ದಾಂಡೇಲಿಯಲ್ಲಿ ಮೊಮ್ಮಗನಿಗೆ ಕರೋನಾ ಸೊಂಕು- ಖಿನ್ನತೆಗೊಳಗಾದ ಅಜ್ಜಿ ಆತ್ಮಹತ್ಯೆ!

1388

ಕಾರವಾರ :- ಕರೋನಾ ಸೊಂಕಿತನ ಸಂಪರ್ಕ ಹೊಂದುವ ಮೂಲಕ ಕ್ವಾರಂಟೈನ್ ಆಗಿದ್ದ ವೃದ್ಧೆಯೊಬ್ಬಳು ತನಗೂ ಕರೋನಾ ಸೊಂಕು ಬಂದಿದೆಎಂದು ಇಸೋಲೇಟೆಡ್ ವಾರ್ಡ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.
ಲಕ್ಷ್ಮಿ( -62) ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿಯಾಗಿದ್ದು ಮಹರಾಷ್ಟ್ರ ದಿಂದ ಬಂದಿದ್ದ ಈಕೆಯ ಮೊಮ್ಮಗ ಸೊಂಕಿತ ಸಂಖ್ಯೆ 1313 ಎಂಬುವವರಿಗೆ ಮೊನ್ನೆ ಕರೋನಾ ಸೊಂಕು ದೃಡಪಟ್ಟಿತ್ತು. ಈ ಹಿನ್ನಲೆಯಲ್ಲಿ ಈತನ ಸಹೋದರ ಹಾಗೂ ಆತ್ಮ ಹತ್ಯೆ ಮಾಡಿಕೊಂಡ ವೃದ್ಧೆ ಲಕ್ಷ್ಮಿ ಸೇರಿ ಮೂರು ಜನರನ್ನು ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಇಸೋಲೇಟೆಡ್ ವಾರ್ಡ ನಲ್ಲಿ ಇಡಲಾಗಿತ್ತು.

ಮೊಮ್ಮಗನಿಗೆ ಸೊಂಕು ಬಂದಂತೆ ತನಗೂ ಬಂದಿದೆ ಎಂದು ಖಿನ್ನತೆಗೊಳಗಾಗಿದ್ದ ಈಕೆ ಇಂದು ವಾರ್ಡ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ದಾಂಡೇಲಿ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.ದಾಂಡೇಲೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ