ಫೆಬ್ರವರಿಗೆ ಬರಲಿದ್ದಾನೆ ಬಿಗ್ ಬಾಸ್|ಈಬಾರಿ ಇರಲಿದೆ ಹೊಸ ಲುಕ್.

354

ಕನ್ನಡವಾಣಿ ಸಿನಿಮಾ ಡೆಸ್ಕ್ :ಕಿಚ್ಚ ಸುದೀಪ್ ನಿರೂಪಣೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಫೆಬ್ರವರಿಯಿಂದ ಆರಂಭವಾಗಲಿದೆ ಎಂದು ಕಲರ್ಸ್ ಕನ್ನಡ ಹೇಳಿದೆ.

ಯಶಸ್ವಿಯಾಗಿ ಏಳು ಸೀಸನ್ ಗಳನ್ನು ಪೂರೈಸಿರುವ ಬಿಗ್ ಬಾಸ್ ಇದೀಗ ಎಂಟನೇ ಸೀಸನ್ ಅನ್ನು ಶುರು ಮಾಡುತ್ತಿದೆ.

ರಾಜ್ಯ ಪೊಲೀಸರಿಗೆ ಗುಡ್ ನ್ಯೂಸ್|ವಾರದ ರಜೆ ಕಡ್ಡಾಯ http://www.kannadavani.news/karnataka-police-leave-mandatory-circular-issued-bye-igp-karnataka-igp-praveen-sood/

ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲಾ ಹೋಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ.

ವೀಡಿಯೋ ನೋಡಿ:-

ಈ ಭಾರಿ ಕೂಡ ವಿಭಿನ್ನ ಫ್ರೋಮೋ ಮೂಲಕ ಬಿಗ್ ಬಾಸ್ ಸೀಸನ್ 8 ರ ಫ್ರೋಮೋ ಬಿಡುಗಡೆಯಾಗಿದೆ.

ವಿಭಿನ್ನ ಪ್ರೋಮೋ ಮೂಲಕ ಕಿಚ್ಚ ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಪ್ರೋಮೋದಲ್ಲಿ ನಂಬರ್ 8 ರ ಕಾನ್ಸೆಪ್ಟ್ ಇಟ್ಟುಕೊಂಡು ಬಿಗ್ ಬಾಸ್ ಫೆಬ್ರವರಿಯಿಂದ ಶುರುವಾಗ್ತಿದೆ ಎಂಬ ಸಂದೇಶ ನೀಡಿದ್ದಾರೆ ಕಿಚ್ಚ ಸುದೀಪ್.

ಸೀಸನ್ 1 ರಿಂದ ಇಲ್ಲಿವರೆಗಿನ ಪ್ರತೀ ಫ್ರೋಮೋಗಳ ತರನೇ ಕಿಚ್ಚ ಸುದೀಪ್ ಮತ್ತೆ ಡ್ಯಾಪರ್ ಲುಕ್ ನಲ್ಲಿ ಸಖತ್ ಮಿಂಚಿದ್ದಾರೆ.

ಫೆಬ್ರವರಿಯಿಂದ ಬಿಗ್ ಬಾಸ್ ಸೀಸನ್ 8 ಆರಂಭವಾಗಲಿದೆ ಎಂದು ಕಲರ್ಸ್ ವಾಹಿನಿಯ ಬ್ಯುಸಿನೆಸಗ್ ಹೆಡ್ ಪರಮೇಶ್ವರ್ ಗುಂಡ್ಕಲ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಮತ್ತೆ ಬರುತ್ತಿದ್ದು, ಈ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ದೊಡ್ಡ ಮನೋರಂಜನೆಯ ಕಿಕ್ ಸಿಗಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ