ಶಿರಸಿ,ಭಟ್ಕಳದಲ್ಲಿ ಕರೋನಾಕ್ಕೆ ಬಲಿ!

2025

ಕಾರವಾರ: ಕೊರೋನಾ ಸೋಂಕಿಗೆ ಓಳಗಾಗಿದ್ದ ಇಬ್ಬರು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೆಡಿಕಲ್ ಕಾಲೇಜಿನ ಕೋವಿಡ್ ವಾರ್ಡಿನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಶಿರಸಿ ತಾಲೂಕಿನ ಹಳ್ಳಿಯೊಂದರ 76 ವರ್ಷದ ವೃದ್ಧ ಹಾಗೂ ಭಟ್ಕಳದ 65 ವರ್ಷದ ವೃದ್ಧೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ‌.

ಶಿರಸಿ ತಾಲೂಕಿನ 76 ವರ್ಷದ ವೃದ್ಧ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಎನ್ನಲಾಗಿದ್ದು ಆತನಿಗೆ ಕೊರೋನಾ ಸಹ ದೃಢಪಟ್ಟಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕ್ರಿಮ್ಸ್ ಆಸ್ಪತ್ರೆಗೆ ಶಿರಸಿಯಿಂದ ರವಾನೆ ಮಾಡಲಾಗಿತ್ತು ಆದರೇ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.

ಇನ್ನು ಭಟ್ಕಳದ 65 ವರ್ಷದ ವೃದ್ಧೆ ಗೆ ಸಹ ಉಸಿರಾಟದ ಸಮಸ್ಯೆ ಹಾಗೂ ಮಧುಮೇಹದಿಂದ ಬಳಲುತ್ತಿದ್ದ ಕೊರೋನಾ ದೃಢಪಟ್ಟ ಹಿನ್ನಲೆಯಲ್ಲಿ ಕ್ರಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತಿದ್ದರು.ಆದರೇ ಇವರಿಗೂ ಸಹ ತೀವ್ರ ಉಸಿರಾಟದ ತೊಂದರೆಯಿಂದ ಇಂದು ಸಾವನ್ನಪ್ಪಿದ್ದಾರೆ.
ಒಟ್ಟು ಜಿಲ್ಲೆಯಲ್ಲಿ ಕರೋನಾ ದಿಂದ ಈವರೆಗೆ 10 ಜನರು ಸಾವು ಕಂಡಿದ್ದು ಈಗ 12 ಕ್ಕೆ ಏರಿಕೆಯಾಗಿದೆ. ಬಹುತೇಕರು ಅನೇಕ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರೇ ಆಗಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ