BREAKING NEWS
Search

ಶಿರಸಿಯಲ್ಲಿ ಕರೋನಾ ಬಾರದಂತೆ ಕಾಸರ್ಕನ ಚಕ್ಕೆ ಸೇವಿಸಿ ವ್ಯಕ್ತಿ ಸಾವು!

8114

ಕಾರವಾರ:- ಕರೋನಾ ಸೊಂಕು ಬಾರದಂತೆ ತಂದೆ ಮಗ ಇಬ್ಬರು ಆಯುರ್ವೇದ ಔಷಧಿ ಎಂದು ವಿಷ ಪೂರಿತ ಕಾಸರ್ಕನ ಚಕ್ಕೆ ಔಷಧಿ ಸೇವಿಸಿದ್ದು ಮಗ ಸಾವುಕಂಡು ತಂದೆ ಗಂಭೀರ ಅಸ್ವಸ್ಥನಾದ ಘಟನೆ
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ರಾಮನ ಬೈಲಿನಲ್ಲಿ ನಡೆದಿದೆ.

ಪ್ರಾನ್ಸಿಸ್ ರೇಘೋ( 42) ಸಾವು ಕಂಡ ವ್ಯಕ್ತಿಯಾಗಿದ್ದು ನೆಕ್ಲಾಂ ಅಂಥೋನಿ( 70) ಗಂಭೀರವಾಗಿ ಅಸ್ವಸ್ಥಗೊಂಡ ವೃದ್ಧ ತಂದೆಯಾಗಿದ್ದಾರೆ. ಗಂಭೀರವಾಗಿ ಅಸ್ವಸ್ಥಗೊಂಡ ನೆಕ್ಲಾಂ ಅಂಥೋನಿ ಶಿರಸಿ ಸರ್ಕಾರಿ ಆಸ್ವತ್ರೆಗೆ ದಾಖಲುಮಾಡಿದ್ದು ಶಿರಸಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತಂದೆ ಮಗರಿಬ್ಬರು ಉಸಿರಾಟದ ತೊಂದರೆ ಹಾಗೂ ಅಲ್ಪ ಕೆಮ್ಮು ಹೊಂದಿದ್ದರು ಎಂದು ಮಾಹಿತಿ ಬಂದಿದ್ದು ಈ ಲಕ್ಷಣದಿಂದ ಕರೋನಾ ಬರಬಹುದೆಂದು ಹೆದರಿ ತಾವೇ ಸ್ವತಹಾ ಯಾರದ್ದೋ ಮಾತು ಕೇಳಿ ವಿಷ ಪೂರಿತ ಕಾಸರ್ಕನ ಚಕ್ಕೆಯ ಲೇಹ ಮಾಡಿ ಸೇವಿಸಿದ್ದಾರೆ ಎಂದು ತಿಳಿದುಬಂದಿದ್ದು ಪೊಲೀಸರು ಮಾಹಿತಿ ಕಲೆಹಾಕುತಿದ್ದು ಹೆಚ್ಚಿನ ವಿವರ ತಿಳಿದುಬರಬೇಕಿದೆ.
Leave a Reply

Your email address will not be published. Required fields are marked *