ಅಂಕೊಲದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಕರೋನಾ ಪಾಸಿಟಿವ್!

6575

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಪ್ರೌಢಶಾಲಾ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಲ್ಲಿ ಕರೋನಾ ಪಾಸಿಟಿವ್ ವರದಿಯಾಗಿದೆ. ಇಂದು ಜಿಲ್ಲೆಯ ಅಂಕೋಲ ತಾಲೂಕಿನ ಅಗಸೂರು (.ಕೆ.ಪಿ.ಎಸ್) ಕರ್ನಾಟಕ ಪಬ್ಲಿಕ್ ಸ್ಕೂಲ್ 7 ಜನ ವಿದ್ಯಾರ್ಥಿಗಳು ,3 ಶಿಕ್ಷಕರು ಬಾವಿಕೇರಿ -1,ಕೃಷ್ಣಾಪುರ -1 ಶಾಲೆ ಶಿಕ್ಷಕರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.

ಅಗಸೂರಿನ ಶಿಕ್ಷಕಿಯ ಮೂಲಕ 7 ಜನ ವಿದ್ಯಾರ್ಥಿಗಳಿಗೆ ಹಾಗೂ ಒಟ್ಟು 5 ಜನ ಶಿಕ್ಷಕರಿಗೆ ಕರೋನಾ ಸೊಂಕು ತಗಲಿದೆ. ಈ ಹಿನ್ನಲೆಯಲ್ಲಿ ಏಪ್ರಿಲ್ 1 ರ ವರೆಗೆ ಅಂಕೋಲದ ಅಗಸೂರು ಶಾಲೆ ಯನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ರವರು ಆದೇಶ ಮಾಡಿದ್ದಾರೆ. 247 ಜನ ವಿದ್ಯಾರ್ಥಿಗಳು, 16 ಜನ ಶಿಕ್ಷಕರ ಗಂಟಲು ದ್ರವ ಪರೀಕ್ಷೆ ಗೆ ರವಾನೆ ಮಾಡಲಾಗಿದ್ದು ಫಲಿತಾಂಶಚಬರಬೇಕಿದೆ.

ಶಾಲೆಗಳಿಗೆ ಸ್ಯಾನಿಟೈಜ್ ವ್ಯವಸ್ತೆ.

ಸೊಂಕು ಪತ್ತೆಯಾದ ಶಾಲೆಗಳಿಗೆ ಶಿಕ್ಷಣ ಇಲಾಖೆ ಸ್ಯಾನಿಟೈಜ್ ವ್ಯವಸ್ಥೆಯನ್ನು ಮಾಡಿದೆ. ಇದರ ಜೊತೆಗೆ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಕಟ್ಟೆಚ್ಚರ ವಹಿಸಲು ಶಿಕ್ಷಣಾಧಿಕಾರಿ ಹರೀಶ್ ಗಾಂವ್ಕರ್ ರವರು ಸೂಚಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ