಿಲಾನ್ಯಾಸಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಕಾರವಾರಕ್ಕೆ.

595

ಉತ್ತರ ಕನ್ನಡ :-ಕಾರವಾರ ಮೆಡಿಕಲ್ ಕಾಲೇಜಿನ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ನಿರ್ಮಾಣದ ಶಿಲಾನ್ಯಾಸಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರು ಕಾರವಾರಕ್ಕೆ ಬರುವ
ನಿರೀಕ್ಷೆಯಿದೆ.ಕಾರವಾರ ಶಾಸಕಿ ರೂಪಾಲಿ ನಾಯ್ಕರವರು ಆಸ್ಪತ್ರೆ ನಿರ್ಮಾಣದ ಶಿಲಾನ್ಯಾಸ ಕ್ಕೆ ಬರಿವಂತೆ ಆಹ್ವಾನ ನೀಡಿದ್ದು ಇದಕ್ಕೆ ಪೂರಕ ಪ್ರತಿಕ್ರಿಯೆಯನ್ನು ಸಿ‌ಎಂ ರವರು ನೀಡಿದ್ದು ಶಿಲಾನ್ಯಾಸಕ್ಕೆ ಬರುವುದಾಗಿ ತಿಳಿಸಿದ್ದಾರೆ. ದೀಪಾವಳಿ ನಂತರ ಆಸ್ಪತ್ರೆ ಶಿಲಾನ್ಯಾಸ ದಿನಾಂಕ ನಿಗದಿಯಾಗಲಿದೆ.

ರೂಪಾಲಿ ನಾಯ್ಕ ಕಾರ್ಯಕ್ಕೆ ಶ್ಲಾಘನೆ.

ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಆಸ್ನೋಟಿಕರ್ ಹಾಗೂ ಅಂದಿನ ಹಾಲಿ ಶಾಸಕರಾಗಿದ್ದ ಸತೀಶ್ ಸೈಲ್ ರನ್ನು ಮಣಿಸುವ ಮೂಲಕ ಕಾರವಾರದಲ್ಲಿ ತನ್ನದೇ ಹವಾ ಸೃಷ್ಟಿಸಿದ್ದ ಶಾಸಕಿ ರೂಪಾಲಿನಾಯ್ಕ ಇತ್ತೀಚಿಗೆ ಕಾರವಾರ, ಅಂಕೋಲಾ ಎರಡು ಕಡೆಗಳಲ್ಲಿ ಕ್ರಮವಾಗಿ ನಗರಸಭೆ ಮತ್ತು ಪುರಸಭೆಯಲ್ಲಿ ಅಧಿಕಾರ ಹಿಡಿಯಲು ಸಫಲರಾಗಿರುವ ಬಗ್ಗೆ ಶಾಸಕಿಯ ಕಾರ್ಯ ವೈಖರಿ ಬಗ್ಗೆ ಅಭಿಮಾನ ವ್ಯಕ್ತ ಪಡಿಸಿದ ಮುಖ್ಯಮಂತ್ರಿಗಳು ಅವರ ಕಾರ್ಯವನ್ನು ಶ್ಲಾಘಿಸಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ