176 ಜನ ವಿದೇಶದಿಂದ ಬಂದವರಲ್ಲಿ ಕಾರವಾರ ವ್ಯಕ್ತಿಗೂ ಪಾಸಿಟಿವ್ ! ಇಂದು ಬರಲಿರುವ ಬುಲಟಿನ್ ನಲ್ಲಿ ಎಲ್ಲರ ಚಿತ್ತ!

6569

ಮಂಗಳೂರು:- ವಿದೇಶದಿಂದ ಬಂದ 176 ಜನರಲ್ಲಿ ಹಲವರಿಗೆ ಕರೋನಾ ಪಾಸಿಟಿವ್ ಬರುವ ನಿರೀಕ್ಷೆ ಇದ್ದು ಇದೇ ತಿಂಗಳು 12 ರಂದು ಗಲ್ಫ್ ರಾಷ್ಟ್ರಗಳಿಂದ 176 ಜನರು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಳಿದಿದ್ದರು. ಇದರಲ್ಲಿ 96 ಜನ ಮಂಗಳೂರು,52 ಜನ ಉಡುಪಿ,28 ಜನ ಉತ್ತರ ಕನ್ನಡ ಜಿಲ್ಲೆಯವರಿದ್ದಾರೆ.

ಮಂಗಳೂರಿಗೆ ದುಬೈನಿಂದ ಬಂದ 14 ಜನರಿಗೆ ಸೋಂಕು ಸಾಧ್ಯತೆಗಳಿದ್ದು ಇದರಲ್ಲಿ ದುಬೈನಿಂದ ಬಂದವರು ಸೇರಿ ಒಟ್ಟು 16 ಜನರಿಗೆ ಸೋಂಕು ಹರಡಿರುವ ಸಾಧ್ಯತೆಗಳಿವೆ.

ವಿದೇಶ ದಿಂದ ಬಂದು ಮೇ 13 ರಂದು ಮಂಗಳೂರಿನಲ್ಲಿ ಕ್ವಾರಂಟೈನ್ ಆದ 96 ಜನರ ಜನರ ಸ್ವಾಬ್ ತಗೆಯಲಾಗಿತ್ತು.

ಇದರಲ್ಲಿ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವ್ಯಕ್ತಿಗೂ ಸೊಂಕು ಇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಕಾರವಾರದ ವ್ಯಕ್ತಿಗೆ ಫಾಸಿಟಿವ್!

ಮೇ12 ಕ್ಕೆ ದುಬೈ ನಿಂದ ಬಂದ 176 ಜನರ ಪೋಟೋ .

ಮೇ 12 ರಂದು ಮಂಗಳೂರಿನಲ್ಲಿ ಕ್ವಾರಂಟೈನ್ ನಲ್ಲಿದ್ದ ಕಾರವಾರ ಮೂಲದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎನ್ನಲಾಗುತ್ತಿದೆ.

ಮೇ.12 ರಂದು ವಿದೇಶದಿಂದ ಮಂಗಳೂರಿಗೆ ವಿಮಾನದಲ್ಲಿ ಪತ್ನಿ ಹಾಗೂ ಮಗುವಿನ ಜೊತೆ ಆಗಮಿಸಿದ್ದ ಕಾರವಾರ ಮೂಲದ ವ್ಯಕ್ತಿಯನ್ನು ಮಂಗಳೂರಿನಲ್ಲಿ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು.

ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ಆತನಲ್ಲಿ ಕೊರೋನಾ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಇನ್ನು ಆತನ ಪತ್ನಿ ಗರ್ಭಿಣಿಯಾಗಿದ್ದು ಮಗು, ಹಾಗೂ ಪತ್ನಿಯ ಗಂಟಲು ದ್ರವದ ಮಾದರಿಯನ್ನೂ ಪರೀಕ್ಷೆಗೆ ಸಹ ಕಳುಹಿಸಲಾಗಿದೆ.

ಇಂದು ಮಂಗಳೂರಿನಲ್ಲಿ 14 ಜನರಲ್ಲಿ ಸೊಂಕು ಫಾಸಿಟಿವ್ ಬರುವ ಸಾಧ್ಯತೆಗಳಿದ್ದು ಇದರಲ್ಲಿ ಕಾರವಾರದ ವ್ಯಕ್ತಿಗೂ ಫಲಿತಾಂಶ ಬರುವ ಸಾಧ್ಯತೆಗಳಿವೆ. ಮಧ್ಯಾಹ್ನ 12 ಗಂಟೆಯ ಬುಲೆಟಿನ್ ನಲ್ಲಿ ಈ ಬಗ್ಗೆ ಆರೋಗ್ಯ ಇಲಾಖೆ ಸ್ಪಷ್ಟಪಡಿಸಲಿದೆ.
Leave a Reply

Your email address will not be published. Required fields are marked *