BREAKING NEWS
Search

ಶಿರಸಿ:CMA ಪರೀಕ್ಷೆ ಪಾಸಾಗದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

789

ಶಿರಸಿ :- ಸಿ.ಎಮ್.ಎ. ಪರೀಕ್ಷೆಯಲ್ಲಿ ಪಾಸ್ ಆಗಲಿಲ್ಲ ಎಂದು ಮನಸ್ಸಿಗೆ ಹಚ್ಚಿಕೊಂಡ ಯುವಕನೊರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡದ ಶಿರಸಿ ತಾಲೂಕಿನ ಸಂಪಖಂಡದ ಕೂಗ್ತೆಮನೆಯಲ್ಲಿ ನಡೆದಿದೆ.

ಶಿರಸಿ ಟಿ.ಆರ್.ಸಿ. ಬ್ಯಾಂಕ್ ನಲ್ಲಿ ಕ್ಲರ್ಕ ಆಗಿದ್ದ ಕೂಗ್ತೆ ಮನೆಯ ಶ್ರೀಧರ ಹೆಗಡೆ (೨೭) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಈತ ಪರೀಕ್ಷೆಯಲ್ಲಿ ಪಾಸ್ ಆಗಲಿಲ್ಲ ಎಂದು ಮಾನಸಿಕವಾಗಿ ನೊಂದು ಮನೆಯ ಹೊರಗಿನ ಅಡಿಕೆ ಅಟ್ಟದ ಕಬ್ಬಿಣದ ತೊಲೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *