ಕೊರೋನಾ ವಾರಿಯರ್ಸ ಗೆ ಭಟ್ಕಳದಲ್ಲೇ ಸಿದ್ಧಗೊಳ್ಳುತ್ತಿದೆ ರಕ್ಷಣಾ ಕವಚ!ಹಗಲು ರಾತ್ರಿ ಎನ್ನದೇ ನಡೆಯುತ್ತಿದೆ ಕಾರ್ಮಿಕರಿಂದ ಕಿಟ್ ತಯಾರಿಕೆ

1365

ಕಾರವಾರ :- ದೇಶಾಧ್ಯಾಂತ ಕೊರೋನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಘೋಷಣೆಯಾಗುತಿದ್ದಂತೆ ಬಹುತೇಕ ಎಲ್ಲಾ ಕಂಪೆನಿಗಳು, ವ್ಯವಹಾರ ಕೇಂದ್ರಗಳು, ಕಾರ್ಮಿಕರನ್ನು ಅವಲಂಬಿಸಿರುವ ಫ್ಯಾಕ್ಟರಿಗಳು ಬಂದ್ ಆಗಿವೆ. ಇಡೀ ದೇಶದಲ್ಲಿ ಕರೋನಾ ವಿರುದ್ಧ ಹೋರಾಟ ಮಾಡಲು ಸಿದ್ದವಾಗುತಿದ್ದಂತೆ ಮಾಸ್ಕಗಳು,ಸ್ಯಾನಿಟೈದರ್ ಹಾಗೂ ಪರ್ಸನಲ್ ಪ್ರೊಟಕ್ಷನ್ ಕಿಟ್ ಗಳ ಬೇಡಿಕೆ ಹೆಚ್ಚಾಗಿ ಸಿಗದಂತಾಯಿತು.

ಆದರೆ,ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆಯ ಧ್ರುತಿ ಸರ್ಜಿಕಲ್ ಸೊಲ್ಯುಶನ್ ಪ್ರೈವೇಟ್ ಲಿಮಿಟೆಡ್‍ನ ಸರ್ಜಿಕಲ್ ಫ್ಯಾಕ್ಟರಿಯಲ್ಲಿ ಕೊರೋನಾ ಕರ್ತವ್ಯನಿರತ ವೈದ್ಯರು, ನರ್ಸ್ ಹಾಗೂ ಆಸ್ಪತ್ರೆಗಳಿಗೆ ಅವಶ್ಯಕವಾಗಿರುವ ಕಿಟ್ ತಯಾರಿಕೆಯಲ್ಲಿ 24 ಘಂಟೆಗಳ ಶ್ರಮದಾನ ಮಾಡುವ ಮೂಲಕ ಕೊರೋನಾ ಹೋರಾಟಕ್ಕೆ ಶ್ರಮಿಸುತಿದ್ದಾರೆ.

ಕಿಟ್ ತಯಾರಿಕೆ ಹೇಗೆ ನಡೆಯುತ್ತಿದೆ ಎನ್ನುವುದನ್ನು ವಿಡಿಯೋ ನೋಡಿ:-

https://youtu.be/mmrQFPgJ4v8

ಇಲ್ಲಿನ ಸಿಬ್ಬಂದಿಗಳು ದೇಶ ಸೇವೆ ಹಾಗೂ ಆಪತ್ಕಾಲದಲ್ಲಿ ನೆರವಾಗುವ ಉದ್ದೇಶದಿಂದ ಹಗಲಿರುಳು ಕಿಟ್ ತಯಾರಿಕೆಯಲ್ಲಿ ಪರಿಶ್ರಮಪಡುತ್ತಿದ್ದಾರೆ. ಬೆಳಕೆಯ ಧೃತಿ ಸರ್ಜಿಕಲ್‍ನ ಈಗಾಗಲೇ 25 ಸಾವಿರ ಪರ್ಸನಲ್ ಪ್ರೊಟೆಕ್ಟೀವ್ ಇಕ್ವೀಪ್‍ಮೆಂಟ್ಸ್ (ಪಿಪಿಇ) ತಯಾರಿಸಲಾಗಿದ್ದು, ದೇಶದ ನಾನಾ ಕಡೆಯಿಂದ ಹೆಚ್ಚಿನ ಬೇಡಿಕೆ ಬಂದ ಹಿನ್ನಲೆಯಲ್ಲಿ ಪೂರೈಕೆ ಮಾಡಲು ಶ್ರಮಿಸುತ್ತಿದೆ.

ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಸಹಕಾರದಿಂದ ಕಿಟ್ ತಯಾರಿಕೆಗೆ ಕಚ್ಚಾ ವಸ್ತುಗಳು ಹಾಗೂ ರಪ್ತು ಮಾಡಲು ಎಲ್ಲಾ ಸಹಕಾರ, ಬೆಂಬಲ ವ್ಯಕ್ತವಾಗಿದೆ.

ಚೀನಾದಲ್ಲಿ 2 ತಿಂಗಳ ಹಿಂದೆ ಕೊರೋನಾ ಕಂಡುಬಂದಾಗಲೇ ಬೆಂಗಳೂರಿನಿಂದ ಇದಕ್ಕೆ ಬೇಡಿಕೆ ಬಂದಿತ್ತು. ಎರಡು ತಿಂಗಳಿಂದ ಇದನ್ನು ತಯಾರಿಸುತ್ತಿದ್ದು, ಪ್ರಸ್ತುತ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಿಂದ ವ್ಯಾಪಕ ಬೇಡಿಕೆಯಿದ್ದು ತಯಾರಿಸಿಕೊಡಲಾಗುತಿದ್ದು ಹೊರರಾಜ್ಯ ಕೇರಳ ಮುಂತಾದ ರಾಜ್ಯಗಳಿಗೂ ರವಾನೆ ಮಾಡಲಾಗುತ್ತಿದೆ.

ಸದ್ಯ ಪ್ರಧಾನ ಮಂತ್ರಿ ಕಾರ್ಯಾಲಯದಿಂದಲೂ ಸಂಪರ್ಕಿಸಿ ತಯಾರಿಕೆಗೆ ಸಹಕರಿಸುತಿದ್ದು ಬೇಡಿಕೆ ಸಹ ನೀಡಲಾಗಿದೆ.

ಈ ಹಿನ್ನಲೆಯಲ್ಲಿ ಇಲ್ಲಿನ ಕಾರ್ಮಿಕರು 24 ಘಂಟೆ ಕೆಲಸ ಮಾಡುತಿದ್ದಾರೆ. ಒಂದು ಸಾವಿರದಿಂದ ಒಂದೂವರೆ ಸಾವಿರದ ಗುಣಮಟ್ಟದ ಕಿಟ್ ಇದಾಗಿದ್ದು ಅಲ್ಪ ಮೊತ್ತದಲ್ಲಿ ಸೇವಾ ರೂಪದಲ್ಲಿ ತಯಾರಿಸಿ ಕೊಡಲಾಗುತ್ತಿದೆ.

ವೈದ್ಯರಿಗೆ ಗ್ಲೌಸ್, ತಲೆಗೆ ಧರಿಸಿಸುವ ಕ್ಯಾಪ್, ಮಾಸ್ಕ್, ಗೌನ್, ಶೂ ಲೆಗ್ಗಿನ್ಸ್, ಏಪ್ರಾನ್‍ಗಳು ಕೂಡ ಇಲ್ಲಿ ಸಿದ್ಧಗೊಳ್ಳುತ್ತಿವೆ. ಇದನ್ನು ವಿವಿಧ ಸ್ಥರಗಳಲ್ಲಿ ಇಲ್ಲಿ ಉತ್ಪಾದಿಸಲಾಗುತ್ತಿದೆ. ಇಲ್ಲಿನ ನೌಕರರ ಆರೋಗ್ಯವನ್ನು ಮನದಲ್ಲಿರಿಸಿ ಅವರಿಗೆ ವೈದ್ಯಕೀಯ ಚೆಕ್ ಅಪ್, ಧರಿಸಲು ಮಾಸ್ಕ್, ಗ್ಲೌಸ್, ತಲೆಗೆ ಸ್ಕಾರ್ಪ್ ನೀಡಲಾಗುತ್ತಿದೆ. ಹೈಜಿನ್ ಉದ್ದೇಶಕ್ಕೆ ಬಿಸಿ ನೀರು ನೀಡಲಾಗುತ್ತಿದ್ದು, ತೊಳೆಯಲು ಹ್ಯಾಂಡ್ ಸ್ಯಾನಿಟೈಸರ್ ನೀಡಲಾಗುತ್ತಿದೆ.

ಕಾರ್ಮಿಕ ಉತ್ತೇಜನ

ಕಳೆದ ಮೂರು ವರ್ಷದ ಹಿಂದೆ ತಯಾರಾದ ಸರ್ಜಿಕಲ್ ಫ್ಯಾಕ್ಟರಿ ಇದಾಗಿದ್ದು ಹೆಚ್ಚಿನ ಬೇಡಿಕೆ ಇರುವುದರಿಂದ ಕೆಲಸಗಾರರ ಸಮಸ್ಯೆ ಎದುರಾಗಿದ್ದರೂ ಅವರಿಗೆ ಉತ್ತೇಜನ ನೋಡಿ ಕೆಲಸಗಾರರಿಗೆ ಎಲ್ಲಾ ರೀತಿಯ ಮೂಲಸೌಕರ್ಯಗಳ ಜೊತೆಗೆ ಉತ್ತಮ ಸಂಬಳ,ಓಟಿ, ಆರೋಗ್ಯ ವಿಮಾ, ಸೇವಾ ಭದ್ರತೆ ಸೌಲಭ್ಯವನ್ನು ಕಲ್ಪಿಸಿ ಭದ್ರತೆ ವದಗಿಸಲಾಗಿದೆ.

ಪ್ರತಿ ದಿನ ಮುಂಜಾನೆ 8.30ರಿಂದ ಸಂಜೆ 5 ಗಂಟೆಯವರೆಗೆ ನಿತ್ಯ ಕೆಲಸದ ಅವಧಿ ನಡೆಯುತಲಿದ್ದು, ಈ ಕೊರೋನಾ ಮಹಾಮಾರಿ ಆರಂಭದ ದಿನದಿಂದ ಇಪ್ಪನ್ನಾಲ್ಕು ಘಂಟೆ ಕೆಲಸ ಮಾಡುತ್ತಿದ್ದಾರೆ. ಒಟ್ಟು 150ಕ್ಕೂ ಅಧಿಕ ಕಾರ್ಮಿಕರು ವಿವಿಧ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸರ್ಜಿಕಲ್ ಫ್ಯಾಕ್ಟರಿಗೆ ಬೆನ್ನೆಲುಬಾಗಿ ಕಾರ್ಮಿಕರು ನಿಂತಿದ್ದಾರೆ. ಭಟ್ಕಳ ಸುತ್ತಮುತ್ತ ಸ್ಥಳೀಯವಾಗಿ ಯುವತಿಯರು, ಯುವಕರು ಸರ್ಜಿಕಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಎಲ್ಲರು ನುರಿತು ಕೆಲಸಗಾರರಾಗಿದ್ದಾರೆ. ಈ ಕೊರೋನಾ ಮಹಾಮಾರಿ ಆರಂಭದ ದಿನದಿಂದ ಬಿಹಾರ ರಾಜ್ಯದಿಂದಲೂ ಫ್ಯಾಕ್ಟರಿಯಲ್ಲಿ ಕಾರ್ಮಿಕರನ್ನು ನೇಮಿಸಿಕೊಂಡು ಕೆಲಸ ಮಾಡಿಸುತ್ತಿದ್ದು ದೇಶಕ್ಕೆ ತಮ್ಮ ಸೇವೆ ನೀಡುತಿದ್ದಾರೆ.

ಕುಮಟಾ ಪುರಸಭೆ ಪ್ರಕಟಣೆ:-

https://youtu.be/8OKHCPqHtBcನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ