BREAKING NEWS
Search

ಕರಾವಳಿಯಬಗ್ಗೆ ಇಸ್ರೋ ಹೇಳಿದ ಭಯಾನಕ ಸತ್ಯ!ಉಗ್ರರ ಕಣ್ಣು ಕರಾವಳಿ ಮೇಲೆ?

483

ಕಾರವಾರ:- ಕರಾವಳಿ ಸೇರಿದಂತೆ ಮಂಡ್ಯ ,ಹೊಳೆನರಸೀಪುರ ಭಾಗದಲ್ಲಿ ಸಟಲೈಟ್ ಪೋನ್ ಬಳಕೆ ಮಾಡಿರುವ ಕುರಿತು ಇಸ್ರೋ ಸಂಸ್ಥೆ ಕೇಂದ್ರ ರಕ್ಷಣಾ ಇಲಾಖೆಗೆ ಮಾಹಿತಿ ನೀಡಿದೆ.

ಇಸ್ರೋ ಮಾಹಿತಿ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತದಳ ಇಲಾಖೆ ರಾಜ್ಯ ಪೊಲೀಸ್ ಇಲಾಖೆಗೆ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸುವಂತೆ ಪತ್ರ ಬರೆದಿದೆ.

ಹೌದು ಈ ಹಿಂದೆಯೇ ದೇಶಕ್ಕೆ ಉಗ್ರರು ನುಸುಳಿರುವ ಕುರಿತು ಕೇಂದ್ರ ಗುಪ್ತಚರ ಇಲಾಖೆ ಎಲ್ಲಾ ರಾಜ್ಯಗಳಿಗೆ ಮಾಹಿತಿ ನೀಡಿತ್ತು .

ಇದರ ಜೊತೆಗೆ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸುವಂತೆ ಸಹ ತಿಳಿಸಿತ್ತು.

ಆದರೇ ಈಗ ಕರ್ನಾಟಕದಲ್ಲಿ ನಿಷೇಧಿತ ಸಟಲೈಟ್ ಪೋನನ್ನು ಉಪಯೋಗಿಸಿರುವ ಕುರಿತು ಮಾಹಿತಿ ಹೊರಬಿದ್ದಿದೆ.

ಇತ್ತೀಚೆಗೆ ಕಾರವಾರದಲ್ಲಿ ಕಾರವಾರ ನಗರದ ಡಿವೈಎಸ್ಪಿ ರವರು ಕೂಮಿಂಗ್ ಕಾರ್ಯಾಚರಣೆ ನಡೆಸಲು ಹೋಗಿ ನಾಪತ್ತೆಯಾಗಿ ಸುದ್ದಿಯಾಗುತಿದ್ದಂತೆ ಸಟಲೈಟ್ ಪೋನ್ ಬಳಕೆ ಮಾಡಿರುವ ಕುರಿತು ಮಾಹಿತಿ ಹೊರ ಬಿದ್ದಿದೆ.
ಇದರ ಬೆನ್ನಲ್ಲೆ ನಾಲ್ಕು ಜನ ಜಮ್ಮು ಕಾಶ್ಮೀರದ ಯುವಕರನ್ನು ಬಂಧಿಸಿ ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಗಿತ್ತು.

ಹಿಂದೆ ಬಂಧಿಸಿ ಬಿಡುಗಡೆಯಾದ ಜಮ್ಮುಕಾಶ್ಮೀರದ ಯುವಕರು

ಆದರೇ ಹಲವು ಅನುಮಾನಗಳು ಮೂಡುವ ಹೊತ್ತಿನಲ್ಲಿಯೇ ಕಾರವಾರ,ಭಟ್ಕಳ ತಾಲೂಕಿನ ಭಾಗದಲ್ಲಿ ಸಟಲೈಟ್ ಫೋನ್ ಸದ್ದು ಮಾಡಿದೆ.

ಈ ಕುರಿತು ಇಸ್ರೋ ಸಂಸ್ಥೆ ಇವುಗಳ ಕುರಿತು ಪತ್ತೆ ಮಾಡಿದ್ದು ಮಾಹಿತಿಯನ್ನು ಗುಪ್ತಚರ ಇಲಾಖೆಗೆ ನೀಡಿದೆ.

ಎಲ್ಲೆಲ್ಲಿ ಸಟಲೈಟ್ ಪೋನ್ ಬಳಕೆ –

ಈಗಾಗಲೇ ಕರಾವಳಿ ಭಾಗದಲ್ಲಿ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಸಮುದ್ರದಲ್ಲಿ ಕೂಡ ಗಸ್ತು ಹೆಚ್ಚಿದಿದ್ದು ಮೀನುಗಾರಿಕಾ ಬೋಟ್ ಗಳನ್ನು ತಪಾಸಣೆ ಮಾಡುವ ಜೊತೆ ಕರಾವಳಿ ಭಾಗದ ಸೂಷ್ಮ ಪ್ರದೇಶದ ಮೇಲೆ ಕಣ್ಣಿಟ್ಟಿದೆ.

ಮೈಸೂರಿನ ದಸರದ ಮೇಲೂ ಕಣ್ಣಿಟ್ಟಿರುವ ಉಗ್ರರು ಕರ್ನಾಟಕದಲ್ಲಿ ಸ್ಪೋಟ ನಡೆಸುವ ಸಂಚು ರೂಪಿಸಿರುವ ಮಾಹಿತಿ ಹೊರಬಿದ್ದಿದ್ದು ಎಲ್ಲೆಡೆ ಪೊಲೀಸ್ ಅಲರ್ಟ ಮಾಡಲಾಗಿದೆ.
Leave a Reply

Your email address will not be published. Required fields are marked *