BREAKING NEWS
Search

ಕಾರವಾರ-ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರರ ರಕ್ಷಣೆ

615

ಕಾರವಾರ/ಗೋವಾ :- ಎಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸಮುದ್ರ ಮಧ್ಯದಲ್ಲೇ ಬೋಟ್ ನಲ್ಲಿ ಕರ್ನಾಟಕ ಮೀನುಗಾರರು ಸಿಲುಕಿಕೊಂಡಿದ್ದವರನ್ನು ನೌಕಾದಳ ಹಾಗೂ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡುದ ಘಟನೆ ಗೋವಾ ರಾಜ್ಯದ ಲೋಲೆಮ್ ಬಳಿ ನಡೆದಿದೆ.

ಉಡುಪಿ ಮೂಲದ ರಾಜ್ ಕಿರಣ್ ಎನ್ನುವ ಬೋಟ್ ನಲ್ಲಿದ್ದ ಎಂಟು ಜನ ಮೀನುಗಾರರು ಉಡುಪಿಯಿಂದ ಮೀನುಗಾರಿಕೆಗೆ ಗೋವಾಕ್ಕೆ ತೆರಳಿದ್ದರು.ಈ ವೇಳೆ
ಎಂಜಿನ್ ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು ಬಂದ್ ಆಗಿ ಅರಬ್ಬಿ ಸಮುದ್ರದ ಮಧ್ಯದಲ್ಲಿ ಸಿಲುಕಿಕೊಂಡಿತ್ತು.

ಈ ವೇಳೆ ಕರ್ನಾಟಕದ ಕರಾವಳಿ ಕಾವಲುಪಡೆ ಪೊಲೀಸರಿಗೆ ಮಾಹಿತಿ ರವಾನೆ ಮಾಡಿದ್ದ ಮೀನುಗಾರರು ರಕ್ಷಣೆಗಾಗಿ ಕೇಳಿಕೊಂಡಿದ್ದರು.
ಕರ್ನಾಟಕದ ಕರಾವಳಿ ಕಾವಲು ಪಡೆ ಅಧಿಕಾರಿಗಳು ಗೋವಾ ರಾಜ್ಯದ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ನಂತರ ಭಾರತೀಯ ನೌಕಾ ದಳ,ಕೋಸ್ಟ ಗಾರ್ಡ ಸಿಬ್ಬಂದಿಗಳು ಎಲ್ಲಾ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.




Leave a Reply

Your email address will not be published. Required fields are marked *