ಕೊಡಗಿನಲ್ಲಿ ಕುಮಾರಸ್ವಾಮಿ ರೆಸ್ಟ್ ರಾಜಕೀಯ!

48

ಬೆಂಗಳೂರು/ಕೊಡಗು:-ಒಂದೆಡೆ ಬಿಜೆಪಿ ನೇತ್ರತ್ವದಲ್ಲಿ ಯಡಿಯೂರಪ್ಪ ನವರು ರಾಜ್ಯ ಸರ್ಕಾರವನ್ನು ಬೀಳಿಸುವ ತಂತ್ರಕ್ಕೆ ಮೊರೆಹೋದರೆ ಇತ್ತ ಕುಮಾರಸ್ವಾಮಿ ಕೊಡಗಿನ ರಾಸಾರ್ಟ ನಲ್ಲಿ ರೆಸ್ಟ್ ನೆಪದಲ್ಲಿ ರಾಜಕೀಯ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ.

ಕೊಡಗಿನ ಇಬ್ಬನಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರೋ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ, ಪುತ್ರ ನಿಖಿಲ್ ರೊಂದಿಗೆ ವಾಸ್ತವ್ಯ ಹೂಡಿದ್ದು ಸಿಎಂ ಜೊತೆ ಸಚಿವ ಸಾ ರಾ ಮಹೇಶ್ ಮತ್ತು ಕುಟುಂಬ ಕೂಡ ವಾಸ್ತವ್ಯ ಹೂಡಿದೆ. ಇಂದು ಜೆಡಿಎಸ್ ನಾಯಕರು ರೆಸಾರ್ಟ್‌ಗೆ ಆಗಮಿಸಲುದ್ದಾರೆ.
ಈ ಹಿನ್ನೆಲೆಯಲ್ಲಿ ರೆಸಾರ್ಟ್ ನಲ್ಲಿ ಆರು ರೂಮ್ ಗಳನ್ನು ಬುಕ್ ಮಾಡಲಾಗಿದ್ದು ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.

ಏನು ನಡೆಯಲಿದೆ ರಾಜಕೀಯ ಚರ್ಚೆ!

ಸಿಎಂ ಕುಮಾರಸ್ವಾಮಿ ಆಪ್ತರ ಜೊತೆ ರಾಜಕೀಯ ಲೆಕ್ಕಾಚಾರ ಕುರಿತು ಮಾತುಕತೆ ನಡೆಯಲಿದೆ ಎನ್ನಲಾಗುತಿದ್ದು ಸಿಎಂ ಪುತ್ರ ನಿಖಿಲ್ ,ಇಬ್ಬರು ಸಚಿವರು, ಶಾಸಕ, ಪರಿಷತ್ ಸದಸ್ಯ ಇಗಾಗಲೇ ರೆಸಾರ್ಟ್ ನಲ್ಲಿದ್ದಾರೆ.
ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಏನೆಲ್ಲ ಆಗಬಹುದು ,ಆಪರೇಷನ್ ಕಮಲ ಆದ್ರೆ ಏನು ಮಾಡಬೇಕು,ತಿರುಗೇಟು ನೀಡೋದು ಹೇಗೆ,
ಚಲುವರಾಯಸ್ವಾಮಿ ಸೇರಿದಂತೆ ಕೆಲವರು ಮಿತಿ ಮೀರಿ ಮಾತಾಡ್ತಿದ್ದಾರೆ, ಇದಕ್ಕೆಲ್ಲ ಖಾರವಾಗಿಯೇ ಪ್ರತಿಕ್ರಿಯಿಸಬೇಕು ಹಾಗೂ ಮುಂದಿನ ರಾಜಕೀಯ ನಡೆ ಕುರಿತು ಸಿಎಂ ಜೊತೆ ಚರ್ಚೆ ನಡೆಯಲಿದೆ ಎಂದು ಜೆಡಿಎಸ್ ಆಪ್ತ ಮೂಲಗಳು ತಿಳಿಸಿವೆ.
Leave a Reply

Your email address will not be published. Required fields are marked *

error: Content is protected !!