BREAKING NEWS
Search

ಹತ್ತು ಜನರಿಗೆ ಮಾತ್ರ ಸಚಿವ ಸ್ಥಾನ!-ಮೂಲ ಬಿಜೆಪಿಗರಿಗೆ ಕೋಕ್! ನಾಳೆ ಸಚಿವ ಸಂಪುಟ ವಿಸ್ತರಣೆ.

351

ಬೆಂಗಳೂರು:- ಗುರುವಾರ ದಂದು ಮಿತ್ರ ಮಂಡಳಿಯ ಹತ್ತು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇಂದು ರಾತ್ರಿ ಡಾಲರ್ಸ್​ ಕಾಲೋನಿಯ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೆಹಲಿಯಿಂದ ಹೈಕಮಾಂಡ್ ನಾಯಕರು 10 ಜನಕ್ಕೆ ಮಾತ್ರ ಸಚಿವ ಸ್ಥಾನ ನೀಡುವಂತೆ ಹೇಳಿದ್ದಾರೆ.

ಮುಂದಿನದ್ದನ್ನು ದೆಹಲಿಗೆ ಬಂದು ಮಾತನಾಡಲು ಸೂಚಿಸಿದ್ದಾರೆ, ಹೀಗಾಗಿ ನಾಳೆ ಹತ್ತು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದರು.

ಉಮೇಶ್ ಕತ್ತಿ ಅವರನ್ನು ನೂರಕ್ಕೆ ನೂರು ಸಚಿವರನ್ನಾಗಿ ಮಾಡುತ್ತೇವೆ ಎಂದು ಕತ್ತಿಗೆ ಭರವಸೆ ನೀಡಿದ ಬಿಎಸ್​ವೈ ಮಹೇಶ್ ಕುಮಟಳ್ಳಿ ಅವರನ್ನು ಸಚಿವರನ್ನಾಗಿ ಮಾಡೋದು ಕಷ್ಟ ಎಂದರು.

ಅವರನ್ನು ಕರೆದು ಮಾತನಾಡುತ್ತೇವೆ. ಪಕ್ಷದಲ್ಲಿ ಬೇರೆ ಜವಾಬ್ದಾರಿ ನೀಡಲಾಗುವುದು ಎಂದು ತಿಳಿಸಿದರು.

ಪೋನ್ ಕಾಲ್ ಕೊಟ್ಟ ಟ್ಟಿಷ್ಟ್!

ಯಡಿಯೂರಪ್ಪನವರಿಗೆ ಶಾ ದೂರವಾಣಿ ಕತೆ ಮಾಡುವ ಮೂಲಕ 13 ಜನರ ಬದಲಾಗಿ ಹತ್ತು ಜನರನ್ನು ಮಾತ್ರ ಸಚಿವರನ್ನಾಗಿ ಮಾಡುವಂತೆ ಸಂದೇಶ ರವಾನಿಸಿದ್ದಾರೆ. ಇದರಂತೆ 10 ಜನರ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಿ ಕೊಡಲಾಗಿದ್ದು ಮಿತ್ರ ಮಂಡಳಿಯ 10 ಜನ ಶಾಸಕರು ಮಾತ್ರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಖಾತೆ ಹಂಚಿಕೆ ಇಲ್ಲ!

ಸದ್ಯ ಮೂಲಗಳ ಮಾಹಿತಿ ಪ್ರಕಾರ ನಾಳೆ ಕೇವಲ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು ಸಚಿವರಾದವರಿಗೆ ಖಾತೆ ಹಂಚಿಕೆ ಇಲ್ಲ ಎನ್ನಲಾಗಿದ್ದು ದೆಹಲಿಯಲ್ಲಿ ಸಿ.ಎಂ ಹೈಕಮಾಂಡ್ ಭೇಟಿ ನಂತರವೇ ಖಾತೆ ಹಂಚಿಕೆ ಎನ್ನಲಾಗಿದೆ.
Leave a Reply

Your email address will not be published. Required fields are marked *