ಶಿವಮೊಗ್ಗ ದಲ್ಲಿ ಚಿಕಿತ್ಸೆ ನೀಡಿದ ವೈದ್ಯಗೆ ಕರೋನಾ ಸೊಂಕು!

955

ಶಿವಮೊಗ್ಗ :- ಶಿವಮೊಗ್ಗದಲ್ಲಿ 8 ಜನ ಪೊಲೀಸರು, ಓರ್ವ ವೈದ್ಯೆ ಸೇರಿದಂತೆ 9 ಜನರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ.ಬೆಂಗಳೂರಿನ ಪಾದರಾಯನಪುರ ಮತ್ತು ಶಿವಾಜಿ ನಗರದಲ್ಲಿ ಕರ್ತವ್ಯ ನಿರ್ವಹಿಸಿ ವಾಪಾಸ್ಸಾಗಿದ್ದ ಫೊಲೀಸರಲ್ಲಿ ದೃಡಪಟ್ಟಿದೆ.
ಕಳೆದ ತಿಂಗಳು ಶಿವಮೊಗ್ಗದ 22 ಕೆ.ಎಸ್.ಆರ್.ಪಿ. ಪೊಲೀಸರು ಕರ್ತವ್ಯಕ್ಕಾಗಿ ಬೆಂಗಳೂರಿಗೆ ತೆರಳಿ ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಶಿವಮೊಗ್ಗಕ್ಕೆ ವಾಪಾಸ್ ಬಂದಿದ್ದರು.ಮರಳಿ ಬಂದ ಕೂಡಲೇ ಇವರಿಗೆ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು.

ಮೊದಲ ದಿನ ಮೂವರು ಕೆ.ಎಸ್.ಆರ್.ಪಿ. ಪೊಲೀಸರಲ್ಲಿ ಸೋಂಕು ಪತ್ತೆಯಾಗಿತ್ತು.
ಇದೀಗ ಎ.ಎಸ್ .ಐ ಹಾಗೂ ಮತ್ತೆ ಎಂಟು ಪೊಲೀಸರಲ್ಲಿ ಸೋಂಕು ಧೃಡಪಟ್ಟಿದೆ.

ಇದಲ್ಲದೇ, ಕುಂಸಿಯ ಬಾಳೆಕೊಪ್ಪದ P-1305 ವ್ಯಕ್ತಿಗೆ ಆಯನೂರಿನ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯೆ ಸೋಂಕು ಪೀಡಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಈ ವೈದ್ಯೆಗೂ ಸೋಂಕು ತಗಲಿದ್ದು ದೃಡಪಟ್ಟಿದೆ.

ಇದೀಗ ವೈದ್ಯೆಗೆ ಸೋಂಕು ತಗುಲಿದ್ದು, ಮೆಗ್ಗಾನ್ ಕೋವಿಡ್-19 ಆಸ್ಪತ್ರೆಗೆ ದಾಖಲುಮಾಡಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ