ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ! ವಾಸ್ತವತೆ ಇಲ್ಲಿದೆ

955

ಕಾರವಾರ:- ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ ಹಿಂದೆನ ಸರ್ಕಾರದಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಜನರ ಸಂಕಷ್ಟಕ್ಕೆ ದ್ವನಿಯಾಗುವ ಪ್ರಯತ್ನ ಮಾಡಿದ್ದರು.
ಈ ಮೂಲಕವೇ ರಾಜ್ಯದ ಜನತೆಯ ದ್ವನಿಯಾಗಿ ಜನಮನದಲ್ಲಿ ಹೆಸರನ್ನು ಅಚ್ಚೊತ್ತಿದ್ದರು.

ಈ ಬಾರಿಯ ಸರ್ಕಾರದಲ್ಲಿಯೂ ಗ್ರಾಮ ವಾಸ್ತವ್ಯಕ್ಕೆ ಒತ್ತು ನೀಡಿದ್ದು ಸದ್ಯದರಲ್ಲಿಯೇ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

ಆದರೇ ಈ ಹಿಂದೆ ಗ್ರಾಮ ವಾಸ್ತವ್ಯ ಮಾಡಿದ ಗ್ರಾಮಗಳ ಅಭಿವೃದ್ಧಿಯಾಗಿದೆಯೇ ಅಥವಾ ಕೇವಲ ರಾಜಕೀಯ ಗಿಮಕ್ ಆಗಿದೆ ಎಂಬ ಚಿಕ್ಕ ರಿಯಾಲಿಟಿ ಚಕ್ ಕನ್ನಡವಾಣಿ ಪತ್ರಿಕೆ ನಿಮ್ಮಮುಂದಿಡುತ್ತಿದೆ.

ಉತ್ತರ ಕನ್ನಡ ಜಿಲ್ಲೆ ಯಲ್ಲಿ 2007 ರಲ್ಲಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ವನ್ನು ಕರಾವಳಿ ಭಾಗದ ಕುಮಟಾದ ತಣ್ಣರ್ ಗುಳಿ ಹಾಗೂ ಮಲೆನಾಡು ಭಾಗವಾದ ಹಳಿಯಾಳದ ಗರಡೊಳ್ಳಿ ಸಿದ್ದಿ ಜನಾಂಗದ ಕಾಲೋನಿಯಲ್ಲಿ ದಿನಾಂಕ 7-05-2007 ರಂದು ಮಾಡಿದ್ದರು,ಇದರ ರಿಯಾಲಿಟಿ ಇಲ್ಲಿದೆ.

ಭಾಗದ ಕುಮಟಾ ತಾಲೂಕಿನ ತಣ್ಣರ್ ಕುಳಿ ಯಲ್ಲಿ ಹಾಲಕ್ಕಿ ಒಕ್ಕಲಿಗರ ಕಾಲೋನಿಯ ತಿಮ್ಮಣ್ಣ ಗೌಡರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.
ಈ ಸಂದರ್ಭದಲ್ಲಿ ಆಶ್ವಾಸನೆ ಹೀಗಿತ್ತು:-
೧)ತಣ್ಣರ್ ಕುಳಿ ಗ್ರಾಮಕ್ಕೆ ಕುಡಿಯುವ ನೀರು ಯೋಜನೆ ಅನುಷ್ಠಾನ.

೨) ಗ್ರಾಮದಲ್ಲಿ ಹಾದು ಹೋಗುವ ಕೊಂಕಣ ರೈಲ್ವೆ ಹಳಿ ಬಳಿ ಓವರ್ ಬಿಡ್ಜ್ ನಿರ್ಮಾಣ
೩) ಗ್ರಾಮದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿ ಬದಲಾವಣೆ .

೪)ಹಾಲಕ್ಕಿ ಗೌಡ ಸಮಾಜ ಹಾಗೂ ಸಿದ್ದಿ ಜನಾಂಗವನ್ನು ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿಸುವುದು.
೫)ರಸ್ತೆ ಸಂಪರ್ಕ ಹಾಗೂ ವಿಶೇಷ ಅನುಧಾನದಲ್ಲಿ ಗ್ರಾಮದ ಅಭಿವೃದ್ಧಿ.

ಈಡೇರಿದ ಬರವಸೆಗಳು ಹೀಗಿವೆ:-

೧)ರಸ್ತೆ ಸಂಪರ್ಕ .
೨)ಪರಿಶಿಷ್ಟ ಜಾತಿ ವರ್ಗಕ್ಕೆ ಶಿಪಾರಸ್ಸು ಮಾಡಿದ್ದು ಕೇಂದ್ರದಿಂದ ಅನುಮೋದನೆ ಬಾಕಿ ಇದೆ.

ಈಡೇರದ ಭರವಸೆಗಳು ಹೀಗಿವೆ:-

೧) ರೈಲ್ವೆ ಹಳಿಗೆ ಓವರ್ ಬಿಡ್ಜ್ ನಿರ್ಮಾಣ
೨)ಕುಡಿಯುವ ನೀರು ಯೋಜನೆ.
೩) ಉತ್ತಮ ರಸ್ತೆ ಮತ್ತು ಗ್ರಾಮದ ಅಭಿವೃದ್ಧಿ

ಹಳಿಯಾಳದಲ್ಲಿ ವಾಸ್ತವ್ಯ !

ಹಳಿಯಾಳದ ಗರಡೊಳ್ಳಿಯ ಸಿದ್ದಿ ಬುಡಕಟ್ಟು ಜನಾಂಗದ ಕಾಲೋನಿಯ ಜಿಯೋ ಸಿದ್ದಿ ಎನ್ನುವವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.
ಈ ಸಂದರ್ಭದಲ್ಲಿ ಸಿದ್ದಿ ಜನಾಂಗದ ಕಾಲೋನಿಯ ಅಭಿವೃದ್ಧಿ ,ಉದ್ಯೋಗ , ವಿಶೇಷ ಸ್ಥಾನ ಮಾನದ ಮಾನ್ಯತೆ ನೀಡುವ ಬರವಸೆ ನೀಡಿದ್ದರು.

ಭರವಸೆ ಈಡೇರಿದೆಯೇ?

ಹಳಿಯಾಳದ ಸಿದ್ದಿ ಜನಾಂಗದ ಕಾಲೂನಿ ಅಭಿವೃದ್ಧಿ ಸಂಬಂಧ ನೀಡಿದ ಭರವಸೆ ಈಡೇರಿದೆ.
ಗ್ರಾಮದ ಮಣ್ಣಿನ ರಸ್ತೆಗಳು ಸಿಮೆಂಟ್ ರಸ್ತೆಯಾಗಿ ಮಾರ್ಪಾಡಾಗಿದೆ.
ಉದ್ಯೋಗ ಹಾಗೂ ಶಿಕ್ಷಣದ ವಿಷಯದಲ್ಲಿ ಯಾವುದೂ ಈಡೇರಿಲ್ಲ . ಗ್ರಾಮದ ಬಹುತೇಕ ಮಂದಿ ಇಂದಿಗೂ ಕಾಡಿನ ಉತ್ಪನ್ನಗಳ ಮಾರಾಟ ಹಾಗೂ ಉದ್ಯೋಗಕ್ಕಾಗಿ ನೆರೆಯ ಗೋವಾವನ್ನು ಅವಲಂಭಿಸಿದ್ರೆ ಹಲವು ಜನ ಬೆಂಗಳೂರಿನಲ್ಲಿ ಚಿಕ್ಕಪುಟ್ಟ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಬಹುತೇಕ ಈಗಿನ ಯುವಕರು ಪದವಿ ಸಹ ಮಾಡಲಾಗಿಲ್ಲ.
ಇನ್ನು ವಿಶೇಷ ಸ್ಥಾನಮಾನ ಮೂಗಿಗೆ ತುಪ್ಪ ಸವರಿದಂತಿದ್ದು ಈ ವರೆಗೂ ಇದರ ಪ್ರಸ್ತಾಪವೇ ಆಗಿಲ್ಲ.

ವಾಸ್ತವ್ಯ ಮಾಡಿದ ಗ್ರಾಮದ ಜನ ಏನಂತಾರೆ!

ಕುಮಟಾದ ತಣ್ಣರ್ ಕುಳಿ ಜನರು ಹೇಳುವಂತೆ ಕುಮಾರಸ್ವಾಮಿ ಬಂದ ನಂತರ ದೊಡ್ಡ ಬದಲಾವಣೆ ನಿರೀಕ್ಷಿಸಿದ್ವಿ ಆದ್ರೆ ಈ ವರೆಗೂ ಏನೂ ಆಗಿಲ್ಲ .
ಕುಡಿಯುವ ನೀರಿನ ಸಮಸ್ಯೆ ಈವರೆಗೂ ಜೀವಂತವಿದೆ ನಮ್ಮ ಮನವಿ ಮನವಿಯಾಗಿಯೇ ಉಳಿದಿದೆ ಎನ್ನುತ್ತಾರೆ ಕುಮಾರಸ್ವಾಮಿ ವಾಸ್ತವ್ಯ ಮಾಡಿದ ಮನೆಯ ಮಾಲೀಕ ತಿಮ್ಮಣ್ಣ ಗೌಡ.

ಇನ್ನು ಹಳಿಯಾಳದ ವಿಷಯಕ್ಕೆ ಬಂದ್ರೆ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ ಎನ್ನುವುದನ್ನೇ ಜನರು ಮರೆತಿದ್ದಾರೆ.
ಇದೇ ಗ್ರಾಮದಲ್ಲಿ ಹಿಂದಿನ ಸರ್ಕಾರದ ಸಮಾಜಕಲ್ಯಾಣ ಇಲಾಖೆ ಸಚಿವ ಆಂಜನೇಯ ರವರು ವಾಸ್ತವ್ಯ ಮಾಡಿದ್ರು.
ಹೊಸ ವರ್ಷವನ್ನು ಸಹ ಇದೇ ಗ್ರಾಮದವರೊಂದಿಗೆ ಆಚರಿಸಿದ್ರು ಆದ್ರೆ ಗ್ರಾಮ ಮಾತ್ರ ಇದ್ದದ್ದು ಇದ್ದಹಾಗೆ ಇದ್ದು ಇಲ್ಲಿನ ಜನ ಅಭಿವೃದ್ಧಿಯಾಗಲೇ ಇಲ್ಲ ಎನ್ನುವುದೇ ದುರಂತ .
Leave a Reply

Your email address will not be published. Required fields are marked *

error: Content is protected !!